ಗಾಯಗೊಂಡ ಪೃಥ್ವಿ ಶಾ ದ್ವಿತೀಯ ಟೆಸ್ಟ್ಗೆ ಅನುಮಾನ: ಗಿಲ್ ಪದಾರ್ಪಣೆ ಸಾಧ್ಯತೆ
Team Udayavani, Feb 28, 2020, 9:55 AM IST
ಕ್ರೈಸ್ಟ್ಚರ್ಚ್: ಭಾರತದ ಆರಂಭಕಾರ ಪೃಥ್ವಿ ಶಾ ಗಾಯದ ಸಮಸ್ಯೆಯಿಂದ ಗುರುವಾರ ನೆಟ್ ಅಭ್ಯಾಸದಿಂದ ಹೊರಗುಳಿದರು. ಅವರು ಎಡಗಾಲಿನ ಊತಕ್ಕೆ ಸಿಲುಕಿದ್ದಾರೆ. ಇದರಿಂದ ಶನಿವಾರದಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ಎದುರಿನ 2ನೇ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಒಂದು ವೇಳೆ ಶಾ ಚೇತರಿಸದೆ ಹೋದರೆ ಮತ್ತೋರ್ವ ಯುವ ಆಟಗಾರ ಶುಬ್ಮನ್ ಗಿಲ್ ಟೆಸ್ಟ್ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಗುರುವಾರದ ನೆಟ್ಸ್ನಲ್ಲಿ ಶುಬ್ಮನ್ ಗಿಲ್ ಸುದೀರ್ಘ ಅಭ್ಯಾಸ ನಡೆಸಿ ಕೋಚ್ ರವಿಶಾಸ್ತ್ರಿ ಅವರ ಗಮನ ಸೆಳೆದಿದ್ದಾರೆ.
ಶುಬ್ಮನ್ ಗಿಲ್ ಆಟವನ್ನು ಸಂಪೂರ್ಣವಾಗಿ ಗಮನಿಸಿದ ಶಾಸ್ತ್ರಿ ಕೆಲವು ಬ್ಯಾಟಿಂಗ್ ಸಲಹೆಗಳನ್ನೂ ನೀಡಿದ್ದಾರೆ.
ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿದ್ದ ಶಾ ಹಲವು ತಿಂಗಳ ಬಳಿಕ ಮೊದಲ ಪಂದ್ಯದಲ್ಲಿ ಕಾಣಿಸಿಕೊಂಡಿದ್ದು. ಆದರೆ 16 ಮತ್ತು 14 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.