ಮೀರಜ್ ದಾಳಿಗೆ ಬುಲ್ಸ್ ಶೇಕ್
Team Udayavani, Sep 8, 2017, 7:30 AM IST
ಕೋಲ್ಕತ್ತಾ: ನಾಯಕ ಮೀರಜ್ ಶೇಖ್ ಮ್ಯಾಜಿಕಲ್ ದಾಳಿಯ ಪರಿಣಾಮ ಬೆಂಗಳೂರ್ ಬುಲ್ಸ್ 30-38 ಅಂತರದಿಂದ ಡೆಲ್ಲಿ ದಬಾಂಗ್ ಎದುರು ಮುಖಭಂಗ ಅನು ಭವಿಸಿತು. ಬುಲ್ಸ್‌ನಾಯಕ ರೋಹಿತ್ ಕುಮಾರ್ ಪರಾಕ್ರಮ ದಾಳಿಗೈದರೂ, ಡೆಲ್ಲಿಯ “ಕಮ್ ಬ್ಯಾಕ್’ ಮುಂದೆ ಅದು ಮಂಕಾಗಿ ಹೋಯಿತು.
ಇಲ್ಲಿನ ನೇತಾಜಿ ಸುಭಾಶ್‌ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಬುಲ್ಸ್ ಈ ಕೂಟದ 7ನೇ ಸೋಲು ಕಂಡಿತು. ಇರಾನಿ ಸ್ಟಾರ್ ರೈಡರ್ ಮೀರಜ್ ಶೇಖ್‌ರ ಮಿಂಚಿನ ದಾಳಿ, ಬುಲ್ಸ್ ಅನ್ನು ಮತ್ತೆ ಮತ್ತೆ “ಶೇಕ್’ ಮಾಡುತ್ತಿತ್ತು.
ಆರಂಭದಲ್ಲಿ ಬೊಂಬಾಟ್ ಬುಲ್ಸ್: ಶುರುವಿನಲ್ಲೇ ಮನೆ ಖಾಲಿ ಆಗುತ್ತದೆನ್ನುವ ಭಯದಲ್ಲಿದ್ದ ಬೆಂಗಳೂರು ಬುಲ್ಸ್‌ಗೆ ಸುನೀಲ್ ಜೈಪಾಲ್ ಕಲೆಹಾಕಿದ ಸೂಪರ್ ಟ್ಯಾಕಲ್, ಅದರ ಬೆನ್ನಲ್ಲೇ ಅವರು ಹಾಕಿದ ಅಮೋ ಘ ಕ್ಯಾಚ್‌ನಿಂದಾಗಿ ಬುಲ್ಸ್ ಮಾನ ಉಳಿಸಿಕೊಂಡಿತು.ನಂತರ ರೋಹಿತ್‌ರ ಆಕರ್ಷಕ ರೈಡಿಂಗ್‌ಗಳು (13 ಅಂಕ) ಬುಲ್ಸ್ ಓಟವನ್ನು ವೇಗಗೊಳಿಸಿತ್ತು. ಬೋನಸ್ ಪಾಯಿಂಟ್ ಗಳೂ ಬುಲ್ಸ್ ಬುಟ್ಟಿಗೆ ಹರಿದು ಬರುತ್ತಲೇ ಇದ್ದವು. ಮೊದ ಲಾರ್ಧ ಆಟ ಮುಗಿದಾಗ ಬುಲ್ಸ್ 18-12 ಅಂಕಗಳಿಂದ ಮುಂದಿ ತ್ತಾದರೂ, ಅದೇ ಮ್ಯಾಜಿಕ್ ನಂತರ ಆಗಲಿಲ್ಲ.
ಡೆಲ್ಲಿ ಕಂಬ್ಯಾಕ್: ಗೂಳಿ ಗುದ್ದುವ ಮುನ್ನ ನಾಲ್ಕು ಹೆಜ್ಜೆ ಹಿಂದೆ ಬರುತ್ತದಂತೆ. ಆದರೆ, ಇಲ್ಲಿ ಗೂಳಿಗೆ ಗುದ್ದುವ ಮುನ್ನ ಡೆಲ್ಲಿ ನಾಲ್ಕು ಹೆಜ್ಜೆ ಹಿಂದೆ ಬಂದಿತ್ತು! ದ್ವಿತೀಯಾರ್ಧದ ಆರಂಭದಲ್ಲೇ ಡೆಲ್ಲಿ, ರೋಹಿತ್‌ರನ್ನು ಕೋರ್ಟ್‌ನಿಂದ ಆಚೆ ಕೂರಿಸಿತು.
ಶೇಕ್ ಆದ ಬುಲ್ಸ್!: ಡೆಲ್ಲಿ ಕಪ್ತಾನ ಶೇಖ್, ಕೈಯಿಂದ ಪುಟಿಯುವ ಚೆಂಡಿನಂತೆ ತಪ್ಪಿಸಿಕೊಳ್ಳುತ್ತಾ, ಅಂಕಗಳನ್ನು ಪೇರಿಸಿಕೊಂಡರು.ಶೇಖ್ ಒಟ್ಟಾರೆ ಕಲೆಹಾಕಿದ್ದು, 14 ಅಂಕಗಳು.ಈ ನಡುವೆ ರೋಹಿತ್ ಕೂಡ 3 ಬಾರಿ ಔಟ್ ಆಗಿ, ಬುಲ್ಸ್ ಪಡೆಗೆ ದಿಗಿಲು ಹೆಚ್ಚಿಸಿದರು. ಡೆಲ್ಲಿಯ ಡಿಫೆಂಡರ್, ಇರಾನಿ ಚತುರ ಅಬೋಲ್‌ಫಜಲ್ 3 ಬಾರಿ “ಮಾಡು ಮಡಿ’ ಅಂಕಗಳನ್ನು ಮುಡಿಗೇರಿಸಿಕೊಂಡು ಮಿಂಚಿದರು.
– ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.