ಪ್ರೊ ಕಬಡ್ಡಿ ಲೀಗ್: ಪುನೇರಿ ಪಲ್ಟಾನ್ಸ್, ಹರಿಯಾಣಕ್ಕೆ ಜಯ
Team Udayavani, Oct 25, 2022, 11:46 PM IST
ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನ ಮಂಗಳವಾರದ ಪಂದ್ಯಗಳಲ್ಲಿ ಪುನೇರಿ ಪಲ್ಟಾನ್ಸ್ ಮತ್ತು ಹರಿಯಾಣ ಸ್ಟೀಲರ್ ಭರ್ಜರಿ ಗೆಲುವು ದಾಖಲಿಸಿದೆ.
ಮೊದಲ ಪಂದ್ಯದಲ್ಲಿ ರೈಡರ್ ಅಸ್ಲಾಂ ಇನಾಂದರ್ ಅವರ ಉತ್ತಮ ಆಟದಿಂದಾಗಿ ಪುನೇರಿ ಪಲ್ಟಾನ್ಸ್ ತಂಡವು ಜೈಪುರ ಪಿಂಕ್ ಪ್ಯಾಂಥರ್ ತಂಡವನ್ನು 32-24 ಅಂಕಗಳಿಂದ ಸೋಲಿಸಿತು.
ದಿನದ ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ ತಂಡವು ತೆಲುಗು ಟೈಟಾನ್ಸ್ ತಂಡವನ್ನು 43-24 ಅಂಕಗಳಿಂದ ಮಣಿಸಿತು. ಮೀತು ಶರ್ಮ ರೈಡ್ ಮೂಲಕ 13 ಅಂಕ ಪಡೆದು ತಂಡದ ಗೆಲುವಿಗೆ ಉತ್ತಮ ಕೊಡುಗೆ ಸಲ್ಲಿಸಿದರು.
ಪುನೇರಿ ಮತ್ತು ಜೈಪುರ ನಡುವಣ ಪಂದ್ಯ ತೀವ್ರ ಪೈಪೋಟಿಯಿಂದ ಸಾಗಿತ್ತು. ಪ್ರತಿಯೊಂದು ಅಂಕ ಗಳಿಸಲು ಎರಡೂ ತಂಡಗಳ ಆಟಗಾರರು ಒದ್ದಾಡಿದರು. ಇನಾಂದರ್ ಅವರ ವೇಗದ ಚಲನೆ ಮತ್ತು ಎದುರಾಳಿ ಜೈಪುರದ ರಕ್ಷಣಾ ಆಟಗಾರರನ್ನು ವಂಚಿಸಿ ಅಂಕ ಗಳಿಸಿದ ರೀತಿ ಅಮೋಘವಾಗಿತ್ತು. ಪಂದ್ಯದ ಮೊದಲ ಅವಧಿ ಮುಗಿದಾಗ ಪುನೇರಿ 17-11 ರಿಂದ ಮುನ್ನಡೆಯಲ್ಲಿತ್ತು.
ದ್ವಿತೀಯ ಅವಧಿಯಲ್ಲಿ ಜೈಪುರ ಭರ್ಜರಿಯಾಗಿ ಆಡಿತು. ಅರ್ಜುನ್ ದೇಶ್ವಾಲ್ ಮತ್ತು ರಾಹುಲ್ ಚೌಧರಿ ಉತ್ತಮವಾಗಿ ರೈಡ್ ಮಾಡಿ ಅಂಕ ಗಳಿಸಲು ಪ್ರಯತ್ನಿಸಿ ಪುನೇರಿ ಆಟಗಾರರನ್ನು ಒತ್ತಡಕ್ಕೆ ಸಿಲುಕಿಸಿದರು. ಗೌರವ್ ಖತ್ರಿ ಅವರ ಅಮೋಘ ಆಟದಿಂದ ಪುನೇರಿ ಮೇಲುಗೈ ಸಾಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.