ಟೈಟಾನ್ಸ್ ಹೊಡೆತಕ್ಕೆ ಮಗುಚಿದ ಪಾಟ್ನಾ
Team Udayavani, Oct 20, 2018, 8:55 AM IST
ಪಾಟ್ನಾ: ಇಲ್ಲಿನ ಶಿವಛತ್ರಪತಿ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪುಣೆ ಚರಣದ ಪ್ರೊ ಕಬಡ್ಡಿ ವಲಯ “ಬಿ’ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ 31-35 ಅಂತರದಿಂದ ತೆಲುಗು ಟೈಟಾನ್ಸ್ ಜಯಭೇರಿ ಬಾರಿಸಿದೆ. ದಿನದ ಎರಡನೇ ಪಂದ್ಯದಲ್ಲಿ ಆತಿಥೇಯ ಪುಣೇರಿ ಪಲ್ಟಾನ್ಸ್ ತಂಡವು ಜೈಪುರ ಪಿಂಕ್ ಪ್ಯಾಂಥರ್ ತಂಡವನ್ನು 29-25 ಅಂಕಗಳಿಂದ ಕೆಡಸಿದೆ. ಟ್ಯಾಕಲ್ ಮೂಲಕವೇ ಪುಣೇರಿ ಗರಿಷ್ಠ 18 ಅಂಕ ಗಳಿಸಿ ಮೇಲುಗೈ ಸಾಧಿಸಲು ಯಶಿಸ್ವಯಾಗಿದೆ.
ಸೂಪರ್ ರೈಡ್ ಮತ್ತು ಟ್ಯಾಕಲ್ ಮೂಲಕ ಹಾಲಿ ಚಾಂಪಿಯನ್ ಪಾಟ್ನಾ ತಂಡವನ್ನು ಕಟ್ಟಿಹಾಕಲು ತೆಲುಗು ಟೈಟಾನ್ಸ್ ಯಶಸ್ವಿಯಾಯಿತು. ಪಾಟ್ನಾ ಆಟಗಾರರನ್ನು ಅದರಲ್ಲಿಯೂ ವಿಶೇಷವಾಗಿ ಪ್ರದೀಪ್ ನರ್ವಾಲ್ ರೈಡ್‌ಗೆ ಇಳಿದಾಗ ತೆಲುಗು ಆಟಗಾರರು ಅದ್ಭುತ ವ್ಯೂಹ ರಚಿಸಿ ಅವರನ್ನು ಹಿಡಿಯಲು ಪ್ರಯತ್ನಿಸುತ್ತಿದ್ದರು. ಇದರಿಂದ ಪಾಟ್ನಾ ಅಂಕ ಗಳಿಸಲು ಹಿನ್ನಡೆ ಆಯಿತು. ಕೊನೆಕ್ಷಣದವರವೆಗೂ ತೀವ್ರ ಹೋರಾಟದಿಂದ ಈ ಕಾದಾಟದಲ್ಲಿ ಪಾಟ್ನಾ ಅಂತಿಮವಾಗಿ ಅಲ್ಪ ಅಂತರದಿಂದ ಶರಣಾಯಿತು. ಇದು ಈ ಕೂಟದಲ್ಲಿ ಪಾಟ್ನಾ ಕಂಡ ಎರಡನೇ ಸೋಲು. ಚೆನ್ನೈ ಚರಣದ ಮೊದಲ ಪಂದ್ಯದಲ್ಲಿ ಆತಿಥೇಯ ತಮಿಳ್ ತಲೈವಾಸ್ ವಿರುದ್ಧ ಪಾಟ್ನಾ ಸೋಲು ಅನುಭವಿಸಿತ್ತು. ಇದಾದ ಬಳಿಕ ಸತತ ಎರಡು ಪಂದ್ಯವನ್ನು ಪಾಟ್ನಾ ಗೆದ್ದಿತ್ತು. ಎರಡು ಕೂಡ ಯುಪಿ ಯೋಧಾ ವಿರುದ್ಧವೇ ಆಗಿತ್ತು ಎನ್ನುವುದು ವಿಶೇಷ. ಪಾಟ್ನಾ ರೈಡ್‌ನಲ್ಲಿ 19 ಅಂಕ ಪಡೆದಿತ್ತು. ಮಂಜಿತ್ 16 ರೈಡಿಂಗ್‌ನಲ್ಲಿ 8 ಅಂಕ ಪಡೆದರೆ ಪ್ರದೀಪ್ ಮತ್ತು ಜೈದೀಪ್ ತಲಾ ಐದಂಕ ಗಳಿಸಿದರು.
ಟೈಟಾನ್ಸ್‌ಗೆ 3ನೇ ಗೆಲುವು
20 ಬಾರಿ ರೈಡ್ ಮಾಡಿದ ರಾಹುಲ್ ಚೌಧರಿ ಏಳಂಕ ಪಡೆದು ತಂಡದ ಗೆಲುವಿಗೆ ತನ್ನ ಕೊಡುಗೆ ಸಲ್ಲಿಸಿದರು. ಇದು ತೆಲುಗು ಈ ಕೂಟದಲ್ಲಿ ದಾಖಲಿಸಿದ ಮೂರನೇ ಗೆಲುವು ಆಗಿದೆ. ಆರಂಭದ ಎರಡು ಪಂದ್ಯಗಳಲ್ಲಿ ತಮಿಳ್ ಮತ್ತು ಯುಪಿ ವಿರುದ್ಧ ಜಯಭೇರಿ ಬಾರಿಸಿದ್ದ ತೆಲುಗು ಈ ಹಿಂದಿನ ಪಂದ್ಯದಲ್ಲಿ ಬಂಗಾಲ್ ವಾರಿಯರ್ ವಿರುದ್ಧ ಸೋಲು ಅನುಭವಿಸಿತ್ತು. ಟ್ಯಾಕಲ್‌ನಲ್ಲಿ ಗಮನ ಸೆಳೆದ ವಿಶಾಲ್ ಭಾರಧ್ವಾಜ್ 6 ಅಂಕ ಗಳಿಸಿದರು. ಅವರಲ್ಲದೇ ನೀಲೇಶ್ ಸಾಳುಂಕೆ ಐದಂಕ, ಅಬೋಜರ್ ಮಿಗಾನಿ ಐದಂಕ ಪಡೆದು ತಂಡದ ಗೆಲುವಿಗೆ ಸಹಕರಿಸಿದರು. ತೆಲುಗು ಟ್ಯಾಕಲ್‌ನಲ್ಲಿ ಗರಿಷ್ಠ 15 ಅಂಕ ಗಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.