
ಅ. 23ರಿಂದ ಸೂಪರ್ ಪ್ಲೇ ಆಫ್ ಹೋರಾಟ
Team Udayavani, Oct 17, 2017, 6:30 AM IST

ಪುಣೆ: ಪ್ರೊ ಕಬಡ್ಡಿ ಲೀಗ್ ಐದರ ಪುಣೆ ಚರಣದಲ್ಲಿ ರವಿವಾರ ಬೆಂಗಳೂರು ಬುಲ್ಸ್ ವಿರುದ್ಧ ಏಳಂಕಕ್ಕಿಂತ ಕಡಿಮೆ ಅಂತರದಲ್ಲಿ ಸೋತ ಆಧಾರದಲ್ಲಿ ಒಂದಂಕ ಪಡೆದ ಯುಪಿ ಯೋಧಾ ತಂಡ ಆರನೇ ಮತ್ತು ಅಂತಿಮ ತಂಡವಾಗಿ ಸೂಪರ್ ಪ್ಲೇ ಆಫ್ಗೆ ತೇರ್ಗಡೆಯಾಯಿತು.
ಪುಣೆ ಚರಣದ ಪಂದ್ಯ ಆರಂಭವಾಗುವ ಮೊದಲೇ “ಎ’ ವಲಯದಿಂದ ಗುಜರಾತ್ ಫಾರ್ಚೂನ್ ಜೈಂಟ್ಸ್, ಹರಿಯಾಣ ಸ್ಟೀಲರ್, ಪುನೇರಿ ಪಲ್ಟಾನ್ಸ್ ಹಾಗೂ “ಬಿ’ ವಲಯದಿಂದ ಬೆಂಗಾಲ್ ವಾರಿಯರ್ ಮತ್ತು ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡಗಳು ಸೂಪರ್ ಪ್ಲೇ ಆಫ್ಗೆ ತೇರ್ಗಡೆಯಾಗುವುದನ್ನು ಖಚಿತಪಡಿಸಿದ್ದವು.
“ಬಿ’ ಬಣದಲ್ಲಿ ಸೂಪರ್ ಪ್ಲೇ ಆಫ್ಗೆ ತೇರ್ಗಡೆಯಾದ ಮೂರು ತಂಡಗಳಿಗೆ ಇನ್ನೂ ಒಂದು ಪಂದ್ಯ ಬಾಕಿ ಉಳಿದಿದ್ದು ಈ ಮೂರು ತಂಡಗಳ ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಆದರೆ “ಎ’ ಬಣದಲ್ಲಿ ಗುಜರಾತ್ ಮತ್ತು ಹರಿಯಾಣ ಇನ್ನು ಒಂದು ಪಂದ್ಯ ಆಡಲಿದ್ದರೆ ಪುನೇರಿ ಮೂರು ಪಂದ್ಯ ಆಡಬೇಕಾಗಿದೆ. ಒಂದು ವೇಳೆ ಪುನೇರಿ ಮೂರು ಪಂದ್ಯಗಳಲ್ಲಿ ಗೆದ್ದರೆ ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ. ಹಾಗಾಗಿ ಪುಣೆ ಚರಣ ಮುಗಿದ ಬಳಿಕವೇ ಸೂಪರ್ ಪ್ಲೇ ಆಫ್ನ ವೇಳಾಪಟ್ಟಿ ಖಚಿತವಾಗಲಿದೆ. ಸೂಪರ್ ಪ್ಲೇ ಆಫ್ ಹೋರಾಟ ಮುಂದಿನ ಸೋಮವಾರದಿಂದ (ಅ. 23) ಮುಂಬಯಿಯಲ್ಲಿ ಆರಂಭವಾಗಲಿದೆ.
ಯುಪಿ ಯೋಧಾ ಮಂಗಳವಾರ ನಡೆಯುವ ತನ್ನ ಅಂತಿಮ ಪಂದ್ಯದಲ್ಲಿ ಮತ್ತೆ ಬೆಂಗಳೂರು ಬುಲ್ಸ್ ತಂಡವನ್ನು ಎದುರಿಸಲಿದೆ. ರವಿವಾರದ ಸೋಲಿಗೆ ಯುಪಿ ಸೇಡು ತೀರಿಸಿಕೊಳ್ಳುವ ಸಾಧ್ಯತೆಯಿದೆ.
ನಾವು ಒತ್ತಡದ ಪರಿಸ್ಥಿತಿಯಲ್ಲಿ ಇದ್ದೆವು. ಯಾಕೆಂದರೆ ಈ ಪಂದ್ಯದಲ್ಲಿ ಗೆಲ್ಲುವುದು ನಮ್ಮ ಉದ್ದೇಶವಾಗಿತ್ತು.ಆದರೆ ಒಂದು ವೇಳೆ ಸೋಲು ಎದುರಾದರೆ ಸೋಲಿನ ಅಂತರ ಏಳಕ್ಕಿಂತ ಕಡಿಮೆ ಇರುವುದು ನಮ್ಮ ಯೋಜನೆಯಾಗಿತ್ತು ಎಂದು ಯುಪಿ ನಾಯಕ ರಿಷಾಂಕ್ ದೇವಾಡಿಗ ರವಿವಾರದ ಪಂದ್ಯದ ಬಳಿಕ ಹೇಳಿದ್ದರು.
ಮಂಗಳವಾರದ ಇನ್ನೊಂದು ಪಂದ್ಯ ಪುನೇರಿ ಪಲ್ಟಾನ್ಸ್ ಮತ್ತು ಹರಿಯಾಣ ಸ್ಟೀಲರ್ ನಡುವೆ ನಡೆಯಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಪುನೇರಿ ಗೆದ್ದರೆ ಪುನೇರಿ ದ್ವಿತೀಯ ಸ್ಥಾನಕ್ಕೇರಲಿದೆ ಮತ್ತು ಹರಿಯಾಣ ಮೂರನೇ ಸ್ಥಾನಕ್ಕೆ ಜಾರಲಿದೆ. ಡೆಲ್ಲಿ ವಿರುದ್ಧದ ಪಂದ್ಯಕ್ಕೆ ನಾವು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸಿದ್ದೆವು. ಹರಿಯಾಣ ವಿರುದ್ಧದ ಪಂದ್ಯಕ್ಕೆ ಪೂರ್ಣ ಸಾಮರ್ಥ್ಯದ ತಂಡದೊಂದಿಗೆ ಪುನೇರಿ ಆಡಲಿದೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!

WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ

R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ಹೊಸ ಸೇರ್ಪಡೆ

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.