ಜೈಪುರಕ್ಕೆ ಸೋಲುಣಿಸಿದ ಟೈಟಾನ್ಸ್‌ನ ರಾಹುಲ್ ಚೌಧರಿ
Team Udayavani, Sep 28, 2017, 6:50 AM IST
ನವದೆಹಲಿ: ರಾಹುಲ್ ಚೌಧರಿ ಮಿಂಚಿನ ದಾಳಿಯಿಂದ ತೆಲುಗು ಟೈಟಾನ್ಸ್ 41-34 ಅಂತರದಿಂದ ಜೈಪುರ ಪಿಂಕ್ ಪ್ಯಾಂಥರ್ ತಂಡವನ್ನು ಪರಾಭವಗೊಳಿಸಿತು.
ಬುಧವಾರ ಇಲ್ಲಿನ ತ್ಯಾಗರಾಜ್ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಅಗ್ರಗಣ್ಯರ ಕಳಪೆ ಆಟ ಜೈಪುರ ತಂಡಕ್ಕೆ ಸೋಲು ಅನುಭವಿಸುವಂತೆ ಮಾಡಿತು. ಕೊನೆಯ 7 ನಿಮಿಷದಲ್ಲಿ ಜೈಪುರ 38-31 ಅಂತರದಿಂದ ಹಿಂದಿತ್ತು. ಗೆಲುವಿಗೆ 7 ಅಂಕ ಬೇಕಾಗಿತ್ತು. ಈ ವೇಳೆ ಜೈಪುರ ತಂಡದಿಂದ ಪವಾಡ ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ ಅದ್ಯಾವುದು ನಡೆಯಲಿಲ್ಲ. ಜೈಪುರ ಸತತ 2ನೇ ಸೋಲು ಅನುಭವಿಸಿತು. ಪ್ಯಾಂಥರ್ ಪರ ಪವನ್ ಕುಮಾರ್ 2ನೇ ಅವಧಿಯಲ್ಲಿ ಸಿಡಿದೆದ್ದರು. ರೈಡಿಂಗ್‌ನಿಂದ ಅವರು 17 ಅಂಕ ತಂದರು. ಇದು ಜೈಪುರಕ್ಕೆ ನೆರವಾಗಲಿಲ್ಲ. ಜಸ್ವೀರ್ ಅನುಪಸ್ಥಿತಿಯಲ್ಲಿ ಮಂಜಿತ್ ಚಿಲ್ಲಾರ್ ಕಳಪೆ ಪ್ರದರ್ಶನ ನೀಡಿದ್ದು ಪ್ಯಾಂಥರ್ ಸೋಲಿಗೆ ಪ್ರಮುಖ ಕಾರಣವಾಯಿತು.
ತೆಲುಗು ಗೆಲುವಿನಲ್ಲಿ ರಾಹುಲ್ ಚೌಧರಿ (17 ರೈಡಿಂಗ್ ಅಂಕ) ಪ್ರಮುಖರಾದರು. ಉಳಿದಂತೆ ನಿಲೇಶ್ ಸಾಳುಂಕೆ (7 ಅಂಕ) ಹಾಗೂ ವಿಶಾಲ್ (5 ಟ್ಯಾಕಲ್)ನಿಂದ ಗಮನ ಸೆಳೆದರು.
ಪವನ್ ಸಿಡಿತದಿಂದ ಚಿಗುರಿದ ಜೈಪುರ:
2ನೇ ಅವಧಿಯ 10 ನಿಮಿಷದ ಆಟದಲ್ಲಿ ಜೈಪುರ ಮಿಂಚಿನ ಆಟವಾಡಿತು. ಒಂದು ಸಲ ತೆಲುಗು ತಂಡವನ್ನು ಆಲೌಟ್ ಮಾಡಿ ಬೀಗಿತು. ಪವನ್ (16 ಅಂಕ) ರೈಡಿಂಗ್‌ನಿಂದ ಅಂಕಗಳಿಕೆಯ ಅಂತರವನ್ನು ಒಟ್ಟಾರೆ 25-31ಕ್ಕೆ ಹೆಚ್ಚಿಸಿಕೊಂಡಿತು. ಜೈಪುರ ಅಂಕಗಳಿಕೆಯನ್ನು ಹೆಚ್ಚಿಸಿದ್ದು ಪವನ್ ಮಿಂಚಿನ ಆಟ. ಅವರ ರೈಡಿಂಗ್‌ಗೆ ತೆಲುಗು ಟೈಟಾನ್ಸ್ ಅಕ್ಷರಶಃ ನಡುಗಿತು. ಹಾಗಂತ ತೆಲುಗು ಅಂಕಗಳಿಕೆಯಲ್ಲಿ ಹಿಂದೆ ಬೀಳಲಿಲ್ಲ. ನಿಧಾನವಾಗಿ ಚೇತರಿಸಿಕೊಂಡಿತು. ಮುನ್ನಡೆಯಲ್ಲೇ ಮುಂದುವರಿದಿತ್ತು.
ತೆಲುಗು ಕೈಹಿಡಿದ ರಾಹುಲ್:
ಮೊದಲ ಅವಧಿಯ 10 ನಿಮಿಷದ ಆಟದಲ್ಲಿ 2 ತಂಡಗಳಿಂದ ಸಮಬಲದ ಹೋರಾಟ. ಈ ಹಂತದಲ್ಲಿ ತೆಲುಗು ಟೈಟಾನ್ಸ್ ನಾಯಕ ರೋಹಿತ್ ರಾಣಾ ಅನಾವಶ್ಯಕ ಹಿಡಿತಕ್ಕೆ ಕೈ ಹಾಕಿ 2 ಸಲ ಔಟಾದರು. ಅಲ್ಲದೆ 2ನೇ ಅವಧಿಯುದ್ದಕ್ಕೂ ಅವರಿಂದ ಇಂತಹುದೇ ಆಟ ಮುಂದುವರಿಯಿತು. ಆದರೆ ರೈಡರ್ ರಾಹುಲ್ ತಂಡದ ಕೈಹಿಡಿದರು. ಅಂಕವನ್ನು ಸೇರಿಸುತ್ತಾ ಹೋದರು. ಆತಂಕವನ್ನು ದೂರ ಮಾಡಿದರು. ಇವರ ಮಾರಕ ದಾಳಿಗೆ ಸಿಲುಕಿ 11ನೇ ನಿಮಿಷದಲ್ಲಿ ಜೈಪುರ ಮೊದಲ ಸಲ ಆಲೌಟಾಯಿತು. ತೆಲುಗು ಈ ವೇಳೆ ಅಂಕಗಳಿಕೆಯನ್ನು 15-5ಕ್ಕೆ ಹೆಚ್ಚಿಸಿಕೊಂಡಿತು. ಬಳಿಕ ತೆಲುಗು ಇದೇ ರಭಸದ ಆಟ ಮುಂದುವರಿಸಿತು. ಮೊದಲ ಅವಧಿ ಮುಗಿಯಲು 3 ನಿಮಿಷ ಬಾಕಿ ಇದ್ದಾಗ ಜೈಪುರ 8-21ರಿಂದ ಭಾರೀ ಅಂತರದ ಹಿನ್ನಡೆಗೆ ಒಳಗಾಯಿತು. ನಂತರದ ಹಂತದಲ್ಲಿ ಸ್ವಲ್ಪ ಚೇತರಿಸಿಕೊಂಡು 23-11 ಅಂತರವನ್ನು ತಗ್ಗಿಸಿಕೊಂಡಿತು. ತೆಲುಗು ಭಾರೀ ಮುನ್ನಡೆಯಲ್ಲಿತ್ತು.
– ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.