ಪ್ರೊ ಕಬಡ್ಡಿ: ದಬಾಂಗ್ ಡೆಲ್ಲಿಗೆ ತಿವಿದೀತೇ ಬೆಂಗಳೂರು ಬುಲ್ಸ್?
ಯುಪಿ ಯೋಧಾಸ್-ತಮಿಳ್ ತಲೈವಾಸ್
Team Udayavani, Dec 13, 2022, 7:45 AM IST
ಮುಂಬಯಿ: ಪ್ರೊ ಕಬಡ್ಡಿ ಪಂದ್ಯಾವಳಿಯ ಲೀಗ್ ಹಂತದ ಸ್ಪರ್ಧೆಗಳಿಗೆ ತೆರೆ ಬಿದ್ದಿದೆ. ಮಂಗಳವಾರ ಎಲಿಮಿನೇಟರ್ ಪಂದ್ಯಗಳು ನಡೆಯಲಿದ್ದು, ಬೆಂಗಳೂರು ಬುಲ್ಸ್ ಕೂಡ ರೇಸ್‌ನಲ್ಲಿದೆ.
ಒಟ್ಟು 6 ತಂಡಗಳು ದ್ವಿತೀಯ ಸುತ್ತು ತಲುಪಿವೆ. ಮೊದಲೆರಡು ಸ್ಥಾನ ಅಲಂಕರಿಸಿದ ಜೈಪುರ್ ಪಿಂಕ್ ಪ್ಯಾಂಥರ್ (82 ಅಂಕ) ಮತ್ತು ಪುನೇರಿ ಪಲ್ಟಾನ್ (80 ಅಂಕ) ನೇರವಾಗಿ ಸೆಮಿಫೈನಲ್‌ಗೆ ಬಂದಿವೆ. 3ರಿಂದ 6ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಸುತ್ತಿನಲ್ಲಿ ಅದೃಷ್ಟಪರೀಕ್ಷೆಗೆ ಇಳಿಯಲಿವೆ. ಇಲ್ಲಿ ಗೆದ್ದ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಸೋತ ತಂಡದ ಅಭಿಯಾನ ಕೊನೆಗೊಳ್ಳಲಿದೆ.
ಎಲಿಮಿನೇಟರ್ ಸುತ್ತಿನಲ್ಲಿ ಸ್ಪರ್ಧೆಗೆ ಇಳಿಯುವ ತಂಡಗಳೆಂದರೆ ಬೆಂಗಳೂರು ಬುಲ್ಸ್ (74 ಅಂಕ), ಯುಪಿ ಯೋಧಾಸ್ (71 ಅಂಕ), ತಮಿಳ್ ತಲೈವಾಸ್ (66 ಅಂಕ) ಮತ್ತು ದಬಾಂಗ್ ಡೆಲ್ಲಿ (63 ಅಂಕ). ಹರ್ಯಾಣ ಸ್ಟೀಲರ್ ಸ್ವಲ್ಪದರಲ್ಲೇ ಈ ಅವಕಾಶವನ್ನು ಕಳೆದುಕೊಂಡಿತು. ಅದು 61 ಅಂಕಗಳೊಂದಿಗೆ 7ನೇ ಸ್ಥಾನಿಯಾಯಿತು.
ಮಂಗಳವಾರ ರಾತ್ರಿ ಮುಂಬಯಿಯಲ್ಲಿ ನಡೆಯಲಿರುವ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ಮುಖಾಮುಖಿ ಆಗಲಿವೆ. ಅನಂತರ ಯುಪಿ ಯೋಧಾಸ್-ತಮಿಳ್ ತಲೈವಾಸ್ ಎದುರಾಗಲಿವೆ.
ಕೂಟದಲ್ಲಿ ಬಹಳಷ್ಟು ಸಲ ಅಗ್ರಸ್ಥಾನ ಅಲಂಕರಿಸಿದ ಬೆಂಗಳೂರು ಬುಲ್ಸ್ ಕನ್ನಡಿಗರ ನೆಚ್ಚಿನ ತಂಡವಾಗಿದೆ. ರೈಡರ್ ಭರತ್ ಈ ತಂಡದ ಪ್ರಮುಖ ಆಕರ್ಷಣೆ. ಬುಲ್ಸ್ 22 ಲೀಗ್ ಪಂದ್ಯಗಳಲ್ಲಿ 13 ಪಂದ್ಯಗಳನ್ನು ಗೆದ್ದಿದೆ. ಎಂಟರಲ್ಲಿ ಸೋತಿದ್ದು, ಒಂದು ಪಂದ್ಯ ಡ್ರಾಗೊಂಡಿದೆ.
ದಬಾಂಗ್ ಡೆಲ್ಲಿ 6ನೇ ಸ್ಥಾನಿಯಾಗಿ ಲೀಗ್ ವ್ಯವಹಾರ ಮುಗಿಸಿದೆ. 10 ಪಂದ್ಯಗಳನ್ನು ಗೆದ್ದು, ಹತ್ತರಲ್ಲಿ ಸೋತಿದೆ. 2 ಪಂದ್ಯ ಡ್ರಾಗೊಂಡಿದೆ.
ಬುಲ್ಸ್ 2-0 ಮುನ್ನಡೆ
ಲೀಗ್ ಹಂತದಲ್ಲಿ ಡೆಲ್ಲಿ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಬುಲ್ಸ್ ಜಯ ಸಾಧಿಸಿದ್ದರಿಂದ ಸಹಜವಾಗಿಯೇ ಹೆಚ್ಚಿನ ಆತ್ಮವಿಶ್ವಾಸ ಹೊಂದಿದೆ. ಎರಡೂ ಪಂದ್ಯಗಳ ಆರಂಭದಲ್ಲಿ ಡೆಲ್ಲಿಯೇ ಮುಂದಿದ್ದರೂ ಕೊನೆಯಲ್ಲಿ ಬುಲ್ಸ್ ತಿರುಗಿ ಬಿದ್ದು ಗೆಲುವು ಕಾಣುವಲ್ಲಿ ಯಶಸ್ವಿಯಾಗಿತ್ತು.
ರೈಡರ್ ಭರತ್ ಪ್ರಮುಖ ಆಟಗಾರ. ವಿಕಾಸ್ ಕಂಡೋಲ ಗೇಮ್ ಚೇಂಜರ್ ಆಗಬೇಕಿದೆ. ಸೌರಭ್ ನಂದಲ್ ಉತ್ತಮ ಲಯದಲ್ಲಿದ್ದಾರೆ. ಅಮನ್ ಫಾರ್ಮ್ ಗೆ ಮರಳಿದ್ದರಿಂದ ಬುಲ್ಸ್ ಡಿಫೆನ್ಸ್‌ಗೆ ಹೆಚ್ಚಿನ ಬಲ ಬಂದಿದೆ. ರೈಟ್ ಕವರ್ ಮಾತ್ರ ದುರ್ಬಲ. ಇಲ್ಲಿ ನಾಯಕ ಮಹೇಂದರ್ ಸಿಂಗ್ ಮೇಲೆ ತುಸು ಒತ್ತಡವಿದೆ.
ರಕ್ಷಣ ವಿಭಾಗ ನಿರೀಕ್ಷಿತ ಯಶಸ್ಸು ಪಡೆಯದಿರುವುದು ಡೆಲ್ಲಿ ಪಾಲಿಗೆ ತುಸು ಹಿನ್ನಡೆಯಾಗಿ ಪರಿಣಮಿಸಿದೆ. ಅಮಿತ್ ಹೂಡಾ ಮತ್ತು ಸಂದೀಪ್ ಧುಲ್ ಮೇಲೆ ಹೆಚ್ಚಿನ ಭಾರ ಬಿದ್ದಿದೆ. ಆದರೆ ರೈಡಿಂಗ್ ವಿಭಾಗ ಬಲಿಷ್ಠವಾಗಿದೆ.
ಈ ಎರಡು ತಂಡಗಳು ಪ್ರೊ ಕಬಡ್ಡಿ ಇತಿಹಾಸದಲ್ಲಿ 19 ಸಲ ಎದುರಾಗಿವೆ. ಡೆಲ್ಲಿ 9, ಬುಲ್ಸ್ 8 ಗೆಲುವು ಕಂಡಿದೆ. 2 ಪಂದ್ಯ ಟೈ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.