ಗುಜರಾತನ್ನು ಕಟ್ಟಿಹಾಕಿದ ದಬಾಂಗ್ ಡೆಲ್ಲಿ
Team Udayavani, Oct 10, 2018, 10:37 AM IST
ಚೆನ್ನೈ: ಕಳೆದ ವರ್ಷದ ಫೈನಲಿಸ್ಟ್ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡವನ್ನು ಪ್ರೊ ಕಬಡ್ಡಿ ಲೀಗ್‌ನ ಮಂಗಳವಾರದ ಪಂದ್ಯದಲ್ಲಿ ಕಟ್ಟಿಹಾಕಲು ದಬಾಂಗ್ ಡೆಲ್ಲಿ ಯಶಸ್ವಿಯಾಗಿದೆ. ದ್ವಿತೀಯ ಅವಧಿಯಲ್ಲಿ ಚಂದ್ರನ್ ರಂಜಿತ್ ಅವರ ಮಿಂಚಿನ ರೈಡಿಂಗ್‌ನಿಂದಾಗಿ ಗುಜರಾತ್ ಮತ್ತು ಡೆಲ್ಲಿ ನಡುವಣ ಪಂದ್ಯ 32-32 ಅಂಕಗಳಿಂದ ರೋಚಕ ಟೈಯಲ್ಲಿ ಅಂತ್ಯವಾಗಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಆತಿಥೇಯ ತಮಿಳ್ ತಲೈವಾಸ್ ತಂಡ ಸತತ ಎರಡನೇ ಸೋಲು ಕಂಡಿದೆ.
ಹಾಲಿ ಚಾಂಪಿಯನ್ ಪಟ್ನಾ ಪೈರೇಟ್ಸ್ ತಂಡದ ಮೇಲೆ ಉಗ್ರ ದಾಳಿ ಸಂಘಟಿಸಿದ್ದ ತಮಿಳ್ ತಲೈವಾಸ್ ತೆಲುಗು ಟೈಟಾನ್ಸ್‌ಗೆ 33-28 ಅಂಕಗಳಿಂದ ಶರಣಾಯಿತು. ರಾಹುಲ್ ಚೌಧರಿ ಮತ್ತೆ ಪ್ರಚಂಡ ರೈಡಿಂಗ್ ನಡೆಸಿದರು. ರಾಹುಲ್ 20 ಬಾರಿ ರೈಡ್ ಮಾಡಿದ್ದು ಗರಿಷ್ಠ 9 ಅಂಕ ಗಳಿಸಿದರು. ಮೊಸೆನ್ 7 ಅಂಕ, ನಿಲೇಶ್ ಸಾಲುಂಕೆ 5 ಅಂಕ ಪಡೆದು ತಂಡದ ಗೆಲುವಿಗೆ ಕೊಡುಗೆ ಸಲ್ಲಿಸಿದರು. ತಮಿಳ್ ಪರ ಅಜಯ್ 9 ಅಃಕ, ಅಮಿತ್ ಹೂಡ 6 ಅಂಕ ಮತ್ತು ಅತುಲ್ 5 ಅಂಕ ಪಡೆದರು. ತಮಿಳ್ ಸೋಮವಾರದ ಪಂದ್ಯದಲ್ಲಿ ಯುಪಿ ಯೋಧಾ ತಂಡಕ್ಕೆ ಶರಣಾಗಿತ್ತು. ಇಲ್ಲಿನ ಜವಾಹರ್‌ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಮತ್ತು ಡೆಲ್ಲಿ ತಂಡಗಳು ಜಿದ್ದಾಜಿದ್ದಿನ ಆಟ ಪ್ರದರ್ಶಿಸಿದವು. ಕೊನೆಯ ಹಂತದವರೆಗೆ ಎರಡೂ ತಂಡಗಳ ನಡುವೆ ಪೈಪೋಟಿ ನಡೆದಿತ್ತು. ಆದರೆ ಅಂತಿಮವಾಗಿ ಎರಡೂ ತಂಡಗಳು ಕೂಡ 32-32 ಅಂಕಗಳ ಅಂತರದ ಟೈಗೆ ಸಮಾಧಾನ ಪಟ್ಟುಕೊಳ್ಳಬೇಕಾಯಿತು. ಇದು ಕೂಟದಲ್ಲಿ ಎರಡನೇ ಟೈ ಎನ್ನುವುದು ವಿಶೇಷ. ಇದಕ್ಕೂ ಮೊದಲು ಪುನೇರಿ ಪಲ್ಟಾನ್ – ಯು ಮುಂಬಾ ತಂಡಗಳ ನಡುವಿನ ಪಂದ್ಯವೂ 32-32 ಅಂಕಗಳ ಅಂತರದಿಂದ ಟೈ ಆಗಿತ್ತು.
ಸಚಿನ್ ಮಿಂಚು
ಗುಜರಾತ್ ತಂಡದ ಪರ ರೈಡರ್ ಸಚಿನ್ (7 ಅಂಕ) ಮಿಂಚಿನ ಆಟ ಪ್ರದರ್ಶಿಸಿದರು. ಅವರಿಗೆ ಸುನಿಲ್ ಕುಮಾರ್ (4 ಅಂಕ) ಹಾಗೂ ರುತುರಾಜ್ (4 ಅಂಕ) ಉತ್ತಮ ಸಾಥ್ ನೀಡಿದರು. ಇದರಿಂದಾಗಿ ಗುಜರಾತ್ ಸೋಲು ಕಾಣುವುದು ತಪ್ಪಿತು.
ಡೆಲ್ಲಿ ಪರ ಚಂದ್ರನ್ ಮಿಂಚು
ಡೆಲ್ಲಿ ತಂಡದ ತಾರಾ ಆಟಗಾರ ಮೆರಾಜ್ ಶೇಖ್ ವಿಫಲರಾದರು. ಕೇವಲ 1 ಅಂಕ ಪಡೆಯಲಷ್ಟೇ ಶಕ್ತರಾದರು. ಅವರಲ್ಲದೆ ಇತರೆ ಸ್ಟಾರ್ ಆಟಗಾರರಿಂದಲೂ ತಂಡಕ್ಕೆ ಯಶಸ್ಸು ಸಿಗಲಿಲ್ಲ. ಈ ಹಂತದಲ್ಲಿ ಹೆಚ್ಚುವರಿ ಆಟಗಾರನಾಗಿ ಕಣಕ್ಕೆ ಇಳಿದ ಚಂದ್ರನ್ ರಂಜಿತ್ 9 ಅಂಕವನ್ನು ರೈಡಿಂಗ್‌ನಿಂದ ತಂಡಕ್ಕೆ ತಂದುಕೊಟ್ಟು ತಂಡವನ್ನು ಸೋಲಿನಿಂದ ಪಾರು ಮಾಡಿದರು. 15 ಬಾರಿ ರೈಡ್ ಮಾಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.