1950ರ ಉಡುಗೆಯಲ್ಲಿ ಗರ್ಭಿಣಿ ಸೆರೆನಾ ಮಿಂಚು
Team Udayavani, Aug 8, 2017, 12:40 PM IST
ನ್ಯೂಯಾರ್ಕ್: ವಿಶ್ವದ ಮಾಜಿ ನಂ.1 ಶ್ರೇಯಾಂಕಿತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಗರ್ಭಿಣಿಯಾಗಿರುವುದು ಹಳೆ ಸುದ್ದಿ. ಇದೇ ಸಂಭ್ರಮಲ್ಲಿರುವ ಸೆರೆನಾ 1950ರ ಕಾಲದಲ್ಲಿ ಜನರು ತೊಡುವ ಉಡುಗೆಯನ್ನು ತೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ ಲೋಡ್ ಮಾಡಿದ್ದು, ಭಾರೀ ಪ್ರತಿಕ್ರಿಯೆಗಳು ಬರುತ್ತಿವೆ.
ಮೊದಲ ಮಗುವಿಗಾಗಿ ಕಾತರದಿಂದಿರುವ ಸೆರೆನಾ ತಮ್ಮ ಕುಟುಂಬ ಮತ್ತು ಸ್ನೇಹಿತರ ಜತೆ ಸಂಭ್ರಮ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸೆರೆನಾ ಹಳದಿ ಸ್ಕರ್ಟ್, ಕಪ್ಪು ಟಾಪ್ ಧರಿಸಿ ತಮ್ಮ ಕುಟುಂಬದವರು ಮತ್ತು ಸ್ನೇಹಿತರ ಜತೆ ಹಳೆಯ ಕಾರಿನ ಎದುರು ನಿಂತು ಚಿತ್ರ ತೆಗೆಸಿಕೊಂಡಿದ್ದಾರೆ. ಸೆರೆನಾ ಸ್ನೇಹಿತೆಯರು ಕೂಡ ಅದೇ ರೀತಿ 1950ರ ಮಾದರಿಯ ಉಡುಗೆಯನ್ನೇ ತೊಟ್ಟಿದ್ದಾರೆ. ಸೆರೆನಾ ಗರ್ಭಿಣಿಯಾಗಿರುವ ಬಗ್ಗೆ ಕಳೆದ ಏಪ್ರಿಲ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಸೆಲ್ಫಿ ಚಿತ್ರಹಾಕಿ ಪ್ರಕಟಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೆರೆನಾ, ನನ್ನ ಮಗು ಹೆಣ್ಣಾಗಲಿ, ಗಂಡಾಗಲಿ ನಾನು ಖುಷಿ ಪಡುತ್ತೇನೆ. ಈ ಬಗ್ಗೆ ಯಾವುದೇ ಷರತ್ತಿಲ್ಲ. ನಾನು ಯಾವತ್ತಿಗೂ ಮಹಿಳೆಯರ ಹಕ್ಕಿಗಾಗಿ ಧ್ವನಿ ಎತ್ತುವವಳು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.