ಸೈನಾ, ಸಿಂಧು, ಶ್ರೀಕಾಂತ್ಗೆ ಗರಿಷ್ಠ ಬೆಲೆ
Team Udayavani, Oct 9, 2018, 12:21 PM IST
ಹೊಸದಿಲ್ಲಿ: ಸೋಮವಾರ ನಡೆದ ಪ್ರಸಕ್ತ ಋತುವಿನ “ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್’ ಹರಾಜಿನಲ್ಲಿ (ಪಿಬಿಎಲ್) ಭಾರತದ ತಾರಾ ಆಟಗಾರರಾದ ಸೈನಾ ನೆಹ್ವಾಲ್, ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್ ಗರಿಷ್ಠ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಇವರೆಲ್ಲರಿಗೂ 80 ಲಕ್ಷ ರೂ. ಮೊತ್ತ ಲಭಿಸಿದೆ. ಹರಾಜು ನಿಯಮದ ಪ್ರಕಾರ, ಇದು ಆಟಗಾರರಿಗೆ ಲಭಿಸುವ ಗರಿಷ್ಠ ಮೊತ್ತವಾಗಿದೆ.
ಪಿ.ವಿ. ಸಿಂಧು ಹಾಲಿ ಚಾಂಪಿಯನ್ “ಹೈದರಾಬಾದ್ ಹಂಟರ್’ ತಂಡದ ಪಾಲಾದರು. ಮೊದಲ ಸುತ್ತಿನಲ್ಲಿ ಮಾರಾಟವಾಗದೇ ಉಳಿದ ಸೈನಾ ನೆಹ್ವಾಲ್ ಅವರನ್ನು ಬಳಿಕ “ನಾರ್ತ್ ಈಸ್ಟರ್ನ್ ವಾರಿಯರ್’ ಫ್ರಾಂಚೈಸಿ 80 ಲಕ್ಷ ರೂ. ಮೊತ್ತಕ್ಕೆ ಖರೀದಿಸಿತು.
ಪುರುಷರ ವಿಭಾಗದ ಹರಾಜಿನಲ್ಲಿ ಕೆ. ಶ್ರೀಕಾಂತ್ ಮತ್ತು ಎಚ್.ಎಸ್. ಪ್ರಣಯ್ ಕೂಡ 80 ಲಕ್ಷ ರೂ. ಗಳಿಸಿದರು. ಶ್ರೀಕಾಂತ್ “ಬೆಂಗಳೂರು ರ್ಯಾಪ್ಟರ್’ ಪಾಲಾದರೆ, ಪ್ರಣಯ್ ಅವರನ್ನು “ಡೆಲ್ಲಿ ಡ್ಯಾಶರ್’ ಖರೀದಿಸಿತು. ಭಾರತದ “ಯಂಗ್ ಸೆನ್ಸೇಶನ್’ ಲಕ್ಷ್ಯ ಸೇನ್ 11 ಲಕ್ಷ ರೂ.ಗೆ “7 ಏಸಸ್ ಪುಣೆ’ ತಂಡದ ಪಾಲಾದರೆ, ಸೌರಭ್ ವರ್ಮ ಅವರನ್ನು 16 ಲಕ್ಷ ರೂ.ಗೆ “ಅಹ್ಮದಾಬಾದ್ ಸ್ಮ್ಯಾಶ್ ಮಾಸ್ಟರ್’ ಖರೀದಿಸಿತು.
ವಿದೇಶಿಯರಿಗೂ ಗರಿಷ್ಠ ಬೆಲೆ
ವಿದೇಶಿ ತಾರಾ ಆಟಗಾರರಾದ ಹಾಲಿ ಒಲಿಂಪಿಕ್ ಚಾಂಪಿಯನ್ ಕ್ಯಾರೋಲಿನಾ ಮರಿನ್, ಡೆನ್ಮಾರ್ಕ್ನ
ವಿಕ್ಟರ್ ಅಕ್ಸೆಲ್ಸೆನ್, ದಕ್ಷಿಣ ಕೊರಿಯಾದ ಸುಂಗ್ ಜಿ ಹ್ಯುನ್, ಲೀ ಯಾಂಗ್ ಡೆ ಅವರಿಗೂ 80 ಲಕ್ಷ ರೂ. ಲಭಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.