8ನೇ ಆವೃತ್ತಿ ಪ್ರೊ ಕಬಡ್ಡಿ : ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ
ಎಲ್ಲ ಪಂದ್ಯಗಳಿಗೆ ಒಂದೇ ತಾಣ
Team Udayavani, Oct 5, 2021, 10:48 PM IST
ಬೆಂಗಳೂರು: ಮತ್ತೆ ಪ್ರೊ ಕಬಡ್ಡಿ ಕಲರವ ಕೇಳಿಬರಲಿದೆ. 8ನೇ ಆವೃತ್ತಿಯ ಪಂದ್ಯಾವಳಿ ಡಿ. 21ರಂದು ಆರಂಭಗೊಳ್ಳಲಿದೆ. ವಿಶೇಷವೆಂದರೆ, ಈ ಕೂಟದ ಎಲ್ಲ ಪಂದ್ಯಗಳು ಬೆಂಗಳೂರಿನ “ಕಂಠೀರವ ಒಳಾಂಗಣ ಕ್ರೀಡಾಂಗಣ’ದಲ್ಲಿ ನಡೆಯುವುದು. ಟೂರ್ನಿಯ ಆಯೋಜಕ ಸಂಸ್ಥೆ ಮಾರ್ಷಲ್ ಸ್ಪೋರ್ಟ್ಸ್ ಈ ಕುರಿತು ಮಂಗಳವಾರ ಮಾಹಿತಿ ನೀಡಿದೆ.
ಈ ಬಗ್ಗೆ ಮಾತನಾಡಿದ ಮಾರ್ಷಲ್ ಸ್ಪೋರ್ಟ್ಸ್ ಕ್ಲಬ್‌ನ ಸಿಇಒ ಅನುಪಮ್ ಗೋಸ್ವಾಮಿ, “ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯನ್ನು ಆಯೋಜಿಸಲು ಎಲ್ಲರ ಹಿತದೃಷ್ಟಿಯಿಂದ ಬೆಂಗಳೂರೇ ಸೂಕ್ತ ಸ್ಥಳ ಎಂದು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಂದ್ಯಗಳನ್ನು ಕೋವಿಡ್-19 ಮಾರ್ಗಸೂಚಿಯನ್ವಯ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಆದರೆ ಪ್ರೇಕ್ಷಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ’ ಎಂದರು.
ಕೋವಿಡ್-19 ಕಾಟ ತಗ್ಗಿದ ಬಳಿಕ ಇದು ಭಾರತದಲ್ಲಿ ನಡೆಯಲಿರುವ ಪ್ರಮುಖ ಒಳಾಂಗಣ ಕ್ರೀಡಾಕೂಟವಾಗಿರಲಿದೆ. ಕೋವಿಡ್ ಭೀತಿಯಿಂದಾಗಿ 2020ರಲ್ಲಿ ಪ್ರೊ ಕಬಡ್ಡಿ ಲೀಗ್ ನಡೆದಿರಲಿಲ್ಲ.
ಒಂದೇ ತಾಣಕ್ಕೆ ಸೀಮಿತ
ಈ ಹಿಂದೆ ಎಲ್ಲ 12 ತಂಡಗಳ ತವರು ಮೈದಾನಗಳಲ್ಲಿ ಸುದೀರ್ಘ 3 ತಿಂಗಳ ಕಾಲ ಪ್ರೊ ಕಬಡ್ಡಿ ಟೂರ್ನಿ ನಡೆಯುತ್ತಿತ್ತು. ಆದರೆ ಕೋವಿಡ್ ಮುನ್ನೆಚ್ಚರಿಕೆಯ ಕಾರಣ ಈ ವರ್ಷ ಎಲ್ಲ ಪಂದ್ಯಗಳನ್ನು ಒಂದೇ ತಾಣಕ್ಕೆ ಸೀಮಿತಗೊಳಿಸಲಾಗುತ್ತಿದೆ. ಕೂಟದಲ್ಲಿ ಪಾಲ್ಗೊಳ್ಳುವ ಎಲ್ಲ ಆಟಗಾರರಿಗೆ ಲಸಿಕೆ ಕಡ್ಡಾಯವಾಗಿದ್ದು, ಟೂರ್ನಿಯ ಆರಂಭಕ್ಕೆ ಕನಿಷ್ಠ 14 ದಿನ ಮೊದಲೇ ಎಲ್ಲ ತಂಡಗಳು ಬೆಂಗಳೂರಿನಲ್ಲಿ ಹಾಜರಿರಬೇಕಿದೆ ಎಂದು ಗೋಸ್ವಾಮಿ ತಿಳಿಸಿದರು.
ಇದನ್ನೂ ಓದಿ:ಐಎಸ್‌ಎಸ್‌ಎಫ್ ಜೂನಿಯರ್ ಶೂಟಿಂಗ್: ತೋಮರ್ ವಿಶ್ವದಾಖಲೆ
ಪ್ರೊ ಕಬಡ್ಡಿ ಆತಿಥ್ಯಕ್ಕೆ ಜೈಪುರ ಮತ್ತು ಅಹ್ಮದಾಬಾದ್ ರೇಸ್‌ನಲ್ಲಿದ್ದವು. ಆದರೆ ಕೊರೊನಾ ನಿಯಂತ್ರಣದಲ್ಲಿರುವ ಕಾರಣ ಮತ್ತು ಉತ್ತಮ ಮೂಲಭೂತ ಸೌಕರ್ಯ ಹೊಂದಿರುವ, ಬಯೋಬಬಲ್ ವಾತಾವರಣವಿರುವ ಬೆಂಗಳೂರು ನಗರವನ್ನು ಆಯ್ಕೆ ಮಾಡಲಾಯಿತು ಎಂದು ಗೋಸ್ವಾಮಿ ತಿಳಿಸಿದರು.ಆಟಗಾರರ ಹರಾಜು ಪ್ರಕ್ರಿಯೆ ಕಳೆದ ಆ. 29ರಿಂದ 31ರ ತನಕ ಮುಂಬಯಿಯಲ್ಲಿ ನಡೆದಿತ್ತು.
ಮುಖ್ಯಮಂತ್ರಿ ಬೊಮ್ಮಾಯಿ ಸ್ವಾಗತ
“ಕಬಡ್ಡಿ ಭಾರತೀಯ ಮಣ್ಣಿನ ಕ್ರೀಡೆಯಾಗಿದ್ದು, ಕರ್ನಾಟಕದಲ್ಲಿ ಬಹಳ ಜನಪ್ರಿಯವಾಗಿದೆ. ನಮ್ಮ ರಾಜ್ಯದಲ್ಲಿ ಮುಂಬರುವ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯುವುದನ್ನು ನಾವು ಸ್ವಾಗತಿಸುತ್ತೇವೆ. ಈ ಕ್ರೀಡಾಕೂಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ’ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಪಂಜಾಬ್ ವಿರುದ್ದ ದ್ವಿಶತಕ ಬಾರಿಸಿದ ಸ್ಮರಣ್: ಕರ್ನಾಟಕಕ್ಕೆ ಭಾರೀ ಮುನ್ನಡೆ
Test Team of the Year: 2024ರ ಟೆಸ್ಟ್ ತಂಡ ಪ್ರಕಟಿಸಿದ ಐಸಿಸಿ; 3 ಭಾರತೀಯರಿಗೆ ಸ್ಥಾನ
Cricket Australia: ಆರ್ ಸಿಬಿ ಮಾಜಿ ಕೋಚ್ ಈಗ ಆಸ್ಟ್ರೇಲಿಯಾ ತಂಡದ ವೇಗದ ಬೌಲಿಂಗ್ ಕೋಚ್
Athlete Award: ಕರ್ನಾಟಕ ಕ್ರೀಡಾಕೂಟ; ನಿಯೋಲೆ, ಜಾಫರ್ ಶ್ರೇಷ್ಠ ಆ್ಯತ್ಲೀಟ್ಸ್
Under-19 ವನಿತಾ ಟಿ20 ವಿಶ್ವಕಪ್; ಶ್ರೀಲಂಕಾಕ್ಕೆ ಸೋಲು; ಸೂಪರ್ 6 ಹಂತಕ್ಕೇರಿದ ಭಾರತ
MUST WATCH
ಹೊಸ ಸೇರ್ಪಡೆ
Bandipur ಹೆದ್ದಾರಿಯಲ್ಲಿ ಚೆಲ್ಲಿದ ಅಕ್ಕಿ ಮೆಲ್ಲುತ್ತ ನಿಂತ ಕಾಡಾನೆಗಳು: ಟ್ರಾಫಿಕ್ ಜಾಮ್
Waqf Bill: ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಗದ್ದಲ; ವಿಪಕ್ಷದ ಎಲ್ಲಾ 10 ಸಂಸದರ ಅಮಾನತು
Dharwad: ಇನ್‌ಸ್ಟಾಗ್ರಾಮ್ ಪ್ರೀತಿಗೆ ಪತಿ ತೊರೆದ 24 ರ ಯುವತಿ ಬಲಿ
Udupi; ಪವರ್ ಪರ್ಬ 2025: ಫೆ. 8 ರಂದು ಬೆಂಕಿ ರಹಿತ ಅಡುಗೆ ಸ್ಪರ್ಧೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ