ಪಾಟ್ನಾ ಪೈರೇಟ್ ರುಬ್ಬಿದ ಯು ಮುಂಬಾ
Team Udayavani, Sep 10, 2017, 6:55 AM IST
ಸೋನೆಪತ್: (ಹರಿಯಾಣ): ಕೊನೆಯಲ್ಲಿ ಅಬ್ಬರಿಸಿದರೂ ಪಾಟ್ನಾ ಪೈರೇಟ್ಸ್ ತಂಡಕ್ಕೆ ನೀರು ಕುಡಿಸುವಲ್ಲಿ ಯು ಮುಂಬಾ ಯಶಸ್ವಿಯಾಯಿತು. ಮೋತಿಲಾಲ್ ನೆಹರೂ ಸ್ಕೂಲ್ ಆಫ್ ನ್ಪೋರ್ಟ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪೊ› ಕಬಡ್ಡಿ ಪಂದ್ಯದಲ್ಲಿ ಪಾಟ್ನಾ ವಿರುದ್ಧ 41-51 ಅಂತರದಿಂದ ಮುಂಬಾ ಗೆಲುವು ಸಾಧಿಸಿತು. ಕಾಶಿಲಿಂಗ ಅಡಕೆ (15 ಅಂಕ), ಶ್ರೀಕಾಂತ್ ಜಾಧವ್ (13 ಅಂಕ) ಹಾಗೂ ದರ್ಶನ್ ಕಾಡಿಯನ್ (8 ಅಂಕ) ಮುಂಬಾ ಗೆಲುವಿನ ಹೀರೋಗಳು.
ಪ್ರದೀಪ್ ಏಕಾಂಗಿ ಹೋರಾಟ ವ್ಯರ್ಥ:
ಪಾಟ್ನಾಗೆ ಹರಿಯಾಣ ಚರಣ ಮೊದಲ ಪಂದ್ಯದಲ್ಲಿ ರೋಚಕ ಡ್ರಾ ತಂದುಕೊಟ್ಟಿದ್ದ ನಾಯಕ ಪ್ರದೀಪ್ ನರ್ವಾಲ್ (21 ಅಂಕ) ಮತ್ತೂಮ್ಮೆ ರೈಡಿಂಗ್‌ನಲ್ಲಿ ಮಿಂಚಿದರು. ಮತ್ತೋರ್ವ ರೈಡರ್ ಮೋನು ಗೋಯತ್ ಮೊದಲ ಅವಧಿಯಲ್ಲಿ ಇವರಿಗೆ ಸ್ವಲ್ಪ ಸಾಥ್ ನೀಡಿದರು. ಆದರೆ 2ನೇ ಅವಧಿಯಲ್ಲಿ ಮೋನು ವಿಫಲರಾದರು. ಜತೆಗೆ ರಕ್ಷಣಾ ವಿಭಾಗದ ವಿಶಾಲ್, ವಿಜಯ್ ವಿಫಲರಾಗಿದ್ದು ಪಾಟ್ನಾ ಸೋಲಿಗೆ ಪ್ರಮುಖ ಕಾರಣವಾಯಿತು.
ಮೊದಲ ಅವಧಿಯಲ್ಲಿ ಮುಂಬಾ ಮೇಲುಗೈ:
ಮೊದಲ ಅವಧಿಯ 10 ನಿಮಿಷದಲ್ಲಿ ಉಭಯ ತಂಡಗಳಿಂದ ಸಮಬಲದ ಸೆಣಸಾಟ. ಆದರೂ ಈ ವೇಳೆ ಮುಂಬಾಗೆ 8-5 ಅಂತರದ ಅಲ್ಪ ಮುನ್ನಡೆ. ಮುಂಬಾ ರೈಡರ್‌ಗಳಾದ ಶ್ರೀಕಾಂತ್ ಹಾಗೂ ಕಾಶಿಲಿಂಗ ಅಡಕೆ ತಂಡದ ಮುನ್ನಡೆಯ ರೂವಾರಿಗಳು. ಇವರಿಬ್ಬರ ನೆರವಿನಿಂದ ಮೊದಲ ಅವಧಿಯ ಆಟ ಮುಗಿಯಲು ಇನ್ನೇನು 9 ನಿಮಿಷ 25 ಸೆಕೆಂಡ್ಸ್ ಬಾಕಿ ಇರುವಾಗ ಪಾಟ್ನಾ ಮೊದಲ ಬಾರಿಗೆ ಆಲೌಟಾಯಿತು. ಅಷ್ಟೇ ಅಲ್ಲ ಮೊದಲ ಅವಧಿ ಮುಗಿಯಲು ಇನ್ನೂ 1 ನಿಮಿಷ ಬಾಕಿ ಇರುವಾಗ 2ನೇ ಬಾರಿಗೆ ಪಾಟ್ನಾ ಆಲೌಗೊಳಗಾಯಿತು. ಒಟ್ಟಾರೆ ಮೊದಲ ಅವಧಿ ಮುಕ್ತಾಯಕ್ಕೆ ಮುಂಬೈ 24-14ರಿಂದ ಭರ್ಜರಿ ಮುನ್ನಡೆ ಪಡೆದುಕೊಂಡಿತು.
ಸಿಡಿದೆದ್ದ ಪಾಟ್ನಾ ಪೈರೇಟ್ಸ್:
2ನೇ ಅವಧಿಯ ಆಟದಲ್ಲಿ ಮುಂಬಾಗೆ ಪಾಟ್ನಾ ತಕ್ಕ ತಿರುಗೇಟು ನೀಡಿತು. 2ನೇ ಅವಧಿ ಮುಕ್ತಾಯದ 10 ನಿಮಿಷದ ಆಟ ಬಾಕಿ ಇದ್ದಾಗ ಮುಂಬಾ ಕೂಡ ಮೊದಲ ಸಲ ಆಲೌಟ್ ಬಲೆಗೆ ಬಿತ್ತು. ಈ ಮೂಲಕ ಪಾಟ್ನಾ ಸಿಡಿದೇಳುವ ಮುನ್ಸೂಚನೆ ನೀಡಿತು. ಪಾಟ್ನಾ ಪರ ಮೋನು ಗೋಯತ್, ಪ್ರದೀಪ್ ನರ್ವಾಲ್ ಮಿಂಚಿನ ದಾಳಿ ಸಂಘಟಿಸಿದರು. ಅಂತರವನ್ನು 31-34ಕ್ಕೆ ತಗ್ಗಿಸಿದರು. ಆದರೆ ಮುಂಬೈ ಇದ್ಯಾವುದಕ್ಕೂ ಜಗ್ಗಲಿಲ್ಲ. ನಂತರದ ಹಂತದಲ್ಲಿ ಮುಂಬೈ ಮತ್ತೆ ತನ್ನ ಅಂಕಗಳಿಕೆಯಲ್ಲಿ ಏರಿಕೆ ಮಾಡಿಕೊಂಡು ಮೇಲುಗೈ ಸಾಧಿಸಿತು.
– ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.