ಸಣ್ಣ ಅಂತರದಲ್ಲಿ ಎಡವಿದ ಬುಲ್ಸ್
Team Udayavani, Aug 12, 2019, 5:00 AM IST
ಅಹ್ಮದಾಬಾದ್: ಸತತವಾಗಿ ಗೆಲ್ಲುತ್ತ ಭರ್ಜರಿಯಾಗಿ ಮುನ್ನುಗ್ಗುತ್ತಿದ್ದ ಬೆಂಗಳೂರು ಬುಲ್ಸ್ ತಂಡಕ್ಕೆ 7ನೇ ಆವೃತ್ತಿ ಪ್ರೊ ಕಬಡ್ಡಿ ಕೂಟದಲ್ಲಿ ಮತ್ತೂಮ್ಮೆ ಲಗಾಮು ಬಿದ್ದಿದೆ. ಹರ್ಯಾಣ ಸ್ಟೀಲರ್ ತಂಡದೆದುರು 33-30 ಅಂತರದಿಂದ ಸೋಲನುಭವಿಸಿದೆ. ಇದು 6 ಪಂದ್ಯಗಳನ್ನಾಡಿರುವ ಬುಲ್ಸ್ ಗೆ ಎದುರಾಗಿರುವ 2ನೇ ಸೋಲು. ಹರ್ಯಾಣಕ್ಕೆ ಒಲಿದ 3ನೇ ಜಯ.
ದಿನದ ದ್ವಿತೀಯ ಪಂದ್ಯದಲ್ಲಿ ಆತಿಥೇಯ ಗುಜರಾತ್ ಫಾರ್ಚೂನ್‌ಜೈಂಟ್ಸ್‌ಗೆ ತೆಲುಗು ಟೈಟಾನ್ಸ್ 30-24 ಅಂತರದ ಸೋಲುಣಿಸಿತು. ಇದು ತವರಿನಲ್ಲಿ ಗುಜರಾತ್‌ಗೆ ಎದುರಾದ ಸತತ 2ನೇ ಆಘಾತ.
ಮಿಂಚದ ಸೆಹ್ರಾವತ್
ಬೆಂಗಳೂರು ಬುಲ್ಸ್ ಪರ ಈ ಹಿಂದಿನ ಪಂದ್ಯಗಳಲ್ಲಿ ಪವನ್ ಸತತವಾಗಿ ಮಿಂಚಿದ್ದರು. ಇದು ಗೆಲುವಿಗೆ ಮುಖ್ಯ ಕಾರಣವಾಗಿತ್ತು. ರವಿವಾರದ ಪಂದ್ಯದಲ್ಲಿ ಸೆಹ್ರಾವತ್ ಅಂತಹ ಯಶಸ್ಸು ಸಾಧಿಸಲಿಲ್ಲ. 14 ಬಾರಿ ದಾಳಿ ನಡೆಸಿದ ಅವರು 5 ಬಾರಿ ಮಾತ್ರ ಯಶಸ್ವಿಯಾದರು.
ಈ ಪಂದ್ಯದಲ್ಲಿ ಬೆಂಗಳೂರು ಪರ ಮಿಂಚಿದ್ದು ರೋಹಿತ್ ಕುಮಾರ್. ಇದುವರೆಗೆ ಕೂಟದಲ್ಲಿ ಹೇಳಿ ಕೊಳ್ಳುವಂತಹ ಯಶಸ್ಸು ಸಾಧಿಸದ ಅವರು, ಉತ್ತಮವಾಗಿಯೇ ಆಡಿ ತಮ್ಮ ನೈಜ ಆಟವನ್ನು ತೋರ್ಪಡಿಸಿದರು. 17 ಬಾರಿ ಎದುರಾಳಿ ಅಂಕಣಕ್ಕೆ ಹೋದ ಅವರು 8 ಬಾರಿ ಯಶಸ್ವಿಯಾದರು. ಇನ್ನೆರಡು ಬಾರಿ ಹೆಚ್ಚುವರಿ ಅಂಕ ಪಡೆದರು. ರೋಹಿತ್ ಸರ್ವಾಂಗೀಣ ಯಶಸ್ಸು ಸಾಧಿಸಿದರು.
ಅಂತಿಮ ಹಂತದಲ್ಲಿ ಜಯಶಾಲಿಗಳ ನಿರ್ಣಯವಾಗಿದ್ದು ಪಂದ್ಯದ ರೋಚಕತೆಗೆ ಸಾಕ್ಷಿ. ಇನ್ನೊಂದು ಸ್ವಲ್ಪ ಯತ್ನಿಸಿದ್ದರೆ, ಬೆಂಗಳೂರಿಗೆ ಗೆಲುವು ಅಸಾಧ್ಯವೇನಾಗಿರಲಿಲ್ಲ. ಹರ್ಯಾಣ ಪರ ದಾಳಿಯಲ್ಲಿ ವಿಕಾಸ್ ಖಂಡೊಲ ಮಿಂಚಿದರು. ರಕ್ಷಣೆಯಲ್ಲಿ ವಿಕಾಸ್ ಕಾಳೆ ಯಶಸ್ವಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.