ಕನ್ನಡಿಗ ರಿಶಾಂಕ್ ಅಬ್ಬರಕ್ಕೆ ಜೈಪುರ ಚಿತ್
Team Udayavani, Oct 13, 2017, 12:29 PM IST
ಜೈಪುರ: ಕನ್ನಡಿಗ ರಿಶಾಂಕ್ ದೇವಾಡಿಗ ಅವರ ಅಬ್ಬರದ ರೈಡಿಂಗ್‌ನ ಫಲದಿಂದಾಗಿ ಯುಪಿ ಯೋಧಾ ತಂಡ ಪ್ರೊ ಕಬಡ್ಡಿ 5ನೇ ಆವೃತ್ತಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 53-32ರಿಂದ ಭಾರೀ ಜಯ ಸಾಧಿಸಿದೆ.
ಜೈಪುರ ಆತಿಥ್ಯದಲ್ಲೇ ನಡೆದ ಈ ಪಂದ್ಯ ಪ್ಲೇಆಫ್ ಪ್ರವೇಶದ ಹಿನ್ನೆಲೆಯಲ್ಲಿ ಯುಪಿ ಯೋಧಾಕ್ಕೆ ಮಹತ್ವದ್ದಾಗಿತ್ತು. ಈ ನಿಟ್ಟಿನಲ್ಲಿ ಛಲದಿಂದಲೇ ಕಣಕ್ಕೆ ಇಳಿದ ಯೋಧಾ ಆರಂಭದಿಂದಲೇ ಆಕ್ರಮಣಕಾರಿ ಆಟವನ್ನು ಆರಂಭಿಸಿತು. ಇದರಿಂದ ಯೋಧಾ ಅಂಕ ಭಾರೀ ಪ್ರಮಾಣದಲ್ಲಿಯೇ ಏರಿಕೆ ಪಡೆಯುತ್ತಾ ಸಾಗಿತು. ಯೋಧಾ ಹೋರಾಟದ ಮುಂದೆ ಜೈಪುರ ಹೋರಾಟ ಮಂಕಾಯಿತು. ಪಂದ್ಯ ಆರಂಭವಾಗಿ 4ನೇ ನಿಮಿಷದಲ್ಲಿಯೇ ಯೋಧಾ 11-3ರಿಂದ ಭಾರೀ ಮುನ್ನಡೆ ಪಡೆದಿತ್ತು. ಅಂತಿಮವಾಗಿ ಮೊದಲ ಅವಧಿಯ ಅಂತ್ಯದಲ್ಲಿ ಯೋಧಾ 28-16ರಿಂದ ಮುನ್ನಡೆ ಪಡೆಯಿತು. ಯೋಧಾ ತಂಡ ಎರಡನೇ ಅವಧಿಯಲ್ಲಿಯೂ ಅಂಕದ ಬೇಟೆಯನ್ನು ಮುಂದುವರಿಸಿತು. ಈ ಹಂತದಲ್ಲಿ ಜೈಪುರ ಪ್ರತಿ ಹೋರಾಟ ಪ್ರದರ್ಶಿಸಿದರೂ ಪ್ರಯೋಜನವಾಗಲಿಲ್ಲ.
28 ಅಂಕ ಗಳಿಸಿ ರಿಶಾಂಕ್ ದಾಖಲೆ
ಪಂದ್ಯದಲ್ಲಿ ಯೋಧಾ ತಂಡದಲ್ಲಿರುವ ಕನ್ನಡಿಗ ಮತ್ತು ಈ ಪಂದ್ಯದಲ್ಲಿ ನಾಯಕನ ಜವಾಬ್ದಾರಿ ಹೊತ್ತ ರಿಶಾಂಕ್ ದೇವಾಡಿಗ 28 ರೈಡಿಂಗ್ ಅಂಕ ಪಡೆದು ದಾಖಲೆ ನಿರ್ಮಿಸಿದ್ದಾರೆ. ಒಟ್ಟು 27 ರೈಡಿಂಗ್ ಮಾಡಿದ ರಿಶಾಂಕ್ 28 ಅಂಕ ಪಡೆದಿದ್ದಾರೆ. ಇದರಲ್ಲಿ 23 ಟಚ್ ಪಾಯಿಂಟ್, 5 ಬೋನಸ್ ಪಾಯಿಂಟ್ ಸೇರಿವೆ. ಇದು ಪ್ರೊ ಕಬಡ್ಡಿಯ 5ನೇ ಆವೃತ್ತಿಯ ಪಂದ್ಯವೊಂದರಲ್ಲಿ ವೈಯಕ್ತಿಕ ಗರಿಷ್ಠ ಅಂಕದ ಸಾಧನೆಯಾಗಿದೆ.
ಇಂದಿನ ಪಂದ್ಯ
ಪುನೇರಿ-ಗುಜರಾತ್, ರಾತ್ರಿ 8ಕ್ಕೆ
ಬೆಂಗಾಲ್ ವಾರಿಯರ್-ತಮಿಳ್ ತಲೈವಾಸ್, ರಾತ್ರಿ 9ಕ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.