ಬುಲ್ಸ್ ದಾಳಿಗೆ ಬೆದರಿದ ತಲೈವಾಸ್
Team Udayavani, Sep 2, 2019, 12:05 AM IST
ಬೆಂಗಳೂರು: ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ 7ನೇ ಆವೃತ್ತಿಯ ಬೆಂಗಳೂರು ಚರಣದಲ್ಲಿ ರವಿವಾರ ನಡೆದ ಎರಡನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡವನ್ನು 33-27 ಅಂಕಗಳಿಂದ ಸೋಲಿಸಿದೆ.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರಂಭದಿಂದಲೇ ಬುಲ್ಸ್ ಆಕ್ರಮಣಕಾರಿಯಾಗಿ ಆಡಿ ಮೇಲುಗೈ ಸಾಧಿಸುತ್ತ ಬಂತು. ತಲೈವಾಸ್ ತೀವ್ರ ಪೈಪೋಟಿ ನೀಡಿದರೂ ಗೆಲುವಿನಿಂದ ದೂರ ಉಳಿಯಿತು.
ಪವನ್ ಸೆಹ್ರಾವತ್ ಅವರ ಭರ್ಜರಿ ರೈಡಿಂಗ್‌ನಿಂದ ತಂಡ ಗೆಲುವು ಕಾಣುವಂತಾಯಿತು. 21 ಪ್ರಯತ್ನದಲ್ಲಿ ಅವರು 17 ಅಂಕ ಗಳಿಸಿದರು. ಟ್ಯಾಕಲ್‌ನಲ್ಲಿ ಅಮಿತ್ ಶೇರಾನ್ ಮಿಂಚಿ 5 ಅಂಕ ಪಡೆದರು. ತಲೈವಾಸ್ ತಂಡವನ್ನು ಗಮನಿಸಿದರೆ ಬುಲ್ಸ್ ರೈಡಿಂಗ್‌ನಲ್ಲಿಯೇ 22 ಅಂಕ ಗಳಿಸಿತ್ತು. ತಲೈವಾಸ್ 14 ಅಂಕ ಪಡೆದಿತ್ತು. ತಲೈವಾಸ್ ಪರ ರಾಹುಲ್ ಚೌಧರಿ 16 ಪ್ರಯತ್ನಗಳಲ್ಲಿ 7 ಅಂಕ ಪಡೆದರು.
ಈ ಗೆಲುವಿನಿಂದ ಬುಲ್ಸ್ ಇಷ್ಟರವರೆಗೆ ಆಡಿದ 13 ಪಂದ್ಯಗಳಿಂದ 7ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ರಿಷಾಂಕ್ ಮತ್ತೆ ವಿಫಲ
ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳು ವಲ್ಲಿ ಯುಪಿ ಯೋಧಾ ತಂಡದ ತಾರಾ ಆಟಗಾರ ರಿಷಾಂಕ್ ವಿಫಲರಾ ದರು. ಅವರ ಮೇಲೆ ಭಾರೀ ನಿರೀಕ್ಷೆ ಇಡಲಾಗಿತ್ತು. ಅವರು ಕಳಪೆ ಪ್ರದರ್ಶ ನ ನೀಡಿದರೂ ಶ್ರೀಕಾಂತ್ ಜಾಧವ್, ನಿತೀಶ್ ಭರ್ಜರಿ ಆಟವಾಡಿ ತಂಡಕ್ಕೆ ಮಹತ್ವತದ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.
ಯುಪಿ ಗೆ ಭರ್ಜರಿ ಗೆಲುವು
ರವಿವಾರದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ ತಂಡ 32-29 ಅಂಕಗಳ ಅಂತರದಿಂದ ಬೆಂಗಾಲ್ ವಾರಿಯರ್ ತಂಡವನ್ನು ಪರಾಭವಗೊಳಿಸಿದೆ.
ಯುಪಿ ಯೋಧಾ ಪರ ನಿತೇಶ್ ಕುಮಾರ್ ಟ್ಯಾಕಲ್‌ನಲ್ಲಿ 7 ಅಂಕ ಸಂಪಾದಿಸಿದ್ದೇ ಶ್ರೇಷ್ಠ ಆಟ. ನಿತೇಶ್ ಅತ್ಯುತ್ತಮ ರಕ್ಷಣಾ ಆಟಗಾರ ಎನಿಸಿಕೊಂಡರು. ಇನ್ನು ಬೆಂಗಾಲ್ ತಂಡದಲ್ಲಿ ಎಲ್ಲವೂ ಅಂದುಕೊಂಡಂತೆ ಸಾಗಲಿಲ್ಲ. ತಾರಾ ಆಟಗಾರರಾದ ಮಣಿಂದರ್ ಸಿಂಗ್, ಕೆ. ಪ್ರಪಂಜನ್ ಹಾಗೂ ಮೊಹಮ್ಮದ್ ನಬೀಭಕ್ ಶ್ರೇಷ್ಠ ನಿರ್ವಹಣೆ ನೀಡಲು ಅಸಮರ್ಥರಾದರು. ಇದರಿಂದಾಗಿ ತಂಡ ಸೋಲು ಕಾಣುವಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.