ಟಿ20 ವಿಶ್ವಕಪ್‌ಗೆ ಸಿದ್ಧತೆ; ಭಾರತ-ಆಸ್ಟ್ರೇಲಿಯ ಟಿ20 ಸರಣಿ ಇಂದಿನಿಂದ
Team Udayavani, Sep 20, 2022, 8:00 AM IST
ಮೊಹಾಲಿ: ಮುಂಬರುವ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುವ ಸಲುವಾಗಿ ಭಾರತ ಮತ್ತು ಆಸ್ಟ್ರೇಲಿಯ ತಂಡಗಳು ಮಂಗಳವಾರದಿಂದ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಈ ಸರಣಿಯಲ್ಲಿ ಭಾಗವಹಿಸಲು ಆಸ್ಟ್ರೇಲಿಯ ತಂಡವು ಈಗಾಗಲೇ ಭಾರತದಲ್ಲಿ ಇದ್ದು ಮೊಹಾಲಿಯಲ್ಲಿ ತರಬೇತಿ ನಡೆಸುತ್ತಿದೆ.
ಈ ಸರಣಿಯ ಮೊದಲ ಪಂದ್ಯವು ಮಂಗಳವಾರ ಮೊಹಾಲಿಯ ಇಂದರ್‌ಜಿತ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯ ಲಿದ್ದು ಸಂಜೆ 7.30ಕ್ಕೆ ಆರಂಭವಾಗಲಿದೆ. ಸರಣಿಯ ಇನ್ನುಳಿದ ಎರಡು ಪಂದ್ಯಗಳು ಅನುಕ್ರಮವಾಗಿ ನಾಗ್ಪುರ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿದೆ. ಈ ಸರಣಿಯ ಬಳಿಕ ಭಾರತೀಯ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ ಆಡಲಿದೆ.
ಭಾರತೀಯ ತಂಡವನ್ನು ರೋಹಿತ್ ಶರ್ಮ ಮತ್ತು ಆಸ್ಟ್ರೇಲಿಯ ತಂಡವನ್ನು ಆರನ್ ಫಿಂಚ್ ಮುನ್ನಡೆಸಲಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯ ಇಷ್ಟರ ವರೆಗೆ 23 ಟಿ20 ಪಂದ್ಯಗಳಲ್ಲಿ ಮುಖಾ ಮುಖೀಯಾಗಿದ್ದು ಭಾರತ 13ರಲ್ಲಿ ಗೆಲುವು ಸಾಧಿಸಿದೆ. ಸಮಗ್ರವಾಗಿ ಆಸ್ಟ್ರೇಲಿಯ ಇಷ್ಟರವರೆಗೆ 162 ಟಿ20 ಪಂದ್ಯಗಳನ್ನಾಡಿದ್ದು 85ರಲ್ಲಿ ಗೆದ್ದಿದ್ದರೆ 71 ಪಂದ್ಯಗಳಲ್ಲಿ ಸೋತಿದೆ. ಇದೇ ವೇಳೆ ಭಾರತ 174 ಟಿ20 ಪಂದ್ಯಗಳಲ್ಲಿ ಆಡಿದ್ದು 111ರಲ್ಲಿ ಜಯ ಸಾಧಿಸಿದ್ದರೆ 55ರಲ್ಲಿ ಸೋಲನ್ನು ಕಂಡಿದೆ. ಈ ಸಂಖ್ಯೆಯನ್ನು ಗಮನಿಸಿದರೆ ಟಿ20ಯಲ್ಲಿ ಭಾರತವು ಆಸ್ಟ್ರೇಲಿಯಕ್ಕಿಂತ ಬಲಿಷ್ಠವಾಗಿದೆ ಎಂಬು ದನ್ನು ಹೇಳಬಹುದು. ಮಾತ್ರವಲ್ಲದೇ ಈ ಸರಣಿ ಭಾರತದಲ್ಲಿ ನಡೆಯುವ ಕಾರಣ ಭಾರತ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.
3ನೇ ಕ್ರಮಾಂಕದಲ್ಲಿ ಸ್ಮಿತ್
ಗಾಯಗೊಂಡಿರುವ ಮಿಚೆಲ್ ಮಾರ್ಷ್ ಈ ಸರಣಿಯಲ್ಲಿ ಆಡುವು ದಿಲ್ಲ. ಅವರ ಬದಲಿಗೆ ಸ್ಟೀವನ್ ಸ್ಮಿತ್ 3ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ ಎಂದು ಆರನ್ ಫಿಂಚ್ ಹೇಳಿದ್ದಾರೆ. ಆದರೆ ಸ್ಮಿತ್ ಅವರು ವಿಶ್ವಕಪ್‌ನ ಪ್ರಥಮ ಆಯ್ಕೆಯ ಹನ್ನೊಂದರ ಬಳಗದಲ್ಲಿ ಸೇರಿಕೊಳ್ಳುವುದು ಅನುಮಾನವೆಂದು ಹೇಳಲಾಗಿದೆ.
ಸಂಭಾವ್ಯ ತಂಡಗಳು
ಭಾರತ:
ಕೆಎಲ್ ರಾಹುಲ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರಿಷಬ್ ಪಂತ್/ದಿನೇಶ್ ಕಾರ್ತಿಕ್, ಸೂರ್ಯಕುಮಾರ್ ಯಾದವ್, ಹಾರ್ದಿಇಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಆರ್. ಅಶ್ವಿನ್/ಯಜುವೇಂದ್ರ ಚಹಲ್, ಹರ್ಷಲ್ ಪಟೇಲ್, ಜಸ್‌ಪ್ರೀತ್ ಬುಮ್ರಾ
ಆಸ್ಟ್ರೇಲಿಯ:
ಆರನ್ ಫಿಂಚ್, ಮ್ಯಾಥ್ಯೂ ವೇಡ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಕ್ಯಾಮರಾನ್ ಗ್ರೀನ್, ಆಸ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಡೇನಿಯಲ್ ಸ್ಯಾಮ್ಸ್, ಆ್ಯಡಂ ಝಂಪ, ಜೋಶ್ ಹ್ಯಾಝೆಲ್‌ವುಡ್.
ಪಂದ್ಯ ಆರಂಭ: ಸಂಜೆ 7.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
National Hockey; ಕರ್ನಾಟಕಕ್ಕೆ ಜಯ
Australia ಗೆಲುವಿಗೆ ಕಮಿನ್ಸ್ ನೆರವು: ಪಾಕಿಸ್ಥಾನ 203; ಆಸೀಸ್ 8 ವಿಕೆಟಿಗೆ 204
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Football ಮೈದಾನಕ್ಕೆ ಬಡಿದ ಸಿಡಿಲು; ಆಟಗಾರ ಮೃ*ತ್ಯು, ಹಲವರಿಗೆ ಗಾಯ
BGT Series: ಇಂಡಿಯಾ ಎ ಪಂದ್ಯಕ್ಕಾಗಿ ಆಸೀಸ್ ಗೆ ಹೊರಟ ಕೆಎಲ್ ರಾಹುಲ್, ಜುರೆಲ್
MUST WATCH
ಹೊಸ ಸೇರ್ಪಡೆ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.