Pro Kabaddi: ಬೆಂಗಳೂರು ಬುಲ್ಸ್ ಗೆ 6ನೇ ಗೆಲುವು
Team Udayavani, Jan 19, 2024, 11:34 PM IST
ಹೈದರಾಬಾದ್: ಹೈದರಾಬಾದ್ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಾವಳಿಯನ್ನು ಬೆಂಗಳೂರು ಬುಲ್ಸ್ ಗೆಲುವಿನೊಂದಿಗೆ ಆರಂಭಿ ಸಿದೆ. ಆತಿಥೇಯ ತೆಲುಗು ಟೈಟಾನ್ಸ್ ತವರಲ್ಲೂ ಸೋಲಿನ ಆಟ ಮುಂದು ವರಿಸಿದೆ. ಬುಲ್ಸ್ 42-26 ಅಂಕಗಳಿಂದ ಟೈಟಾನ್ಸ್‌ಗೆ ಆಘಾತವಿಕ್ಕಿತು.
ಇದು ಬುಲ್ಸ್ ಸಾಧಿಸಿದ 6ನೇ ಜಯವಾದರೆ, ಟೈಟಾನ್ಸ್ ಅನುಭವಿಸಿದ 12ನೇ ಸೋಲು. ಬುಲ್ಸ್ ಪರ ರೈಡರ್‌ಗಳಾದ ಅಕ್ಷಿತ್ 9, ವಿಕಾಸ್ ಖಂಡೋಲ 6, ಡಿಫೆಂಡರ್ ಸುರ್ಜೀತ್ ಸಿಂಗ್ 7 ಅಂಕ ಗಳಿಸಿದರು. ಟೈಟಾನ್ಸ್ ಪರ ನಾಯಕ ಪವನ್ ಸೆಹ್ರಾವತ್ ಒಬ್ಬರೇ 7 ಅಂಕ ತಂದಿತ್ತರು.
ಪಾಟ್ನಾಗೆ ಜಯ: ಇನ್ನೊಂದು ಪಂದ್ಯದಲ್ಲಿ ಪಾಟ್ನಾ 34-31 ಅಂಕಗ ಳಿಂದ ಯುಪಿ ಯೋಧಾಸ್ ವಿರುದ್ಧ ಮೇಲುಗೈ ಸಾಧಿಸಿತು. ಇದು ಪಾಟ್ನಾಕ್ಕೆ ಒಲಿದ 6ನೇ ಜಯ. ಯೋಧಾಸ್ 10ನೇ ಸೋಲಿನಿಂದ ದಿಕ್ಕೆಟ್ಟಿತು.
ರೈಡರ್‌ಗಳಾದ ಸಚಿನ್ ಮತ್ತು ಮಂಜೀತ್ (ತಲಾ 6 ಅಂಕ) ಪಾಟ್ನಾ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಯೋಧಾಸ್ ಪರ ಶಿವಂ ಚೌಧರಿ ಪಂದ್ಯದಲ್ಲೇ ಸರ್ವಾಧಿಕ 7 ಅಂಕ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.