ಬೆಂಗಳೂರಿಗೆ ಭಾರೀ ಆಘಾತ
ಆತಿಥೇಯ ಟೈಟಾನ್ಸ್‌ಗೆ ಸತತ ಎರಡನೇ ಸೋಲು
Team Udayavani, Jul 22, 2019, 5:01 AM IST
ಹೈದರಾಬಾದ್: ರೈಡರ್ ಸಚಿನ್ (7 ಅಂಕ) ಮತ್ತು ಡಿಫೆಂಡರ್ ಸುನೀಲ್ ಕುಮಾರ್ (6 ಅಂಕ) ಅವರ ಪ್ರಚಂಡ ಆಟದ ನೆರವಿನಿಂದ 7ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ವಿರುದ್ಧ ಗುಜರಾತ್ ಫಾರ್ಚೂನ್‌ಜೈಂಟ್ಸ್ 42-24 ಅಂತರದ ಭಾರೀ ಗೆಲುವು ದಾಖಲಿಸಿದೆ. ಗುಜರಾತ್‌ಗೆ ಇದು ಮೊದಲ ಪಂದ್ಯವಾಗಿತ್ತು. ಬುಲ್ಸ್ ಮೊದಲ ದಿನ ಪಾಟ್ನಾಕ್ಕೆ ಸೋಲುಣಿಸಿತ್ತು.ದ್ವಿತೀಯ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್‌ಗೆ ತಮಿಳ್ ತಲೈವಾಸ್ 39-26 ಅಂತರದಿಂದ ಆಘಾತವಿಕ್ಕಿತು. ಇದು ಟೈಟಾನ್ಸ್‌ಗೆ ಎದುರಾದ ಸತತ 2ನೇ ಸೋಲು.
ಆರಂಭದಲ್ಲೇ ಕಂಗಾಲು
ಮೊದಲ ಗೆಲುವಿನ ಖುಷಿಯಲ್ಲಿದ್ದ ಬುಲ್ಸ್ ಬಹಳ ಆತ್ಮವಿಶ್ವಾÓ ದಿಂದ ಆಡಲಿಳಿಯಿತು. ಆದರೆ ಪಾಟ್ನಾ ವಿರುದ್ಧದ ಪ್ರದರ್ಶನ ಪುನರಾವರ್ತನೆಗೊಂಡೀತೆಂಬ ನಿರೀಕ್ಷೆ ಸುಳ್ಳಾಯಿತು.
ಮೊದಲ ಅವಧಿಯಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್‌ನ ಆಕ್ರಮಣಕಾರಿ ಆಟದ ಎದುರು ಬೆಂಗಳೂರು ಬುಲ್ಸ್ ತಂಡ ಕಂಗಾಲಾಯಿತು. ತಂಡದ ತಾರಾ ರೈಡರ್ ಪವನ್ ಸೆಹ್ರಾವತ್ ಆಟ ನಡೆಯಲಿಲ್ಲ. ರೋಹಿತ್ ಕುಮಾರ್ ತಂತ್ರಗಾರಿಕೆಯೂ ಸಾಗಲಿಲ್ಲ. ಜತೆಗೆ ಮಹೇಂದರ್ ಸಿಂಗ್ ಟ್ಯಾಕಲ್ ನಡೆಸುವಲ್ಲಿ ವಿಫಲರಾದರು. ಇದರ ಸಂಪೂರ್ಣ ಲಾಭವನ್ನು ಎತ್ತಿದ ಗುಜರಾತ್ ಅಬ್ಬರದ ಆಟ ಪ್ರದರ್ಶಿಸಿತು. ಸಚಿನ್, ಜಿ.ಬಿ. ಮೋರೆ ಹಾಗೂ ಸುನೀಲ್ ಕುಮಾರ್ ಮಿಂಚಿನ ಆಟ ಪ್ರದರ್ಶಿ ಸುವ ಮೂಲಕ ತಂಡಕ್ಕೆ ಮೊದಲ ಅವಧಿಯಲ್ಲಿ 10-21 ಅಂತರದ ದೊಡ್ಡ ಮುನ್ನಡೆ ತಂದಿತ್ತರು.
ನಡೆಯದ ಜಾದೂ
ಬೆಂಗಳೂರು 2ನೇ ಅವಧಿಯಲ್ಲಿಯೂ ಚೇತರಿಸಿಕೊಳ್ಳಲಿಲ್ಲ. ನಿರಂತರ ವೈಫಲ್ಯವನ್ನು ಅನುಭವಿಸುತ್ತ ಸಾಗಿತು. ರೈಡರ್ ಪವನ್ ಸೆಹ್ರಾವತ್ (8 ಅಂಕ), ಸುಮಿತ್ ಸಿಂಗ್ (5 ಅಂಕ) ಹಾಗೂ ಡಿಫೆಂಡರ್ ಮಹೇಂದ್ರ ಸಿಂಗ್ (4 ಅಂಕ) ಮಿಂಚಿ ದರೂ ನಾಯಕ ರೋಹಿತ್ ಕುಮಾರ್ ರೈಡಿಂಗ್‌ನಲ್ಲಿ ಭಾರೀ ವೈಫಲ್ಯ ಅನುಭವಿಸಿದರು. 12 ರೈಡಿಂಗ್‌ನಿಂದ ಕೇವಲ 4 ಅಂಕ ಮಾತ್ರ ತರಲು ಸಾಧ್ಯವಾಯಿತು. 5 ಬಾರಿ ಎದುರಾಳಿ ಕೋಟೆಯೊಳಗೆ ಸಿಲುಕಿದ ಇವರು ಮತ್ತೆ 5 ಬಾರಿ ಯಾವುದೇ ಅಂಕ ಪಡೆಯಲಾಗದೆ ವಾಪಸ್ ಆಗಿದ್ದರು. ಗುಜರಾತ್ ಪರ ಹೆಚ್ಚುವರಿ ಆಟಗಾರನಾಗಿ ಕಣಕ್ಕೆ ಇಳಿದ ಸೋನು ರೈಡಿಂಗ್‌ನಿಂದ 5 ಅಂಕ ಪಡೆದು ಗಮನ ಸೆಳೆದರು.
ಪವನ್ ಸೆಹ್ರಾವತ್ ದಾಖಲೆ
ಕಳೆದ ಸಲ ಬುಲ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ರೈಡರ್ ಪವನ್ ಸೆಹ್ರಾವತ್ ಪ್ರೊ ಕಬಡ್ಡಿಯಲ್ಲಿ 350 ರೈಡಿಂಗ್ ಪಾಯಿಂಟ್ ದಾಟಿ ವೈಯಕ್ತಿಕ ದಾಖಲೆ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.