ಪ್ರೊ ಕಬಡ್ಡಿ: ಯು ಮುಂಬಾಗೆ ಭರ್ಜರಿ ಜಯ
Team Udayavani, Nov 10, 2018, 6:05 AM IST
ಮುಂಬೈ: ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಗೆಲುವಿನ ಮೇಲೆ ಗೆಲುವು ಕಾಣುತ್ತಿರುವ ಯು ಮುಂಬಾ ತಂಡ ಎ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಮರೆಯುತ್ತಿದೆ. ಮತ್ತೂಂದು ಕಡೆ ಸೋಲಿನ ಮೇಲೆ ಸೋಲು ಕಾಣುತ್ತಿರುವ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಎ ವಿಭಾಗದಲ್ಲಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ 48-24 ಅಂಕಗಳಿಂದ ಸೋತ ಜೈಪುರ ಮುಂದಿನ ಸುತ್ತಿಗೇರುವ ಆಶೆಯನ್ನು ಬಹುತೇಕ ಕೈಬಿಟ್ಟಿದೆ.
ಮುಂಬೈ ತಂಡ ಶುಕ್ರವಾರದ ಜಯದೊಂದಿಗೆ ತನ್ನ ಒಟ್ಟಾರೆ ಗೆಲುವಿನ ಸಂಖ್ಯೆಯನ್ನು 7ಕ್ಕೇರಿಸಿದೆ. ಇನ್ನೊಂದು ಪಂದ್ಯವನ್ನು ಸೋತು, 1 ಪಂದ್ಯ ಟೈ ಮಾಡಿಕೊಂಡಿದೆ. ಮತ್ತೂಂದು ಕಡೆ ಜೈಪುರ ಆಡಿದ 8 ಪಂದ್ಯಗಳಲ್ಲಿ 2ನ್ನು ಮಾತ್ರ ಗೆದ್ದು 6ನ್ನು ಸೋತಿದೆ.
ಜೈಪುರ ಹೀನಾಯ ಪ್ರದರ್ಶನ: ಜೈಪುರ ತಂಡ ಪ್ರಸ್ತುತ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿತು. ಮುಂಬೈನ ಅಬ್ಬರಕ್ಕೆ ಸಂಪೂರ್ಣ ತಲೆಬಾಗಿದ ಅದು ಸೊಲ್ಲೆತ್ತದೆ ಸೋತು ಹೋಯಿತು. ಜೈಪುರ ದಾಳಿ ಮತ್ತು ರಕ್ಷಣೆ ಎರಡೂ ವಿಭಾಗದಲ್ಲಿ ಪೂರ್ಣ ವೈಫಲ್ಯ ಕಂಡಿದೆ. ಮುಂಬೈ ಈ ಎರಡೂ ವಿಭಾಗದಲ್ಲಿ ಮಿಂಚಿ ಮೆರೆಯಿತು. ಮುಂಬೈನ ಅಭಿಷೇಕ್ ಸಿಂಗ್ ಮತ್ತು ದರ್ಶನ್ ಕಡಿಯನ್ ದಾಳಿ ಮೂಲಕ ಎದುರಾಳಿಯನ್ನು ಹಿಮ್ಮೆಟ್ಟಿಸಿದರು. ಅಭಿಷೇಕ್ ದಾಳಿಯಲ್ಲಿ 10, ರಕ್ಷಣೆಯಲ್ಲಿ 2 ಅಂಕ ಪಡೆದರು. ದರ್ಶನ್ ದಾಳಿಯಲ್ಲಿ 10 ಅಂಕ ಪಡೆದರು. ಮುಂಬೈ ಜಯಕ್ಕೆ ಕಾರಣವಾಗಿದ್ದು ಖ್ಯಾತ ರಕ್ಷಣೆ ಆಟಗಾರ ಫಜೆಲ್ ಅಟ್ರಾಚಲಿ. ಅವರು ಎದುರಾಳಿಗಳನ್ನು ಕೆಡವಿಕೊಳ್ಳುವ 6 ಯತ್ನಗಳಲ್ಲಿ 5 ಬಾರಿ ಯಶಸ್ವಿಯಾದರು.
ಜೈಪುರ ಪರ ಪರವಾಗಿಲ್ಲ ಎನ್ನುವ ಪ್ರದರ್ಶನ ನೀಡಿದ್ದ ದೀಪಕ್ ಹೂಡ. ಅವರು 13 ಬಾರಿ ದಾಳಿ ನಡೆಸಿದರೂ ಪಡೆದಿದ್ದು 6 ಅಂಕ ಮಾತ್ರ. ರಕ್ಷಣಾ ವಿಭಾಗವಂತೂ ವೈಫಲ್ಯದ ಗೂಡಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.