ಯುಎಸ್ ಓಪನ್ ಆಯೋಜಿಸಲು ಸಿದ್ಧತೆ
Team Udayavani, Apr 3, 2020, 5:45 AM IST
ನ್ಯೂಯಾರ್ಕ್: ನ್ಯಾಶನಲ್ ಟೆನಿಸ್ ಸೆಂಟರ್‌ನ ಒಳಾಂಗಣ ಅಂಗಣಗಳಲ್ಲಿ ಕೋವಿಡ್ 19 ಸೋಂಕಿತ ರೋಗಿಗಳಿಗಾಗಿ ತಾತ್ಕಾಲಿಕ ಆಸ್ಪತ್ರೆಯಾಗಿ ಮಾರ್ಪಾಟು ಮಾಡಲಾಗಿದ್ದರೂ ಯುಎಸ್ ಟೆನಿಸ್ ಅಸೋಸಿಯೇಶನ್ (ಯುಎಸ್‌ಟಿಎ) ಯುಎಸ್ ಓಪನ್ ಟೆನಿಸ್ ಕೂಟವನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದೆ.
ಯುಎಸ್ ಓಪನ್ ಆಗಸ್ಟ್ 31ರಿಂದ ಆರಂಭವಾಗಲಿದೆ. ಸದ್ಯದ ಸ್ಥಿತಿಯಲ್ಲಿ ಯುಎಸ್‌ಟಿಎ ಈ ಹಿಂದೆ ನಿರ್ಧರಿಸಿದಂತೆ ಯುಎಸ್ ಓಪನ್ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತದೆ. ಇದಕ್ಕಾಗಿ ಸಿದ್ಧತೆಯನ್ನು ಮುಂದುವರಿಸಲಿದ್ದೇವೆ ಎಂದು ಯುಎಸ್‌ಟಿಎ ಪ್ರಕಟನೆಯಲ್ಲಿ ತಿಳಿಸಿದೆ.
ಕೋವಿಡ್ 19 ವೈರಸ್ ವ್ಯಾಪಕವಾಗಿ ಹರಡುತ್ತಿರು ವುದನ್ನು ನಾವು ಗಮನಿಸುತ್ತಿದ್ದೇವೆ. ಅದಕ್ಕಾಗಿ ಬೇಕಾದ ವ್ಯವಸ್ಥೆಗಳನ್ನು ನಾವು ಮಾಡಿಕೊಳ್ಳುತ್ತಿದ್ದೇವೆ. ನ್ಯೂಯಾರ್ಕ್‌ನಲ್ಲಿ ಈ ಸೋಂಕು ವ್ಯಾಪಕವಾಗಿ ಹರಡಿದೆ. ಇದರಿಂದಾಗಿ ಟೆನಿಸ್ ಕೋರ್ಟ್‌ಗಳು ಆಸ್ಪತ್ರೆಗಳಾಗಿ ಬದಲಾಗಿದ್ದರೆ ಲೂಯಿಸ್ ಆಮ್ಸ್ìಸ್ಟ್ರಾಂಗ್ ಕ್ರೀಡಾಂಗಣದಲ್ಲಿ ರೋಗಿಗಳಿಗೆ, ಸ್ವಯಂಸೇವಕರಿಗೆ ಮತ್ತು ಆ ಪ್ರದೇಶದ ಶಾಲಾ ಮಕ್ಕಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಎಲ್ಲ ಟೆನಿಸ್ ಕೂಟಗಳು ರದ್ದು
ಕೋವಿಡ್ 19 ದಿಂದಾಗಿ ಜುಲೈ 13ರ ವರೆಗೆ ನಡೆಯಲಿರುವ ಎಲ್ಲ ಎಟಿಪಿ ಮತ್ತು ಡಬ್ಲ್ಯುಟಿಎ ಟೆನಿಸ್ ಕೂಟಗಳನ್ನು ರದ್ದುಮಾಡಲಾಗಿದೆ. ರದ್ದುಗೊಂಡ ಕೂಟಗಳಲ್ಲಿ ಎಟಿಪಿ ಕೂಟಗಳಾದ ಹೆರ್ಟೊಗೆನ್‌ಬಾಶ್, ಸ್ಟಟ್‌ಗರ್ಟ್, ಲಂಡನ್-ಕ್ವೀನ್ಸ್, ಹಾಲೆ, ಮಲೋರ್ಕಾ ಮತ್ತು ಈಸ್ಟ್
ಬೋರ್ನ್ ಹಾಗೂ ಡಬ್ಲ್ಯುಟಿಎ ಕೂಟಗಳಾದ ಹೆರ್ಟೊಗೆನ್‌ಬಾಶ್, ನಾಟಿಂಗಮ್, ಬರ್ಮಿಂಗ್‌ಹ್ಯಾಮ್, ಬರ್ಲಿನ್, ಈಸ್ಟ್‌ಬೋರ್ನ್ ಮತ್ತು ಬಾಡ್ ಹ್ಯಾಂಬರ್ಗ್‌ನಲ್ಲಿ ನಡೆಯುವ ಕೂಟಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಈ ಎಲ್ಲ ಕೂಟಗಳ ಜತೆ 2020ರ ಜುಲೈಯಲ್ಲಿ ನಡೆಯಬೇಕಿದ್ದ ವಿಂಬಲ್ಡನ್ ಟೆನಿಸ್ ಕೂಟ ಕೂಡ ರದ್ದಾಗಿದ್ದು ಮುಂದಿನ ಕೂಟ 2021ರ ಜೂ. 28ರಿಂದ ಜುಲೈ 11ರ ವರೆಗೆ ನಡೆಯಲಿದೆ.
ಆಘಾತವಾಗಿದೆ: ಸೆರೆನಾ
ವಿಂಬಲ್ಡನ್ ರದ್ದುಗೊಂಡ ಸುದ್ದಿ ಕೇಳಿ ನನಗೆ ಆಘಾತವಾಯಿತು ಎಂದು ಏಳು ಬಾರಿಯ ವಿಂಬಲ್ಡನ್ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಅವರು ಹೇಳಿದರೆ ಮಾಜಿ ಚಾಂಪಿಯನ್ ರೋಜರ್ ಫೆಡರರ್ ನನ್ನ ಕನಸು “ಧ್ವಂಸಗೊಂಡಿದೆ’ ಎಂದಿದ್ದಾರೆ. ಫೆಡರರ್ ದಾಖಲೆ ಎಂಟು ಬಾರಿ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.