ತವರಲ್ಲಿ ಸಿಡಿದ ದಬಾಂಗ್ ಡೆಲ್ಲಿ
Team Udayavani, Aug 25, 2019, 12:39 AM IST
ಹೊಸದಿಲ್ಲಿ: ಪವನ್ ಸೆಹ್ರಾವತ್ ಮಿಂಚಿನ ರೈಡಿಂಗ್ ಹೊರತಾಗಿಯೂಬೆಂಗಳೂರು ಬುಲ್ಸ್ 33-31 ಅಂಕಗಳ ಅಂತರದಿಂದ ಆತಿಥೇಯ ದಬಾಂಗ್ ಡೆಲ್ಲಿ ವಿರುದ್ಧ ಮುಗ್ಗರಿಸಿತು.
ತ್ಯಾಗರಾಜ ನ್ಪೋರ್ಟ್ಸ್ ಕಾಂಪ್ಲೆಕ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ನವೀನ್ ಕುಮಾರ್ (13 ಅಂಕ) ಅಬ್ಬರದ ರೈಡಿಂಗ್, ರೈಡರ್ ಮಿರಾಜ್ ಶೇಖ್ (5 ಅಂಕ) ಸಮಯೋಚಿತ ರೈಡಿಂಗ್ ಪ್ರದರ್ಶನ ಹಾಗೂ ರವೀಂದರ್ ಪಹಲ್ (4 ಅಂಕ) ಅದ್ಭುತ ಟ್ಯಾಕಲ್‌ನಿಂದ ಡೆಲ್ಲಿ ಗೆದ್ದು ಬಂದಿತು.
ದಿನದ ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್ 24-21ರಿಂದ ಜೈಪುರ್ ಪಿಂಕ್ ಪ್ಯಾಂಥರ್ಗೆ ಸೋಲುಣಿಸಿತು. ಇದು ಟೈಟಾನ್ಸ್‌ಗೆ ಒಲಿದ 3ನೇ ಜಯ.
ಪವನ್ ಬಿರುಗಾಳಿ ರೈಡಿಂಗ್
ಪವನ್ ಸೆಹ್ರಾವತ್ ಮತ್ತೂಮ್ಮೆ ರೈಡಿಂಗ್‌ನಲ್ಲಿ ಮಿಂಚಿದರು. ಎಂದಿ ನಂತೆ ಬಿರುಸಿನ ದಾಳಿಗಿಳಿದ ಅವರು ಏಕಾಂಗಿಯಾಗಿ ಹೋರಾಡಿದರು. ಒಟ್ಟಾರೆ 28 ರೈಡ್ ಮಾಡಿದ ಅವರು 17 ಸಲ ಯಶಸ್ವಿಯಾಗಿ ಅಂಕ ತಂದರು. 7 ಸಲ ವಿಫಲರಾದರು. 12 ಟಚ್ ಪಾಯಿಂಟ್ ಪಡೆದ ಪವನ್ 5 ಸಲ ಬೋನಸ್ ಕಲೆಹಾಕಿದರು.
ಆದರೆ ತಂಡದ ನಾಯಕ ರೋಹಿತ್ ಕುಮಾರ್ 6 ಸಲ ರೈಡಿಂಗ್ ಮಾಡಿದರೂ ಅಂಕ ಗಳಿಸ ದಿದ್ದುದು ಬುಲ್ಸ್‌ಗೆ ಹಿನ್ನಡೆಯಾಗಿ ಪರಿಣಮಿಸಿತು. ರಕ್ಷಣಾ ವಿಭಾ ಗದಲ್ಲೂ ಬೆಂಗಳೂರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅಂತಿಮವಾಗಿ ಬೆಂಗಳೂರು ಕೇವಲ 3 ಅಂಕ ಅಂತರದಿಂದ ಸೋಲನುಭವಿಸಿತು. ಇದು ಬೆಂಗಳೂರಿಗೆ ಎದುರಾದ 5ನೇ ಸೋಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.