ಪ್ರೊ ಕಬಡ್ಡಿಯಲ್ಲಿ ಪ್ರೇಕ್ಷಕರ ಹುಚ್ಚೆಬ್ಬಿಸುವ ಕನ್ನಡಿಗ ಚಿಯರ್ ವಾಲಾ
Team Udayavani, Oct 3, 2017, 7:35 AM IST
ನವದೆಹಲಿ: “ಎ ಇಂಡಿಯಾಕಾ ಖೇಲ್ ಹೇ.. ಕ್ಯಾ ಆಪ್ ತಯಾರ್ ಹೇ..’ ಹೀಗೆಂದು ಪ್ರೊ ಕಬಡ್ಡಿ ಪಂದ್ಯದ ಆರಂಭದ ವೇಳೆ ಮೈಕ್ ಮೂಲಕ ರಾಕೇಶ್ ಕುಮಾರ್ ಎಂಸಿ ಆರಂಭಿಸುತ್ತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ.
ಹೌದು, ಪ್ರೊಕಬಡ್ಡಿಗೆ ಕಿಕ್ ಕೊಡುವ ಕೆಲಸ ಮಾಡುತ್ತಿರುವುದೇ ಈ ಕಂಚಿನ ಕಂಠದ ಕನ್ನಡಿಗ ಚಿಯರ್ ವಾಲಾ. ಎಂಜೆ ಖ್ಯಾತಿಯ ರಾಕೇಶ್ ಅಲಿಯಾಸ್ ಪ್ರೊಫೆಸರ್ ಸುಲ್ತಾನ್. ಸ್ಟಾರ್‌ನ್ಪೋರ್ಟ್ಸ್ ನೇರ ಪ್ರಸಾರ ಟೀವಿ ಪರದೆ ಮೇಲೆ ರಾಕೇಶ್ ಕಾಣಿಸಿಕೊಳ್ಳುವುದಿಲ್ಲ. ಹಾಗಂತ ಇವರಿಗೆ ಅಭಿಮಾನಿಗಳ ಸಂಖ್ಯೆಯೇನೂ ಕಡಿಮೆ ಇಲ್ಲ. ರಾಕೇಶ್ ಮಾತಿಗೆ ನಿಂತರೆ ಮಾತಿನ ಮಲ್ಲ. ರೇಡಿಯೋದಲ್ಲಿ ಮಾತನಾಡಿದರೆ ರೇಡಿಯೋ ಜಾಕಿ (ಆರ್‌ಜೆ). ಟೀವಿಯಲ್ಲಿ ಮಾತನಾಡಿದರೆ ವಿಡಿಯೋ ಜಾಕಿ (ವಿಜೆ), ಪ್ರೊಕಬಡ್ಡಿಗೆ ಬಂದರೆ ಅದ್ಭುತ ಎಂಸಿ. ಹೀಗೆ ರಾಕೇಶ್ ನಡೆದದ್ದೇ ದಾರಿ. ವೃತ್ತಿ ಬದುಕಿನಲ್ಲಿ ಹಲವಾರು ಕಾರ್ಯಕ್ರಮ ನಿರ್ವಹಿಸಿರುವ ರಾಕೇಶ್ ಈಗ ಪ್ರೊಕಬಡ್ಡಿಯಲ್ಲಿ ಎಂಸಿ ಮಾಡುವುದರಲ್ಲಿ ಬ್ಯುಸಿ. ಪಂದ್ಯದುದ್ದಕ್ಕೂ ಅಭಿಮಾನಿಗಳನ್ನು ಚಿಯರ್ ಮಾಡುವುದು. ಜತೆಗೆ ತಂಡಗಳಿಗೂ ಚಿಯರ್ ಮಾಡುವುದು ಇವರ ಮುಖ್ಯಕೆಲಸ. ರಾಜ್ಯದ ಪ್ರತಿಭಾವಂತನೊಂದಿಗೆ ಉದಯವಾಣಿ ಸಂದರ್ಶನ ನಡೆಸಿತು. ಈ ವೇಳೆ ಅವರು ತಮ್ಮ ಖುಷಿ, ಅನುಭವ, ವೃತ್ತಿ ಬದುಕು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮುಕ್ತವಾಗಿ ಮಾಹಿತಿ ಹಂಚಿಕೊಂಡರು.
ಪ್ರೊಕಬಡ್ಡಿ ಎಂಸಿ ಸವಾಲಿನ ಕೆಲಸ: ಕಳೆದ 4 ಆವೃತ್ತಿಗಳಿಂದ ಪ್ರೊಕಬಡ್ಡಿ ಕೂಟದಲ್ಲಿ ಎಂಸಿಯಾಗಿ ಕೆಲಸ ನಿರ್ವಹಿಸುತ್ತಾ ಬಂದಿದ್ದೇನೆ. ಈ ಸಲ 12 ನಗರಗಳ ಪ್ರೊಕಬಡ್ಡಿ ಕೂಟದ ಪೈಕಿ 6 ನಗರ ಆಯ್ದುಕೊಂಡಿದ್ದೇನೆ. ನಾಗ್ಪುರ, ಮುಂಬೈ, ಹರ್ಯಾಣ, ನವದೆಹಲಿ ಚರಣದಲ್ಲಿ ಎಂಸಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಮುಂದೆ ಚೆನ್ನೈ, ಪುಣೆಯಲ್ಲಿ ಕಾರ್ಯಕ್ರಮ ನಡೆಸಬೇಕಿದೆ. ಟೀವಿ ಅಥವಾ ರೇಡಿಯೋದಲ್ಲಿ ಮಾಡುವ ಕೆಲಸಕ್ಕಿಂತ ಇದು ಹೆಚ್ಚು ಸವಾಲಿನದ್ದಾಗಿದೆ. ಅಭಿಮಾನಿಗಳನ್ನು ಪ್ರತಿ ಕ್ಷಣವೂ ಇಲ್ಲಿ ರಂಜಿಸಲೇ ಬೇಕಾಗುತ್ತದೆ. ಇಎಲ್ಲರಿಗೂ ಕೇಳುವಂತೆ ಸ್ಪಷ್ಟವಾಗಿ, ಗಟ್ಟಿಯಾಗಿ ಮಾತನಾಡುವ ಹೊಣೆಗಾರಿಕೆ ನನ್ನ ಮೇಲಿದೆ. ಇದಕ್ಕಾಗಿ ಮೊದಲು ನಾನು ಮಾಡುವ ಕೆಲಸ ಹೊಟ್ಟೆ ತುಂಬ ಊಟ ಮಾಡುವುದು. ಚೆನ್ನಾಗಿ ನೀರು ಕುಡಿಯುವುದು. 1 ಗಂಟೆಗೂ ಹೆಚ್ಚು ಸಮಯ ಮಾತನಾಡಬೇಕಿರುವುದರಿಂದ ಊಟ ಮಾಡದಿದ್ದರೆ ಸುಸ್ತಾಗುತ್ತದೆ. ಹೆಚ್ಚು ಓಡಾಟ ನಡೆಸುವುದು, ಕುಣಿಯುವುದು ಇತ್ಯಾದಿ ಮಾಡುವುದರಿಂದ ದೇಹ ದಣಿಯುತ್ತದೆ. ಹೀಗಾಗಿ ಹೆಚ್ಚು ನೀರು ಕುಡಿಯುವುದು ಶೋಗೆ ಮೊದಲು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.
ಐಪಿಎಲ್, ಪ್ರೊಕಬಡ್ಡಿಯಿಂದ ಜನಪ್ರಿಯ: ಒಂದೇ ಕಡೆ 25 ಸಾವಿರಕ್ಕೂ ಹೆಚ್ಚು ಅಭಿಮಾನಿಗಳನ್ನು ರಂಜಿಸಿದ್ದು 2010ರಲ್ಲಿ. ಐಪಿಎಲ್‌ನಲ್ಲಿ ಮೊದಲ ಸಲ ಎಂಸಿ ಮಾಡುವ ಅವಕಾಶ ಸಿಕ್ಕಿತು. ಇದನ್ನು ಸರಿಯಾಗಿ ಬಳಸಿಕೊಂಡೆ. ಅಂದಿನಿಂದ ಇಂದಿನವರೆಗೆ ಒಟ್ಟಾರೆ 7 ಆವೃತ್ತಿ ಐಪಿಎಲ್‌ಗೆ ಎಂಸಿ ಆಗಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ ಹತ್ತು ಹಲವು ಕಾರ್ಯಕ್ರಮ ನಡೆಸಿದೆ. ಐಪಿಎಲ್ ಬಳಿಕ ಸಿಕ್ಕಿದ್ದು ಪ್ರೊ ಕಬಡ್ಡಿ. ಒಟ್ಟಿನಲ್ಲಿ ಹೇಳುವುದಾದರೆ ಐಪಿಎಲ್ ಹಾಗೂ ಪ್ರೊ ಕಬಡ್ಡಿ ಎರಡರಿಂದಲೂ ನನ್ನ ಜನಪ್ರಿಯತೆ ಹೆಚ್ಚಿತು ಎಂದರು.
ಯಾರಿವರು ರಾಕೇಶ್?
ರಾಕೇಶ್ ಕುಮಾರ್ ಮೂಲತಃ ರಾಜಸ್ಥಾನದವರು. ಅವರಿಗೆ 34 ವರ್ಷ. ಅವರ ಮುತ್ತಾತನ ಕಾಲದಲ್ಲೇ ಇವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ಸದ್ಯ ಬೆಂಗಳೂರಿನ ಅಲಸೂರಿನಲ್ಲಿ ಇವರ ಕುಟುಂಬ ನೆಲೆಸಿದೆ. ಇವರು ಬಿಕಾಂ ಪದವಿ ಶಿಕ್ಷಣವನ್ನು ಉದ್ಯಾನನಗರಿಯ ಸೇಂಟ್ ಜೋಸೆಪ್ ಕಾಮರ್ಸ್ ಕಾಲೇಜಿನಲ್ಲಿ ಮುಗಿಸಿದ್ದಾರೆ. ಬಳಿಕ ಸ್ವಲ್ಪ ಸಮಯ ಆಲ್ ಇಂಡಿಯಾ ರೇಡಿಯೋದಲ್ಲಿ ಆರ್‌ಜೆ ಆಗಿ ಕೆಲಸ ಮಾಡಿದರು. ಇದಾದ ಬಳಿಕ 94.3 ಎಪ್‌ಎಂನಲ್ಲಿ ಆರ್‌ಜೆ ಹಾಗೂ ಪ್ರೊಗ್ರಾಮಿಂಗ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದರು. ನಂತರ ಸುವರ್ಣಾ ಎಂಟರ್‌ಟೈನ್‌ಮೆಂಟ್ ಚಾನಲ್‌ನಲ್ಲಿ ವಿಜೆ ಆಗಿ ಕೆಲಸ ಮಾಡಿದರು. ಸದ್ಯ ರೆಡ್ ಎಫ್ಎಂನ ರೇಡಿಯೋ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರೊಫೆಸರ್ ಉಲತ್ ಸುಲ್ತಾನ್ ಎಂಬ ಹೆಸರಿನಲ್ಲಿ ಇವರು ನಡೆಸಿಕೊಡುವ ಉರ್ದು ಕಾರ್ಯಕ್ರಮ ಭಾರೀ ಜನಪ್ರಿಯವಾಗಿದೆ.
ನನಗೆ ಮೈಕ್ ಕೊಟ್ಟರೆ ಸಾಕು. ನಿರರ್ಗಳವಾಗಿ ಮಾತನಾಡುತ್ತೇನೆ. ಜನರ ಚಪ್ಪಾಳೆಯ ನನಗೆ ಸ್ಫೂರ್ತಿ. ಇಷ್ಟಿದ್ದರೆ ಸಾಕು ಊಟ, ನಿದ್ರೆ ಎಲ್ಲವನ್ನೂ ಮರೆತು ಬಿಡುತ್ತೇನೆ.
– ರಾಕೇಶ್ ಕುಮಾರ್, ಎಂಸಿ
– ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
ಕೊಹ್ಲಿ-ರೋಹಿತ್ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
BPL;ಅಂತಿಮ ಓವರಿನಲ್ಲಿ 30 ರನ್ ಸಿಡಿಸಿದ ನುರುಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.