ಪ್ರೊ ಕಬಡ್ಡಿ ಸೀಸನ್‌-9 ಆರಂಭ; ಬೆಂಗಳೂರು ಬುಲ್ಸ್‌ , ದಬಾಂಗ್‌ ಡೆಲ್ಲಿ ಗೆಲುವಿನ ಆರಂಭ

Team Udayavani, Oct 7, 2022, 11:16 PM IST

ಪ್ರೊ ಕಬಡ್ಡಿ ಸೀಸನ್‌-9 ಆರಂಭ; ಬೆಂಗಳೂರು ಬುಲ್ಸ್‌ , ದಬಾಂಗ್‌ ಡೆಲ್ಲಿ ಗೆಲುವಿನ ಆರಂಭ

ಬೆಂಗಳೂರು: ಪ್ರೊ ಕಬಡ್ಡಿ ಸೀಸನ್‌-9ರ ಮೊದಲೆರಡು ಪಂದ್ಯಗಳಲ್ಲಿ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಮತ್ತು ಆತಿಥೇಯ ಬೆಂಗಳೂರು ಬುಲ್ಸ್‌ ಗೆಲುವು ಸಾಧಿಸಿವೆ. ಆರಂಭಿಕ ಪಂದ್ಯದಲ್ಲಿ ಡೆಲ್ಲಿ 41-27ರಿಂದ ಯು ಮುಂಬಾವನ್ನು, ಬಳಿಕ ಬುಲ್ಸ್‌ 34-29ರಿಂದ ತೆಲುಗು ಟೈಟಾನ್ಸ್‌ಗೆ ಸೋಲುಣಿಸಿತು.

ಬೆಂಗಳೂರು-ಟೈಟಾನ್ಸ್‌ ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿತ್ತು. ಡಿಫೆನ್ಸ್‌ನಲ್ಲಿ ಅಮೋಘ ನಿರ್ವಹಣೆ ತೋರುವ ಮೂಲಕ ಬುಲ್ಸ್‌ ಗೆಲುವು ಕಂಡಿತು. ಆರಂಭದಲ್ಲಿ ಹಿನ್ನಡೆಯಲ್ಲಿದ್ದ ಬುಲ್ಸ್‌ಗೆ ವಿಕಾಸ್‌ ಖಂಡೋಲ ಲೀಡ್‌ ತಂದುಕೊಡುವಲ್ಲಿ ಯಶಸ್ವಿಯಾದರು. ವಿರಾಮದ ವೇಳೆ ಪಂದ್ಯ 17-17 ಸಮಬಲದಲ್ಲಿತ್ತು.

ರೈಡರ್‌ ನೀರಜ್‌ ನರ್ವಾಲ್‌ ಅತ್ಯಧಿಕ 7 ಅಂಕ, ವಿಕಾಸ್‌ ಖಂಡೋಲ 5 ಅಂಕ, ಡಿಫೆಂಡರ್‌ಗಳಾದ ಮಹೇಂದರ್‌ ಸಿಂಗ್‌ ಮತ್ತು ಸೌರಭ್‌ ನಂದಲ್‌ ತಲಾ 4 ಅಂಕ ಗಳಿಸಿದರು.

ತೆಲುಗು ಟೈಟಾನ್ಸ್‌ ಪರ ರೈಡರ್‌ ವಿನಯ್‌ 7 ಅಂಕ, ಸಿದ್ಧಾರ್ಥ್ ದೇಸಾಯಿ 4 ಅಂಕ ತಂದಿತ್ತರು.

ಮುಂಬಾ ಮೇಲೆ ನವೀನ್‌ ರೈಡ್‌
ಕೂಟದ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಗೆಲುವಿನ ಆರಂಭ ಪಡೆಯಿತು. ಅದು ಯು ಮುಂಬಾವನ್ನು 41-27 ಅಂಕಗಳಿಂದ ಮಣಿಸಿತು.

ನವೀನ್‌ ಕುಮಾರ್‌ ನೇತೃತ್ವದ ಡೆಲ್ಲಿ ಆರಂಭದಿಂದಲೇ ಮುಂಬಾ ಮೇಲೆ ಸವಾರಿ ಮಾಡತೊಡಗಿತು. ಸ್ವತಃ ನವೀನ್‌ ಕುಮಾರ್‌ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಇನ್ನೊಂದೆಡೆ ಮುಂಬಾಗೆ ಫ‌ಜಲ್‌ ಅಟ್ರಾಚಲಿ ಅವರ ಅನುಪಸ್ಥಿತಿ ಭಾರೀ ಹಿನ್ನಡೆಯಾಗಿ ಪರಿಣಮಿಸಿತು. ವಿರಾಮದ ವೇಳೆ ಡೆಲ್ಲಿ 19-10 ಅಂತರದ ಮುನ್ನಡೆಯೊಂದಿಗೆ ಸಂಪೂರ್ಣ ಹಿಡಿತ ಸಾಧಿಸಿತು.

ದ್ವಿತೀಯಾರ್ಧದಲ್ಲೂ ಡೆಲ್ಲಿ ಇದೇ ಲಯದಲ್ಲಿ ಸಾಗಿತು. ಸರಾಸರಿ 10 ಅಂಕಗಳ ಮುನ್ನಡೆಯನ್ನು ಕಾಯ್ದು ಕೊಂಡೇ ಬಂದಿತು. ಸೂಪರ್‌ ರೈಡರ್‌ ನವೀನ್‌ ಪ್ರೊ ಕಬಡ್ಡಿಯ 43ನೇ “ಸೂಪರ್‌ ಟೆನ್‌’ನೊಂದಿಗೆ ಗಮನ ಸೆಳೆದರು. ಈ ಪಂದ್ಯದಲ್ಲಿ ಅವರು ತಂದುಕೊಟ್ಟ ಅಂಕ 13. ಇದರಲ್ಲಿ 11 ಟಚ್‌ ಪಾಯಿಂಟ್‌, 2 ಬೋನಸ್‌ ಪಾಯಿಂಟ್‌ ಸೇರಿತ್ತು.

ಮತ್ತೋರ್ವ ರೈಡರ್‌ ಆಶು ಮಲಿಕ್‌ ಉತ್ತಮ ಪ್ರದರ್ಶನ ನೀಡಿ 7 ಅಂಕ ಗಳಿಸಿದರು. ಡಿಫೆಂಡರ್‌ಗಳಾದ ಸಂದೀಪ್‌ ಧುಲ್‌, ಕೃಶನ್‌, ವಿಶಾಲ್‌ ತಲಾ 4 ಅಂಕ ಸಂಪಾದಿಸಿದರು.

ಮುಂಬಾ ಪರ ಮಿಂಚಿದವರೆಂದರೆ ರೈಡರ್‌ ಆಶಿಷ್‌ (7 ಅಂಕ), ಗುಮಾನ್‌ ಸಿಂಗ್‌ (4 ಅಂಕ) ಮಾತ್ರ. ಡಿಫೆಂಡರ್‌ ರಿಂಕು ಗಳಿಸಿದ್ದು 3 ಅಂಕ ಮಾತ್ರ.

ಟಾಪ್ ನ್ಯೂಸ್

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.