ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್, ಯುಪಿ ಯೋಧ ಸೆಮಿಫೈನಲ್ ಪ್ರವೇಶ
ಬುಧವಾರ ಸೆಮಿಫೆನಲ್ಸ್ 1. ಪಾಟ್ನಾ ಪೈರೇಟ್ಸ್-ಯುಪಿ ಯೋಧ 2. ದಿಲ್ಲಿ-ಬುಲ್ಸ್
Team Udayavani, Feb 21, 2022, 10:24 PM IST
ಬೆಂಗಳೂರು: ಪ್ರೊ ಕಬಡ್ಡಿ ಎಲಿಮಿನೇಟರ್ ಪಂದ್ಯಗಳಲ್ಲಿ ಜಯ ಸಾಧಿಸಿದ ಯುಪಿ ಯೋಧ ಮತ್ತು ಬೆಂಗಳೂರು ಬುಲ್ಸ್ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇರಿಸಿವೆ.
ಬುಧವಾರದ ಉಪಾಂತ್ಯದಲ್ಲಿ ಈ ತಂಡಗಳು ಕ್ರಮವಾಗಿ ಪಾಟ್ನಾ ಪೈರೇಟ್ಸ್ ಮತ್ತು ದಬಾಂಗ್ ದಿಲ್ಲಿ ವಿರುದ್ಧ ಸೆಣಸಲಿವೆ. ಈ ತಂಡಗಳು ಲೀಗ್ ಹಂತದ ಮೊದಲೆರಡು ಸ್ಥಾನ ಅಲಂಕರಿಸಿ ನೇರವಾಗಿ ಸೆಮಿಫೈನಲ್ ತಲುಪಿದ್ದವು.
ಸೋಮವಾರದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ಯೋಧ 42-31 ಅಂಕಗಳಿಂದ ಪುನೇರಿ ಪಲ್ಟಾನ್ ಆಟವನ್ನು ಮುಗಿಸಿತು. ಬಳಿಕ ಆತಿಥೇಯ ಬೆಂಗಳೂರು ಬುಲ್ಸ್ 49-29 ಅಂತರದಿಂದ ಗುಜರಾತ್ ಜೈಂಟ್ಸ್‌ಗೆ ಆಘಾತವಿಕ್ಕಿತು.
ಸಂಘಟಿತ ಹೋರಾಟ
ಪವನ್ ಸೆಹ್ರಾವತ್ ಕಪ್ತಾನನ ಆಟವಾಡಿದ್ದು (13), ರೈಡರ್ ಚಂದ್ರನ್ ರಂಜಿತ್ (7) ಸರಿಯಾದ ಹೊತ್ತಿನಲ್ಲಿ ಮಿಂಚಿದ್ದೆಲ್ಲ ಬುಲ್ಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು. ಡಿಫೆಂಡರ್ ಮಹೇಂದರ್ ಸಿಂಗ್ (5), ರೈಡರ್ ಭರತ್ (6) ಕೂಡ ಉಪಯುಕ್ತ ಪ್ರದರ್ಶನ ನೀಡಿದರು. ಇವರಲ್ಲಿ ರಂಜಿತ್, ಮಹೇಂದರ್ ಲೀಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಆದರೆ ಸೆಮಿಫೈನಲ್‌ನಲ್ಲಿ ತಂಡದ ಕೈ ಬಿಡಲಿಲ್ಲ.
ಲೀಗ್ ಹಂತದ 5ನೇ ಸ್ಥಾನಿಯಾಗಿ ಎಲಿಮಿನೇಟರ್ ಸುತ್ತಿಗೆ ಬಂದ ಬುಲ್ಸ್ ಸಾಂ ಕ ಆಟವಾಡಿ ಆರಂಭದಿಂದಲೇ ಮೇಲುಗೈ ಸಾಧಿಸುತ್ತ ಬಂತು. ವಿರಾಮದ ವೇಳೆ 24-17 ಅಂತರದ ಉತ್ತಮ ಮುನ್ನಡೆಯನ್ನು ಗಳಿಸಿಕೊಂಡಿತು. ದ್ವಿತೀಯಾರ್ಧದಲ್ಲಿ ಇನ್ನಷ್ಟು ಚೇತೋಹಾರಿ ಪ್ರದರ್ಶನ ನೀಡಿತು.
ಗುಜರಾತ್ ಜೈಂಟ್ಸ್ ಲೀಗ್‌ನಲ್ಲಿ 4ನೇ ಸ್ಥಾನದಲ್ಲಿತ್ತು. ಆದರೆ ಬುಲ್ಸ್ ಆಕ್ರಮಣಕ್ಕೆ ತಲೆಬಾಗಿತು. ಗುಜರಾತ್ ಪರ ರೈಡರ್‌ಗಳಾದ ರಾಕೇಶ್ (8) ಮತ್ತು ಮಹೇಂದ್ರ ರಜಪೂತ್ (5) ಉಳಿದವರಿಂದ ಗಮನಾರ್ಹ ಪ್ರದರ್ಶನ ಮೂಡಿಬರಲಿಲ್ಲ.
ಯೋಧರ ಗೆಲುವಿನ ಆಟ
ಅದೃಷ್ಟದ ಬಲದಿಂದ ಎಲಿಮಿನೇಟರ್ ಸುತ್ತಿಗೆ ಬಂದ ಪುನೇರಿ ಪಲ್ಟಾನ್ ಆಟ ಯುಪಿ ಯೋಧ ವಿರುದ್ಧ ನಡೆಯಲಿಲ್ಲ. ಆರಂಭದ 4 ನಿಮಿಷದಲ್ಲಷ್ಟೇ ಮೇಲುಗೈ ಹೊಂದಿದ್ದ ಪುನೇರಿ, ಪಂದ್ಯದ 13ನೇ ನಿಮಿಷದಲ್ಲೊಮ್ಮೆ 10-10 ಸಮಬಲ ಸಾಧಿಸಿತು. ಅನಂತರ ಯುಪಿ ಯೋಧರ ಆಕ್ರಮಣಕ್ಕೆ ತತ್ತರಿಸಿತು. ವಿರಾಮದ ವೇಳೆ ಯುಪಿ25-17ರ ಲೀಡ್ ಹೊಂದಿತ್ತು.
ರೈಡರ್ ಪ್ರದೀಪ್ ನರ್ವಾಲ್ ಅಮೋಘ ಆಟದ ಮೂಲಕ ಯೋಧ ತಂಡಕ್ಕೆ ಶಕ್ತಿ ತುಂಬಿದರು. ಅವರ ಗಳಿಕೆ 18 ಅಂಕ. ಮತ್ತೋರ್ವ ರೈಡರ್ ಸುರೇಂದರ್ ಗಿಲ್ ಹಾಗೂ ಡಿಫೆಂಡರ್ ಸುಮಿತ್ ತಲಾ 5 ಅಂಕ ಗಳಿಸಿದರು. ಪುನೇರಿ ತಂಡದ ಪರ ಮಿಂಚಿದ್ದು ರೈಡರ್ ಅಸ್ಲಾಮ್ ಇನಾಮಾªರ್. ಅವರಿಂದ 10 ಅಂಕ ಬಂತು.
ಪಂದ್ಯದ ಮೊದಲಾರ್ಧದಲ್ಲಿ ಎರಡು ಬಾರಿ ಆಲೌಟಾದ ಪುನೇರಿ, ದ್ವಿತೀಯಾರ್ಧದ ಆರಂಭದಲ್ಲೇ ಮತ್ತೆ ಆಲೌಟಾಯಿತು. ಅಲ್ಲಿಗೆ ತಂಡದ ಪರಿಸ್ಥಿತಿ ಸಂಪೂರ್ಣ ಹಳಿತಪ್ಪಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.