ಪ್ರೊ ಕಬಡ್ಡಿ: 2 ವರ್ಷಗಳ ಬಳಿಕ ಬೆಂಗಳೂರು ಚರಣ
Team Udayavani, Aug 31, 2019, 5:11 AM IST
ಬೆಂಗಳೂರು: ಪ್ರೊ ಕಬಡ್ಡಿ 7ನೇ ಆವೃತ್ತಿ ಬೆಂಗಳೂರು ಚರಣದ ಸ್ಪರ್ಧೆ ಶನಿವಾರದಿಂದ “ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ’ದಲ್ಲಿ ಆರಂಭವಾಗಲಿದೆ. 2 ವರ್ಷಗಳ ಬಳಿಕ ಬೆಂಗಳೂರಿಗೆ ಕೂಟದ ಆತಿಥ್ಯ ಲಭಿಸಿರುವುದು ವಿಶೇಷ.
ಸಂಜೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡವನ್ನು ಎದುರಿಸಲಿದೆ. 2ನೇ ಪಂದ್ಯದಲ್ಲಿ ಯು ಮುಂಬಾ ತಂಡ ಬಲಿಷ್ಠ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೆಣಸಲಿದೆ.
ವಿಶ್ವಾಸದಲ್ಲಿ ಹಾಲಿ ಚಾಂಪಿಯನ್ಸ್
ರೋಹಿತ್ ಕುಮಾರ್ ನೇತೃತ್ವದ ಬೆಂಗಳೂರು ತಂಡ ಹಾಲಿ ಚಾಂಪಿಯನ್ಸ್ ಖ್ಯಾತಿಯೊಂದಿಗೆ ತವರಿನ ಚರಣ ಆರಂಭಿಸಲು ತುದಿಗಾಲಲ್ಲಿ ನಿಂತಿದೆ. ಅದರಲ್ಲೂ ಹೊಸದಿಲ್ಲಿ ಚರಣದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬುಲ್ಸ್ 41-30 ಅಂಕಗಳ ಅಂತರದಿಂದ ಜೈಪುರ್ ವಿರುದ್ಧ ಗೆಲುವು ಸಾಧಿಸಿರುವ ಆತ್ಮವಿಶ್ವಾಸದಲ್ಲಿದೆ.
ಪವನ್ ಸೆಹ್ರಾವತ್ ಪ್ರಚಂಡ ಫಾರ್ಮ್ ನಲ್ಲಿದ್ದಾರೆ. ರೋಹಿತ್ ಕುಮಾರ್ ನಾಯಕನ ಆಟ ಆಡುತ್ತಿದ್ದಾರೆ. ಮಹೇಂದರ್ ಸಿಂಗ್ ಹಾಗೂ ಮೋಹಿತ್ ಸೆಹ್ರಾವತ್ ಟ್ಯಾಕಲ್ ಮೂಲಕ ಗಮನ ಸೆಳೆದಿದ್ದಾರೆ.
ಬೆಂಗಳೂರು ತಂಡ ಇದುವರೆಗೆ ಒಟ್ಟು 11 ಪಂದ್ಯ ಆಡಿದೆ. ಆರನ್ನು ಗೆದ್ದು, ಐದರಲ್ಲಿ ಸೋಲನುಭವಿಸಿದೆ. 33 ಅಂಕಗಳೊಂದಿಗೆ 5ನೇ ಸ್ಥಾನಿಯಾಗಿದೆ.
2 ವರ್ಷಗಳ ಬಳಿಕ ಸಂಭ್ರಮ
ಪ್ರೊ ಕಬಡ್ಡಿ ಪಂದ್ಯಾವಳಿಯ ಕಳೆದೆರಡು ಆವೃತ್ತಿಗಳ ಬೆಂಗಳೂರಿನ ಪಂದ್ಯಗಳನ್ನು ಬೇರೆ ರಾಜ್ಯದಲ್ಲಿ ಆಡಲಾಗಿತ್ತು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕಂಠೀರವ ಒಳಾಂಗಣ ಕ್ರೀಡಾಂಗಣವನ್ನು ಕಬಡ್ಡಿ ಕೂಟ ಆಯೋಜಿಸಲು ಬುಲ್ಸ್‌ಗೆ ಅವಕಾಶ ನೀಡಿರಲಿಲ್ಲ. ಅಂದು ಸಾಕಷ್ಟು ಪ್ರಯತ್ನದ ಬಳಿಕವೂ ಬೆಂಗಳೂರು ಬುಲ್ಸ್ ಫ್ರಾಂಚೈಸಿ ಸುಮ್ಮನಾಗಿತ್ತು. ಆದರೆ ಈ ಸಲ ಕ್ರೀಡಾ ಇಲಾಖೆ ಮನವೊಲಿಸಲು ಯಶಸ್ವಿಯಾಗಿದೆ. ಇದರಿಂದ ತವರಿನ ಕಬಡ್ಡಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.