ಪ್ರೊ ಕಬಡ್ಡಿ ಲೀಗ್: ತೆಲುಗು ಟೈಟಾನ್ಸ್‌ಗೆ ನಾಲ್ಕನೇ ಸೋಲು
Team Udayavani, Aug 3, 2017, 7:25 AM IST
ಹೈದರಾಬಾದ್: ಎರಡೂ ತಂಡಗಳ ಸಂಘಟನಾತ್ಮಕ ಹೋರಾಟದ ಫಲವಾಗಿ ಗುಜರಾತ್ ಫಾರ್ಚೂನ್ ಜೈಂಟ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು 5ನೇ ಆವೃತ್ತಿ ಪ್ರೊ ಕಬಡ್ಡಿ ಪಂದ್ಯದಲ್ಲಿ ಡ್ರಾ ಸಾಧಿಸಿವೆ. ಹೀಗಾಗಿ ಎರಡೂ ತಂಡಗಳಿಗೂ ಸಮಾನ ಅಂಕ ಹಂಚಿಕೆಯಾಗಿದೆ.
ದಿನದ ಇನ್ನೊಂದು ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ತಂಡವು ಬೆಂಗಾಲ್ ವಾರಿಯರ್ ವಿರುದ್ಧ 24 30 ಅಂಕಗಳಿಂದ ಸೋಲನ್ನು ಕಂಡಿದೆ. ಇದು ತೆಲುಗು ಟೈಟಾನ್ಸ್ ತಂಡದ ಸತತ ನಾಲ್ಕನೇ ಸೋಲು ಆಗಿದೆ.
ತಾರಾ ಆಟಗಾರ ಮಣಿಂದರ್ ಸಿಂಗ್ ಮತ್ತು ಜಾಂಗ್ ಕುನ್ ಲೀ ಅವರ ಶ್ರೇಷ್ಠ ಆಟದ ನೆರವಿನಿಂದ ಬೆಂಗಾಲ್ ವಾರಿಯರ್ ತಂಡ ತೆಲುಗು ಟೈಟಾನ್ಸ್ ವಿರುದ್ಧ ಜಯ ಸಾಧಿಸಿದೆ. ಪಂದ್ಯದ ಆರಂಭದಲ್ಲಿಯೇ ಟೈಟಾನ್ಸ್‌ಗೆ ಹಿನ್ನಡೆ ಆರಂಭವಾಯಿತು. ಹೀಗಾಗಿ ಮೊದಲ ಅವಧಿಯ ಅಂತ್ಯದಲ್ಲಿ ಬೆಂಗಾಲ್ 19-14ರಿಂದ ಮುನ್ನಡೆ ಪಡೆದಿತ್ತು. ತಾರಾ ಆಟಗಾರ ರಾಹುಲ್ ಚೌಧರಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸದಿರುವುದೇ ಟೈಟಾನ್ಸ್ ವೈಫಲ್ಯಕ್ಕೆ ಕಾರಣವಾಯಿತು. ಬೆಂಗಾಲ್‌ಪರ ಮಣಿಂದರ್ ಸಿಂಗ್ 11, ಜಾಂಗ್ ಕುನ್ ಲೀ 8 ಅಂಕ ಪಡೆದರು. ಟೈಟಾನ್ಸ್ ಪರ ಚೌಧರಿ ಮತ್ತು ನಿಲೇಶ್ ಸಿಂದೆ ತಲಾ 5 ಅಂಕ ಪಡೆದರು.
ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಮತ್ತು ಹರಿಯಾಣ 27-27 ಅಂಕ ಗಳಿಂದ ಸಮಬಲ ಸಾಧಿಸಿದವು. ಪಂದ್ಯದ ಆರಂಭದಲ್ಲಿಯೂ ಸಮಬಲದ ಹೋರಾಟವಿತ್ತು. ಹೀಗಾಗಿ ಅಂಕ 7-7, ಮತ್ತೂಮ್ಮೆ 8-8ರಲ್ಲಿ ಸಮಬಲದಲ್ಲಿದ್ದವು. ಆದರೆ ಈ ಸಮಯದಲ್ಲಿ ಗುಜರಾತ್ ಎಚ್ಚರಿಕೆಯ ಪ್ರದರ್ಶನ ನೀಡಿತು. ಇದರ ಫಲವಾಗಿ ಗುಜರಾತ್ ಮೊದಲ ಅವಧಿಯ ಅಂತ್ಯದಲ್ಲಿ 11-8ರಿಂದ ಮುನ್ನಡೆ ಪಡೆಯಲು ಯಶಸ್ವಿಯಾಯಿತು.
ಕೊನೆ 10 ನಿಮಿಷದಲ್ಲಿ ಸ್ಥಿತಿ ಬದಲು: 2ನೇ ಅವಧಿಯ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಗುಜರಾತ್ ಒಂದು ಹಂತದಲ್ಲಿ 22-13ರಿಂದ ಭಾರೀ ಮುನ್ನಡೆಯಲ್ಲಿತ್ತು. ಈ ಹಂತದಲ್ಲಿ ಗುಜರಾತ್ ಜಯ ಸಾಧಿಸುವ ವಿಶ್ವಾಸದಲ್ಲಿತ್ತು. ಆದರೆ ಮುಂದೆ ಆಗಿದ್ದೆ ಬೇರೆ.
ಹರಿಯಾಣ ತಂಡ ತನ್ನ ರಕ್ಷಣಾ ಕೋಟೆಯನ್ನು ಭದ್ರಪಡಿಸಿಕೊಂಡಿತು. ಜತೆಗೆ ರೈಡಿಂಗ್‌ನಲ್ಲಿಯೂ ಅಂಕ ತರತೊಡಗಿತು. ಹೀಗಾಗಿ ಪಂದ್ಯ ಮುಗಿಯಲು 7 ನಿಮಿಷ ಬಾಕಿ ಇರುವಾಗ 23-23 ರಿಂದ ಸಮಬಲ ಸಾಧಿಸುವಲ್ಲಿ ಯಶ ಕಂಡಿತು. ಅನಂತರ ಎರಡೂ ತಂಡಗಳ ನಡುವಿನ ತೀವ್ರ ಸ್ಪರ್ಧೆಯಿಂದಾಗಿ ಪಂದ್ಯ 27-27ರಿಂದ ಸಮಬಲದಲ್ಲಿ ಅಂತ್ಯಗೊಂಡಿತು. ಈ ಫಲಿತಾಂಶದಿಂದಾಗಿ ಗುಜರಾತ್ ತಂಡ ಎರಡನೇ ಗೆಲುವು ದಾಖಲಿಸುವ ಅವಕಾಶ ತಪ್ಪಿಸಿಕೊಂಡಿತು. ಗುಜರಾತ್ ಮಂಗಳವಾರದ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಸೋಲಿಸಿತ್ತು.
ಗುಜರಾತ್ ಪರ ಸುಕೇಶ್, ಸುನೀಲ್, ಪರ್ವೇಶ್, ಸಚಿನ್ ತಲಾ 3 ಅಂಕ ಪಡೆದರು. ಹರಿಯಾಣ ಪರ ಸುರೇಂದರ್ ನಾಡಾ ಮತ್ತು ವಿಕಾಸ್ ತಲಾ 7 ಅಂಕ ಪಡೆದರು. ಎರಡೂ ತಂಡಗಳು ತಲಾ 1 ಬಾರಿ ಆಲೌಟ್‌ಗೆ ತುತ್ತಾದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.