“ಅಶಿಸ್ತಿನ ಕಾರಣ’ ನಿರಾಕರಿಸಿದ ಶಾ
Team Udayavani, Mar 17, 2019, 12:30 AM IST
ಹೊಸದಿಲ್ಲಿ: ಭಾರತ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ, ಕಿರಿಯ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟನ್ನು ಅದ್ಧೂರಿಯಾಗಿ ಆರಂಭಿಸಿದ್ದರು. ಆದರೆ ಕಳೆದ ವರ್ಷ ಆಸ್ಟ್ರೇಲಿಯಕ್ಕೆ ತೆರಳಿದ್ದ ಅವರು ಸರಣಿಗೂ ಮೊದಲೇ ಗಾಯಾಳಾಗಿ ಭಾರತಕ್ಕೆ ಮರಳಬೇಕಾಯಿತು. ಹಿಮ್ಮಡಿ ನೋವಿನ ಕಾರಣಕ್ಕೆ ಪೃಥ್ವಿ ಶಾ ವಾಪಸಾಗಿದ್ದಾರೆ ಎಂದು ಬಿಸಿಸಿಐ ಹೇಳಿತ್ತು. ಆದರೆ ಅವರು ತಂಡದಿಂದ ಹೊರಬೀಳಲು ಗಾಯವಲ್ಲ, ಅಶಿಸ್ತೇ ಕಾರಣ ಎನ್ನುವ ಸುದ್ದಿ ಕೂಡ ಇತ್ತೀಚೆಗೆ ಹಬ್ಬಿತ್ತು. ಇದಕ್ಕೆ ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ಅವರು, “ಇವೆಲ್ಲ ವದಂತಿಗಳಷ್ಟೇ. ಇದಕ್ಕೆಲ್ಲ ಉತ್ತರಿಸದೆ ಉಳಿಯುವುದೇ ಒಳಿತು’ ಎಂದಿದ್ದಾರೆ.
“ನನಗೆ ಹಿಮ್ಮಡಿ ಗಾಯವಾಗಿತ್ತು. ಅದು ಗುಣವಾಗುವುದು ಬಹಳ ತಡವಾಯಿತು. ಆದ್ದರಿಂದ ಹಿಂತಿರುಗಿ ಮರಳ ಬೇಕಾಯಿತು ಅಷ್ಟೇ. ನನಗೆ ಭಾರತ ತಂಡದಲ್ಲಿ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನೀಡಿದರೂ ಆಡಲು ಸಿದ್ಧನಿದ್ದೇನೆ. ಆರಂಭಕಾರನ ಸ್ಥಾನವೇ ಬೇಕೆಂದಿಲ್ಲ’ ಎಂದಿದ್ದಾರೆ ಶಾ. ಡೆಲ್ಲಿ ಕ್ಯಾಪಿಟಲ್ಸ್ ನಡೆಸಿದ ಮುಕ್ತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿ ಶಾ, ತಾನು ಚೇತರಿಕೆಗೆ ಶ್ರದ್ಧೆಯಿಂದ ಪ್ರಯತ್ನಿಸುತ್ತಿಲ್ಲ ಎಂಬ ಆರೋಪಗಳಿಗೂ ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ
INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್
Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್ ಒತ್ತಡ
BGT 2024: ಆಸೀಸ್ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ
MUST WATCH
ಹೊಸ ಸೇರ್ಪಡೆ
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.