ಬೆಂಗಳೂರಿನ ನಾಗ್ಪುರ ಚರಣಕ್ಕೆ ಜಯದ ಆರಂಭ
Team Udayavani, Aug 5, 2017, 6:55 AM IST
ನಾಗ್ಪುರ: ಪ್ರೊಕಬಡ್ಡಿ ನಾಗ್ಪುರಕ್ಕೆ ಚರಣಕ್ಕೆ ಗೆಲುವಿನ ಕಿಕ್ ನೀಡುವ ಮೂಲಕ ಬೆಂಗಳೂರು ಬುಲ್ಸ್ ಚಾಲನೆ ನೀಡಿದೆ.
ಇಲ್ಲಿನ ಮಂಕಾಪುರ ಒಳಾಂಗಣ ಕ್ರಿಡಾಂಗಣದಲ್ಲಿ ಶುಕ್ರವಾರ “ಬಿ” ಗುಂಪಿನ ಮೊದಲ ಪಂದ್ಯದಲ್ಲಿ ದಕ್ಷಿಣ ಭಾರತದ ಪ್ರಬಲ 2 ತಂಡಗಳ ಮಧ್ಯೆ ರೋಚಕ ಹಣಾಹಣಿ ನಡೆಯಿತು. ಜಿದ್ದಾಜಿದ್ದಿನ ಕದನದಲ್ಲಿ ಬುಲ್ಸ್ 32-31ರಿಂದ ತಮಿಳ್ ತಲೈವಾಸ್ ತಂಡವನ್ನು ಮಣಿಸಿತು. ಇದರೊಂದಿಗೆ ಬೆಂಗಳೂರು 5ನೇ ಆವೃತ್ತಿಯ ಕೂಟದಲ್ಲಿ ಸತತ 2ನೇ ಗೆಲುವು ದಾಖಲಿಸಿತು.
ಬುಲ್ಸ್ ಘರ್ಜನೆ: ಬೆಂಗಳೂರು ತಂಡ ಆರಂಭದಲ್ಲಿಯೇ ಮುನ್ನಡೆ ಪಡೆದುಕೊಂಡಿತು. 6ನೇ ನಿಮಿಷಕ್ಕೆ ತಮಿಳ್ ತಲೈವಾಸ್ ತಂಡ ಆಲೌಟ್ ಆಗಿದ್ದರಿಂದ ಬೆಂಗಳೂರು ತಂಡ ಬೋನಸ್ ಅಂಕದೊಂದಿಗೆ 9-3 ಮುನ್ನಡೆ ಪಡೆದುಕೊಂಡಿತು. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ತಮಿಳ್ ತಲೈವಾಸ್ ತಂಡ ಪ್ರಯತ್ನ ವ್ಯರ್ಥವೆನಿಸಿತು.14ನೇ ನಿಮಿಷಕ್ಕೆ ತಮಿಳು ತಂಡ ಮತ್ತೂಮ್ಮೆ ಆಲೌಟ್ ಆದಾಗ ಬೆಂಗಳೂರು 21-6ರಿಂದ ಮುನ್ನಡೆ ಪಡೆದುಕೊಂಡಿತು. ಇದರಿಂದ ತಲೈವಾಸ್ ಮೇಲೆ ಒತ್ತಡ ಹೆಚ್ಚಾಯಿತು. ಪಂದ್ಯದ ಮೊದಲಾರ್ಧ ಪೂರ್ಣಗೊಂಡಾಗ ಬೆಂಗಳೂರು ತಂಡ 23-8ರಿಂದ ಮುನ್ನಡೆ ಹಿಗ್ಗಿಸಿಕೊಂಡಿತು.
ತಿರುಗಿಬಿದ್ದ ತಲೈವಾಸ್: ಹೀನಾಯ ಸೋಲಿನ ಸ್ಥಿತಿಯಲ್ಲಿದ್ದ ತಮಿಳ್ ತಂಡ ಸಂಘಟಾತ್ಮಕ ಪ್ರದರ್ಶನದ ಮೂಲಕ ಬೆಂಗಳೂರು ತಂಡಕ್ಕೆ ತಿರುಗೇಟು ನೀಡಿತು. ಆರಂಭದಲ್ಲಿ ರೋಹಿತ್ ಕುಮಾರ್ ಅವರಿಗೆ ಕಡಿವಾಣ ಹಾಕುವಲ್ಲಿ ತಲೈವಾಸ್ ಯಶಸ್ವಿಗೊಂಡಿತು. ದ್ವಿತಿಯಾರ್ಧದಲ್ಲಿ ತಲೈವಾಸ್ ಆಕ್ರಮಣಕಾರಿಯಾಗಿ ಆಡಲು ಮುಂದಾಯಿತು. ಅಮಿತ್ ಹೂಡಾ, ಡಾಂಗಿಯನ್ ಲೀ ತಂಡದ ಅಂಕ ಹೆಚ್ಚಿಸಿದರು. ತಲೈವಾಸ್ ತಂಡದ ಪ್ರಪಂಜನ್, ಡಾಂಗಿಯನ್ ಲೀ ರೈಡಿಂಗ್ ಸಹಾಯದಿಂದ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತು. ಕೊನೆಗೆ ಕೇವಲ 1 ಅಂಕದಿಂದ ರೋಚಕ ಸೋಲು ಅನುಭವಿಸಿತು.
– ವಿಶ್ವನಾಥ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.