Pro Kabaddi: ಬೆಂಗಾಲ್‌ಗೆ ಬಾಗಿದ ಬೆಂಗಳೂರು ಬುಲ್ಸ್
Team Udayavani, Nov 9, 2024, 10:13 PM IST
ಹೈದರಾಬಾದ್: ಶನಿವಾರದ ಬೆಂಗಾಲ್ ವಾರಿಯರ್ ಎದುರಿನ ಪ್ರೊ ಕಬಡ್ಡಿ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ 29-40 ಅಂತರದ ಸೋಲನುಭವಿಸಿತು. ಇದು 8 ಪಂದ್ಯಗಳಲ್ಲಿ ಬುಲ್ಸ್‌ಗೆ ಎದುರಾದ 6ನೇ ಆಘಾತ. ಬೆಂಗಾಲ್ 7 ಪಂದ್ಯಗಳಲ್ಲಿ 3ನೇ ಜಯ ಸಾಧಿಸಿತು.
ಆರಂಭದಿಂದಲೇ ಹಿಂದುಳಿದ ಬುಲ್ಸ್, ಎದುರಾಳಿಯನ್ನು ಓವರ್‌ಟೇಕ್ ಮಾಡುವಲ್ಲಿ ಸಂಪೂರ್ಣ ವಿಫಲವಾಯಿತು. ಬೆಂಗಾಲ್ ಪರ ರೈಡರ್‌ಗಳಾದ ನಿತಿನ್ ಕುಮಾರ್ (14), ಮಣಿಂದರ್ ಸಿಂಗ್ (10) ಮಿಂಚಿನ ಆಟವಾಡಿದರು. ಬುಲ್ಸ್ ಪರ ರೈಡರ್ ಅಕ್ಷಿತ್ 11, ಅಜಿಂಕ್ಯ ಪವಾರ್ 8 ಅಂಕ ಗಳಿಸಿದರು.
ಟೈಟಾನ್ಸ್‌ಗೆ ಸತತ 4ನೇ ಜಯ:
ಹಾವು ಏಣಿಯಾಟದಂತೆ ಸಾಗಿದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಒಂದೇ ಅಂಕದಿಂದ (34-33) ಪುಣೇರಿ ಪಲ್ಟಾನ್‌ಗೆ ಸೋಲುಣಿಸಿತು. ಇದು 5ನೇ ಪಿಕೆಎಲ್ ಬಳಿಕ ಟೈಟಾನ್ಸ್ ಸಾಧಿಸಿದ ಸತತ 4ನೇ ಗೆಲುವು. ಈ ಕೂಟದ 5ನೇ ಜಯ. ಆಲ್‌ರೌಂಡರ್ ವಿಜಯ್ ಮಲಿಕ್ (13), ನಾಯಕ ಪವನ್ ಸೆಹ್ರಾವತ್ (12) ಟೈಟಾನ್ಸ್ ಪರ ಉತ್ತಮ ಪ್ರದರ್ಶನ ನೀಡಿದರು. ಪುಣೇರಿ ಪರ ರೈಡರ್‌ಗಳಾದ ಪಂಕಜ್ ಮೋಹಿತೆ 9, ವಿ. ಅಜಿತ್ 6 ಅಂಕ ಗಳಿಸಿದರು. ಇದು 8 ಪಂದ್ಯಗಳಲ್ಲಿ ಪುಣೇರಿಗೆ ಎದುರಾದ ಕೇವಲ 2ನೇ ಸೋಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Ripponpete: ಖಾಸಗಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
Gangolli: ಪಿಸ್ತೂಲ್ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು
Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್.ಎಸ್.ಬಲ್ಲಾಳ್
Udupi: ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ರೆ.ಡಾ.ಲಾರೆನ್ಸ್ ಸಿ. ಡಿ’ಸೋಜಾ ಇನ್ನಿಲ್ಲ
Brahmavara: ಲಾಕ್‌ಅಪ್ ಡೆತ್ ಪ್ರಕರಣ: ಮರಣೋತ್ತರ ಪರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.