ಇಂದು ಪ್ರೊ ಕಬಡ್ಡಿ ಫೈನಲ್‌ : ದಿಲ್ಲಿ ವಿರುದ್ಧ ಪಾಟ್ನಾವೇ ಫೇವರಿಟ್‌


Team Udayavani, Feb 25, 2022, 6:40 AM IST

ಇಂದು ಪ್ರೊ ಕಬಡ್ಡಿ ಫೈನಲ್‌ : ದಿಲ್ಲಿ ವಿರುದ್ಧ ಪಾಟ್ನಾವೇ ಫೇವರಿಟ್‌

ಬೆಂಗಳೂರು: ಕೊರೊನಾದಿಂದಾಗಿ ಎರಡು ವರ್ಷ ಸ್ಥಗಿತಗೊಂಡು, ಈ ಬಾರಿ ಬಯೋಬಬಲ್‌ನಲ್ಲಿ ಯಶಸ್ವಿಯಾಗಿ ನಡೆದ 8ನೇ ಆವೃತ್ತಿ ಪ್ರೊ ಕಬಡ್ಡಿಗೆ ಶುಕ್ರವಾರ ರಾತ್ರಿ ತೆರೆ ಬೀಳಲಿದೆ. ಮೂರು ಬಾರಿಯ ಚಾಂಪಿಯನ್‌ ಪಾಟ್ನಾ ಪೈರೆಟ್ಸ್‌ ಮತ್ತು ಕಳೆದ ಬಾರಿಯ ರನ್ನರ್ ಅಪ್‌ ದಬಾಂಗ್‌ ದಿಲ್ಲಿ ಪ್ರಶಸ್ತಿ ಸಮರದಲ್ಲಿ ಮುಖಾಮುಖೀಯಾಗಲಿವೆ.

ಪಾಟ್ನಾ-ದಿಲ್ಲಿ ಲೀಗ್‌ ಹಂತದ ನಂ.1 ಮತ್ತು ನಂ.2 ತಂಡಗಳೆಂಬುದು ವಿಶೇಷ. ಈ ಕಾರಣದಿಂದ ಫೈನಲ್‌ ಹಣಾಹಣಿ ತೀವ್ರ ಪೈಪೋಟಿಯಿಂದ ಕೂಡಿರುವುದರಲ್ಲಿ ಅನುಮಾನವಿಲ್ಲ.

ಪಾಟ್ನಾ ಬಲಿಷ್ಠ ಪಡೆ :

ಕನ್ನಡಿಗ ಪ್ರಶಾಂತ್‌ ಕುಮಾರ್‌ ರೈ ಸಾರಥ್ಯದ ಪಾಟ್ನಾ ಪೈರೆಟ್ಸ್‌ ಎಲ್ಲ ವಿಭಾಗಗಳಲ್ಲೂ ಸಮರ್ಥ ಮತ್ತು ಬಲಿಷ್ಠವಾಗಿದೆ. ಇಲ್ಲಿ ಯಾರೂ ನಿರ್ದಿಷ್ಟ ವಿಭಾಗಕ್ಕೆ ಸೀಮಿತಗೊಂಡಿಲ್ಲ. ಎಲ್ಲರೂ ರೈಡಿಂಗ್‌ ಮತ್ತು ಟ್ಯಾಕಲ್‌ನಲ್ಲಿ ಆಲ್‌ರೌಂಡ್‌ ಪ್ರದರ್ಶನ ತೋರುವುದರಲ್ಲಿ ನಿಸ್ಸೀಮರು. ಹೀಗಾಗಿ ಪಾಟ್ನಾ ಕೆಲವು ನಿರ್ದಿಷ್ಟ ಆಟಗಾರರನ್ನೇ ನಂಬಿಕೊಂಡು ಕುಳಿತಿಲ್ಲ. ಸಚಿನ್‌, ನೀರಜ್‌, ಪ್ರಶಾಂತ್‌ ರೈ, ಗುಮನ್‌ ಸಿಂಗ್‌, ಮೋನು ಗೋಯತ್‌ ಎಲ್ಲದಕ್ಕೂ ಸೈ. ಇರಾನಿ ಆಟಗಾರ ಮೊಹಮ್ಮದ್ರೇಜ ಅವರಂತೂ 84 ಟ್ಯಾಕಲ್‌ ಮೂಲಕ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ರೈಟ್‌ ಕಾರ್ನರ್‌ನಲ್ಲಿ ಆಡುವ ಇವರ ಆ್ಯಂಕಲ್‌ ಹೋಲ್ಡ್‌ನಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಈ ಎಲ್ಲ ಕಾರಣದಿಂದಾಗಿ ದಿಲ್ಲಿಗಿಂತ ಪಾಟ್ನಾವೇ ಫೇವರಿಟ್‌ ಎನ್ನಲಡ್ಡಿಯಿಲ್ಲ.

ಫೈನಲ್‌ನಲ್ಲಿ ಅಜೇಯ…

2016ರಲ್ಲಿ ಎರಡು ಪ್ರೊ ಕಬಡ್ಡಿ ಆವೃತ್ತಿಗಳು ನಡೆದಿದ್ದವು. ಎರಡರಲ್ಲೂ ಪಾಟ್ನಾವೇ ಪರಾಕ್ರಮ ಮೆರೆದಿತ್ತು. ಜನವರಿ ಆವೃತ್ತಿಯ ಫೈನಲ್‌ನಲ್ಲಿ ಯು ಮುಂಬಾವನ್ನು ಮಣಿಸಿ ಮೊದಲ ಸಲ ಕಿರೀಟ ಏರಿಸಿಕೊಂಡಿತು. ಜುಲೈ ಆವೃತ್ತಿಯ ಪ್ರಶಸ್ತಿ ಸಮರದಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ಗೆ ಸೋಲುಣಿಸಿ ಕಿರೀಟ ಉಳಿಸಿಕೊಂಡಿತು. ಒಂದೇ ವರ್ಷದಲ್ಲಿ ಎರಡು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಪಾಟ್ನಾ, 2017ರಲ್ಲಿಯೂ ಗೆದ್ದು ಹ್ಯಾಟ್ರಿಕ್‌ ಸಾಧನೆ ಮೆರೆಯಿತು. ಅಂದು ಪಾಟ್ನಾಕ್ಕೆ ಶರಣಾದ ತಂಡ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌. ಇದೀಗ ಪಾಟ್ನಾ ಮತ್ತೆ ಫೈನಲ್‌ ಪ್ರವೇಶಿಸಿದೆ. ತಂಡದ ಅಜೇಯ ಓಟ ಮುಂದುವರಿದೀತೇ ಎಂಬ ಕೌತುಕ ಅಭಿಮಾನಿಗಳದ್ದು.

ದಿಲ್ಲಿಗೆ ನವೀನ್‌ ಆಸರೆ :

ಪಾಟ್ನಾ ತಂಡದಂತೆ ದಿಲ್ಲಿಯಲ್ಲಿ ಆಲ್‌ರೌಂಡರ್‌ ಆಟಗಾರರಿಲ್ಲ. ಪ್ರಮುಖ ರೈಡರ್‌ ನವೀನ್‌ ಕುಮಾರ್‌ ಅಂಕಣದಿಂದ ಹೊರಗುಳಿದರೆ ಚಾಕಚಕ್ಯತೆಯಿಂದ ಅಂಕ ಗಳಿಸುವಂತಹ ಸಮರ್ಥ ರೈಡರ್‌ ಕೊರತೆ ದಿಲ್ಲಿ ಯನ್ನು ಕಾಡುತ್ತಿದೆ.

ಲೀಗ್‌ ಹಂತದ ಆರಂಭಿಕ ಪಂದ್ಯಗಳಲ್ಲಿ ಮಿಂಚಿದ್ದ ನವೀನ್‌, ಬಳಿಕ ಮೊಣಕಾಲಿನ ಗಾಯದಿಂದ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು. ಚೇತರಿಸಿಕೊಂಡು ತಂಡಕ್ಕೆ ಮರಳಿದರೂ ಪದೇಪದೆ ನೋವು ಕಾಣಿಸಿ ಕೊಳ್ಳುತ್ತಿರುವ ಕಾರಣ ಅವರಲ್ಲಿ ಹಿಂದಿನ ರೈಡಿಂಗ್‌ ಚಾರ್ಮ್ ಕಂಡುಬರುತ್ತಿಲ್ಲ. ಬುಲ್ಸ್‌ ಎದುರಿನ ಸೆಮಿಫೈನಲ್‌ ಪಂದ್ಯದಲ್ಲಿ 14 ಅಂಕ ಗಳಿಸಿದರೂ ಹಲವು ಬಾರಿ ನೋವಿನಿಂದ ಕುಂಟುತ್ತ ಸಾಗಿದ್ದನ್ನು ಗಮನಿಸಿರಬಹುದು.

ಒಂದೊಮ್ಮೆ ಫೈನಲ್‌ನಲ್ಲಿಯೂ ನವೀನ್‌ಗೆ ಗಾಯದ ಸಮಸ್ಯೆ ಕಂಡುಬಂದರೆ ದಿಲ್ಲಿಗೆ ಗಂಡಾಂತರ ತಪ್ಪಿದ್ದಲ್ಲ. ದಿಲ್ಲಿಯ ಡಿಫೆಂಡಿಂಗ್‌ ವಿಭಾಗದಲ್ಲಿ ಅನುಭವಿ ಆಟಗಾರರಿದ್ದರೂ ಅವರಿಂದ ನಿರೀಕ್ಷಿತ ಆಟ ಕಂಡುಬಂದಿಲ್ಲ.

ಕರಾವಳಿಗೆ ಹೆಮ್ಮೆ :

ಪಾಟ್ನಾ ತಂಡವನ್ನು ಮುನ್ನಡೆಸುತ್ತಿರುವ “ಕೂಲ್‌ ಕ್ಯಾಪ್ಟನ್‌’ ಖ್ಯಾತಿಯ ಪ್ರಶಾಂತ್‌ ಕುಮಾರ್‌ ರೈ ದಕ್ಷಿಣ ಕನ್ನಡದ ಪುತ್ತೂರಿನವರು. ಹೀಗಾಗಿ ಪಾಟ್ನಾ ತಂಡಕ್ಕೆ ಕರಾವಳಿಯಲ್ಲಿಯೂ ಹೆಚ್ಚಿನ ಅಭಿಮಾನಿಗಳಿದ್ದಾರೆ. ಇದೇ ಮೊದಲ ಬಾರಿ ಪಾಟ್ನಾವನ್ನು ಮುನ್ನಡೆಸಿದ ಪ್ರಶಾಂತ್‌ ನಾಯಕತ್ವದಲ್ಲಿ ತಂಡ ಚಾಂಪಿಯನ್‌ ಆಗಿ ಮೂಡಿಬಂದರೆ ಪಾಟ್ನಾ ಜತೆಗೆ ಕರಾವಳಿಗೂ ಕೋಡು ಮೂಡಲಿದೆ! ಆತಿಥೇಯ ಬೆಂಗಳೂರು ಬುಲ್ಸ್‌ ಸೆಮಿಫೈನಲ್‌ನಲ್ಲಿ ಹೊರಬಿದ್ದ ಕಾರಣ ಪ್ರಶಾಂತ್‌ ರೈ ತಂಡಕ್ಕೆ ಕರ್ನಾಟಕದ ಕಬಡ್ಡಿ ಅಭಿಮಾನಿಗಳ ಬೆಂಬಲ ಹಾಗೂ ಗೆಲುವಿನ ಹಾರೈಕೆಯೂ ಇರಲಿದೆ.

ಟಾಪ್ ನ್ಯೂಸ್

IPL Mega Auction: 24th and 25th IPL auction in Jeddah

IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್‌ ಹರಾಜು

Did Adani try to meet Rahul during UPA?

Gautam Adani: ಯುಪಿಎ ಅವಧಿಯಲ್ಲಿ ರಾಹುಲ್‌ ಭೇಟಿಗೆ ಯತ್ನಿಸಿದ್ದರೇ ಅದಾನಿ?

NCP supremo Sharad hinted retirement from electoral politics

Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್‌

Salman Khan’s ex Somy Ali spoke about Sushant Singh Rajput’s demise

Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!

Not supporting Raj Thackeray’s son Amit Thackeray: BJP U Turn!

Maha Polls; ರಾಜ್‌ ಠಾಕ್ರೆ ಪುತ್ರ ಅಮಿತ್‌ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

MP: Flies helped the police to arrest the murder accused!

MP: ಕೊಲೆ ಆರೋಪಿ ಬಂಧನಕ್ಕೆ ಪೊಲೀಸರಿಗೆ ನೆರವಾದ ನೊಣಗಳು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL Mega Auction: 24th and 25th IPL auction in Jeddah

IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್‌ ಹರಾಜು

Ranji trophy: ಕರ್ನಾಟಕ-ಬಂಗಾಲ ಸೆಣಸಾಟ

Ranji trophy: ಕರ್ನಾಟಕ-ಬಂಗಾಲ ಸೆಣಸಾಟ

PKL 11: Panthers won against Yoddhas

PKL 11: ಯೋಧಾಸ್‌ ವಿರುದ್ಧ ಗೆದ್ದ ಪ್ಯಾಂಥರ್

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

IPL Mega Auction: 24th and 25th IPL auction in Jeddah

IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್‌ ಹರಾಜು

Did Adani try to meet Rahul during UPA?

Gautam Adani: ಯುಪಿಎ ಅವಧಿಯಲ್ಲಿ ರಾಹುಲ್‌ ಭೇಟಿಗೆ ಯತ್ನಿಸಿದ್ದರೇ ಅದಾನಿ?

NCP supremo Sharad hinted retirement from electoral politics

Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್‌

Salman Khan’s ex Somy Ali spoke about Sushant Singh Rajput’s demise

Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!

Not supporting Raj Thackeray’s son Amit Thackeray: BJP U Turn!

Maha Polls; ರಾಜ್‌ ಠಾಕ್ರೆ ಪುತ್ರ ಅಮಿತ್‌ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.