ಪ್ರೊ ಕಬಡ್ಡಿಯಲ್ಲಿ ಕನ್ನಡಿಗರ ಕಲರವ
Team Udayavani, Dec 22, 2021, 5:20 AM IST
ಈ ಬಾರಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಒಟ್ಟು 14 ಕನ್ನಡಿಗರು 9 ತಂಡಗಳ ಪರ ಕಣಕ್ಕಿಳಿಯಲಿದ್ದಾರೆ. ಈ ಪೈಕಿ ಹಾಲಿ ಚಾಂಪಿ ಯನ್ ಬೆಂಗಾಲ್ ವಾರಿಯರ್ಸ್ ಪರ ಅತೀ ಹೆಚ್ಚು 6 ಕನ್ನಡಿಗರು ಆಡುತ್ತಿರುವುದು ವಿಶೇಷ. ಆದರೆ ತವರು ನೆಲ ಬೆಂಗಳೂರು ಬುಲ್ಸ್‌ನಲ್ಲೇ ಕನ್ನಡಿಗರೇ ಇಲ್ಲದಿರುವುದು ವಿಪರ್ಯಾಸವೇ ಸರಿ! ಈ ಕನ್ನಡಿಗ ಕಬಡ್ಡಿಪಟುಗಳ ಕಿರು ಪರಿಚಯ ಇಲ್ಲಿದೆ.
ಬೆಂಗಾಲ್ ವಾರಿಯರ್: ಹಾಲಿ ಚಾಂಪಿಯನ್, ಕನ್ನಡಿಗ ಬಿ.ಸಿ. ರಮೇಶ್ ತರಬೇತುದಾರರಾಗಿರುವ ಬೆಂಗಾಲ್ ವಾರಿಯರ್ಸ್ ತಂಡದಲ್ಲಿ ಸುಕೇಶ್ ಹೆಗ್ಡೆ, ಜೆ. ದರ್ಶನ್, ಸಚಿನ್ ವಿ, ಮನೋಜ್ ಗೌಡ, ಆನಂದ್ ವಿ. ಜತೆಗೆ ಮುಂಬಯಿಯಲ್ಲಿ ನೆಲೆಸಿರುವ ಕರ್ನಾಟಕ ಮೂಲದ ರಿಷಾಂಕ್ ಕೂಡ ಇದ್ದಾರೆ.
ದಬಾಂಗ್ ಡೆಲ್ಲಿ: ಲೀಗ್ ಹಂತದಿಂದಲೂ ಆಡುತ್ತಿರುವ ಅನುಭವಿ ಡಿಫೆಂಡರ್ ಜೀವಾ ಕುಮಾರ್ ಡೆಲ್ಲಿ ಪರ ಆಡುತ್ತಿರುವ ಏಕೈಕ ಕನ್ನಡಿಗ ಆಟಗಾರ. ಇದಕ್ಕೂ ಮುನ್ನ ಇವರು ಮುಂಬಯಿ ಹಾಗೂ ಬೆಂಗಾಲ್ ತಂಡದ ಪರ ಆಡಿದ್ದರು.
ಪಟ್ನಾ ಪೈರೆಟ್ಸ್: ಅನುಭವಿ ರೈಡರ್ ಪ್ರಂಶಾತ್ ಕುಮಾರ್ ರೈ ಮೂರು ಬಾರಿಯ ಚಾಂಪಿಯನ್ ಪಟ್ನಾ ಪೈರೆಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ತೆಲುಗು ಟೈಟಾನ್ಸ್: ಕಳೆದ ಬಾರಿ ಆಡಿದ ಮೊದಲ ಆವೃತ್ತಿಯಲ್ಲೇ ಅಮೋಘ ಪ್ರದರ್ಶನ ತೋರಿದ ಯುವ ರೈಡರ್ ರಾಕೇಶ್ ಕುಮಾರ್ ಅವರನ್ನು ತೆಲುಗು ಟೈಟಾನ್ಸ್ ರಿಟೈನ್ ಮೂಲಕ ತಂಡದಲ್ಲಿ ಸ್ಥಾನ ನೀಡಿದೆ.
ಜೈಪುರ್ ಪಿಂಕ್ ಪ್ಯಾಂಥರ್: ಇದೇ ಮೊದಲ ಬಾರಿ ಪ್ರೊ ಕಬಡ್ಡಿಯಲ್ಲಿ ಕಣಕ್ಕಿಳಿಯುತ್ತಿರುವ ಡಿಫೆಂಡರ್ ಪವನ್ ಕುಮಾರ್ ಜೈಪುರ ತಂಡದಲ್ಲಿ ತಮ್ಮ ಅದೃಷ್ಟಪರೀಕ್ಷೆಗೆ ಕಾಯುತ್ತಿದ್ದಾರೆ.
ತಮಿಳ್ ತಲೈವಾಸ್: ಡು ಆರ್ ಡೈ ಹಂತದಲ್ಲಿ ಚಾಕಚಕ್ಯತೆಯಿಂದ ಅಂಕ ಗಳಿಸುವ ನಿಪುಣ, ತಮಿಳುನಾಡು ಮೂಲದ ಪ್ರಪಂಚನ್ ತಮಿಳ್ ತಲೈವಾಸ್ ತಂಡದಲ್ಲಿ ಆಡುತಿದ್ದಾರೆ. ಇವರು ಬೆಂಗಳೂರಿನ ಕಸ್ಟಮ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಂತರ್ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನೇ ಪ್ರತಿನಿಧಿಸುತ್ತಿದ್ದಾರೆ.
ಗುಜರಾತ್ ಜೈಂಟ್ಸ್: ಮೊದಲ ಬಾರಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡಲು ಸನ್ನದ್ಧವಾಗಿರುವ ಯುವ ರೈಡರ್ ರತನ್ ಕೆ. ಗುಜರಾತ್ ತಂಡದ ಪರ ಮ್ಯಾಟ್‌ಗಿಳಿಯುವ ನಿರೀಕ್ಷೆಯಲ್ಲಿದ್ದಾರೆ.
ಪುಣೇರಿ ಪಲ್ಟಾನ್: ಪುಣೇರಿ ಪಲ್ಟಾನ್‌ನಲ್ಲಿ ಇಬ್ಬರು ಕನ್ನಡಿಗರಾದ ಚೇತನ್ ಮತ್ತು ವಿಶ್ವಾಸ್ ಮೊದಲ ಬಾರಿಗೆ ತಮ್ಮ ಸಾಮರ್ಥ್ಯ ತೋರಲು ಮುಂದಾಗಿದ್ದಾರೆ.
ಯು ಮುಂಬಾ: ಕಳೆದ ವರ್ಷ ಕರ್ನಾಟಕ ರಾಜ್ಯದಿಂದ ಭಾರತ ಕಬಡ್ಡಿ ತಂಡದ ಸಂಭಾವ್ಯ ಆಟಗಾರರ ಯಾದಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರೀಡಾಪಟುವಾಗಿದ್ದ ಸಚಿನ್ ಪ್ರತಾಪ್ ಈ ಬಾರಿ ಯು ಮುಂಬಾ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.