ಸ್ಟೀಲರ್ ಪಂಚ್‌ಗೆ ತತ್ತರಿಸಿದ ಯುಪಿ
Team Udayavani, Aug 15, 2019, 5:59 AM IST
ಅಹ್ಮದಾಬಾದ್: ಬೆಂಗಳೂರು ಬುಲ್ಸ್ ವಿರುದ್ಧ ಭರ್ಜರಿ ಗೆಲುವು ಗಳಿಸಿ ಲಯ ಕಂಡಿಕೊಂಡಿದ್ದ ಯುಪಿ ಯೋಧಾ ತಂಡ ಹರ್ಯಾಣ ಸ್ಟೀಲರ್ ವಿರುದ್ಧದ ಪಂದ್ಯದಲ್ಲಿ 36-33 ಅಂತರದ ಸೋಲನುಭವಿಸಿದೆ.
ಪ್ರೊ ಕಬಡ್ಡಿ ಏಳನೇ ಆವೃತ್ತಿ ಅಹ್ಮದಾಬಾದ್ ಚರಣದ ಬುಧವಾರದ ಮೊದಲ ಪಂದ್ಯದಲ್ಲಿ ವಿಕಾಸ್ ಕಾಂಡೋಲ ಪ್ರಚಂಡ ರೈಡಿಂಗ್ ಹಾಗೂ ಸುನೀಲ್ ಆಕರ್ಷಕ ಟ್ಯಾಕಲ್ ನಡೆಸುವ ಮೂಲಕ ಹರ್ಯಾಣಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ವಿಕಾಸ್ ರೈಡಿಂಗ್‌ನಲ್ಲಿ ಅಬ್ಬರಿಸಿ ಒಟ್ಟು 12 ಅಂಕ ಗಳಿಸಿದರೆ, ಸುನೀಲ್ ಟ್ಯಾಕಲ್‌ನಿಂದ 6 ಅಂಕ ಗಳಿಸಿ ತಂಡದ ಗೆಲುವಿನ ರೂವಾರಿಗಳಾದರು. ಉಳಿದಂತೆ ಕರ್ನಾಟಕದ ಅನುಭವಿ ಆಟಗಾರ ಪ್ರಶಾಂತ್ ಕುಮಾರ್ ರೈ (3 ಅಂಕ) ತಂಡವನ್ನು ಆಧರಿಸಿದರು. ಆದರೆ ಹರ್ಯಾಣದ ಅನುಭವಿ ಆಟಗಾರ ಧರ್ಮರಾಜ್ ಚೆರಾÉಥನ್ ಕಳಪೆ ಆಟ ಮತ್ತೆ ಮುಂದುವರಿಸಿ ನಿರಾಸೆ ಮೂಡಿಸಿದರು.
ಯುಪಿ ಯೋಧಾ ಸೋಲಿನ ಸರಣಿ ಮುಂದುವರಿದಿದೆ. ಶ್ರೀಕಾಂತ್ ಜಾಧವ್ (9 ಅಂಕ), ಮೋನು ಗೋಯತ್ (5 ಅಂಕ), ಸುಮಿತ್ (4 ಅಂಕ) ಮಿಂಚಿದರೂ ತಂಡದ ಸೋಲು ತಪ್ಪಲಿಲ್ಲ. ಇದು 8 ಪಂದ್ಯಗಳಲ್ಲಿ ಯೋಧಾ ಅನುಭವಿಸಿದ 4ನೇ ಸೋಲು.
ಗುಜರಾತ್‌ಗೆ ಮತ್ತೆ ಸೋಲು
ದಿನದ ದ್ವಿತೀಯ ಪಂದ್ಯದಲ್ಲಿ ಆತಿಥೇಯ ಗುಜರಾತ್ ಫಾರ್ಚೂನ್‌ಜೈಂಟ್ಸ್ ಮತ್ತೂಂದು ಸೋಲನುಭವಿಸಿತು. ಬೆಂಗಾಲ್ ವಾರಿ ಯರ್ ಈ ಮುಖಾಮುಖೀಯನ್ನು 28-26 ಅಂತರದಿಂದ ತನ್ನದಾಗಿಸಿ ಕೊಂಡಿತು. ಇದರೊಂದಿಗೆ ಗುಜರಾತ್ ಮನೆಯಂಗಳದಲ್ಲಿ ಹ್ಯಾಟ್ರಿಕ್ ಸೋಲಿನ ಅವಮಾನಕ್ಕೆ ಸಿಲುಕಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ ನಾಮ ನಿರ್ದೇಶ
Bengaluru: ಕೀಪರ್ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ
Cricket: ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ಥಾನ ಅಮೋಘ ಬ್ಯಾಟಿಂಗ್: ರಹಮತ್ ಶಾ ದ್ವಿಶತಕ
World Rapid Championships: ಕೊನೆರು ಹಂಪಿ ಚಾಂಪಿಯನ್; ಇರೆನ್ ವಿರುದ್ಧ ಜಯ
World Test Championship: ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ
ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ ನಾಮ ನಿರ್ದೇಶ
Padubidri: ಮೊಬೈಲ್ ಕೊಡಿಸದ ತಾಯಿ; ಸಾಯಲು ಹೆದ್ದಾರಿಗೋಡಿದ ಮಗ; ಲಾರಿ ಡಿಕ್ಕಿ
Bengaluru: ಕೀಪರ್ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ
Cricket: ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ಥಾನ ಅಮೋಘ ಬ್ಯಾಟಿಂಗ್: ರಹಮತ್ ಶಾ ದ್ವಿಶತಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.