ಪಾಟ್ನಾಕ್ಕೆ ಪೆಟ್ಟು ಕೊಟ್ಟ ಯು ಮುಂಬಾ
ಗುಜರಾತ್ಗೆ ಆಘಾತವಿಕ್ಕಿದ ಜೈಪುರ್ ಪಿಂಕ್ ಪ್ಯಾಂಥರ್
Team Udayavani, Aug 17, 2019, 5:05 AM IST
ಅಹ್ಮದಾಬಾದ್: ಪ್ರಚಂಡ ಹೋರಾಟ ತೋರ್ಪಡಿಸಿದ ಹೊರತಾಗಿಯೂ ಪಾಟ್ನಾ ಪೈರೇಟ್ಸ್ ಸೋಲಿನ ಸುಳಿಗೆ ಸಿಲುಕಿದೆ. ಯು ಮುಂಬಾ 34-30 ಅಂತರದಿಂದ ಪಾಟ್ನಾಕ್ಕೆ ಪೆಟ್ಟು ಕೊಟ್ಟಿದೆ.ಪಾಟ್ನಾ ಪೈರೇಟ್ಸ್-ಯು ಮುಂಬಾ,ಪ್ರೊ ಕಬಡ್ಡಿ ಪಂದ್ಯ
ಅಹ್ಮದಾಬಾದ್ನ ಟ್ರ್ಯಾನ್ಸ್ ಸ್ಟೇಡಿಯಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಶುಕ್ರವಾರದ ಮೊದಲ ಪ್ರೊ ಕಬಡ್ಡಿ ಪಂದ್ಯ ಅತ್ಯಂತ ರೋಚಕವಾಗಿ ಸಾಗಿತು. ಅಂತಿಮವಾಗಿ ಯು ಮುಂಬಾ ಗೆಲುವಿನ ನಗು ಬೀರಿತು.
ಇದಕ್ಕಿಂತ ಹೆಚ್ಚು ರೋಮಾಂಚಕಾರಿಯಾಗಿ ಸಾಗಿದ ದ್ವಿತೀಯ ಮುಖಾಮುಖೀಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ 22-19 ಅಂತರದಿಂದ ಆತಿಥೇಯ ಗುಜರಾತ್ಗೆ ಆಘಾತವಿಕ್ಕಿತು.
ಯು ಮುಂಬಾ ಗರ್ಜನೆ
ಮೊದಲ ಅವಧಿಯಲ್ಲಿ ಯು ಮುಂಬಾ ತಂಡ ಪ್ರಬಲ ಆಟ ಪ್ರದರ್ಶಿಸಿತು. 22-9 ಅಂತರದ ದೊಡ್ಡ ಅಂತರದ ಮುನ್ನಡೆ ಪಡೆಯಿತು. ರೋಹಿತ್ ಬಲಿಯಾನ್ (9 ಅಂಕ) ರೈಡಿಂಗ್ನಲ್ಲಿ ಅಬ್ಬರಿಸಿದರು. ಒಟ್ಟು 14 ಸಲ ಪಾಟ್ನಾ ಕೋಟೆಯೊಳಗೆ ನುಗ್ಗಿದ ರೋಹಿತ್ 6 ಟಚ್ ಪಾಯಿಂಟ್, 3 ಬೋನಸ್ ಅಂಕವನ್ನು ತಂದುಕೊಡುವಲ್ಲಿ ಯಶಸ್ವಿಯಾದರು. ತಂಡದ ಮೊತ್ತೂಬ್ಬ ರೈಡರ್ ಅತುಲ್ (8 ಅಂಕ) ಪಾಟ್ನಾ ಮೇಲೆ ಏಕಾಏಕಿ ಎರಗಿದರು. ಸಂದೀಪ್ ನರ್ವಾಲ್ (6 ಅಂಕ) ಅದ್ಭುತ ಟ್ಯಾಕಲ್ ನಡೆಸಿದರು. ಉಳಿದಂತೆ ಅರ್ಜುನ್ ದೆಶ್ವಾಲ್ (4 ಅಂಕ)ಗಳಿಸಿ ತಂಡಕ್ಕೆ ನೆರವಾದರು.
ಆದರೆ ತಾರಾ ಆಟಗಾರ, ರಕ್ಷಣಾ ವಿಭಾಗದ ಮುಂಚೂಣಿಯ ಆಟಗಾರ ಫಜಲ್ ಅಟ್ರಾಚಲಿ (3 ಅಂಕ) ಕ್ಲಿಕ್ ಆಗಲಿಲ್ಲ. ಹೀಗಾಗಿ ಎರಡನೇ ಅವಧಿಯಲ್ಲಿ ಪಾಟ್ನಾ ಎಚ್ಚೆತ್ತುಕೊಂಡು ಆಡಲು ಇದು ಸಹಾಯಕವಾಯಿತು.
ಪರ್ದೀಪ್ ನರ್ವಾಲ್ (6 ಅಂಕ), ಮೊಹಮ್ಮದ್ ಇಸ್ಮಾಯಿಲ್ (6 ಅಂಕ) ಎರಡನೇ ಅವಧಿಯಲ್ಲಿ ಉತ್ತಮ ರೈಡಿಂಗ್ ಸಂಘಟಿಸಿದರು. ಇದರಿಂದ ಸೋಲಿನ ಅಂತರ ಕುಗ್ಗಿತು, ಅಷ್ಟೇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Pro Kabaddi: ಹರಿಯಾಣ- ಪಾಟ್ನಾ ಫೈನಲ್ ಹಣಾಹಣಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.