ಗುಜರಾತ್‌ ಫೈನಲ್‌ ಪ್ರವೇಶ


Team Udayavani, Oct 25, 2017, 7:55 AM IST

gujarath.jpg

ಮುಂಬಯಿ: ಪ್ರೊ ಕಬಡ್ಡಿ 5ನೇ ಆವೃತ್ತಿಯಲ್ಲಿ ಅಂಬೆಗಾಲಿಟ್ಟ ಗುಜರಾತ್‌ ಫಾರ್ಚೂನ್‌ಜೈಂಟ್‌ ತಂಡ ಈಗ ಎಲ್ಲರಿಗೂ ಅಚ್ಚರಿಯಾಗಬಲ್ಲ  ಫ‌ಲಿತಾಂಶವೊಂದನ್ನು  ನೀಡಿದೆ. ಕ್ವಾಲಿಫೈಯರ್‌ 1ರಲ್ಲಿ ಗುಜರಾತ್‌  42-17 ಅಂತರ ದಿಂದ ಬೆಂಗಾಲ್‌ ವಾರಿಯರ್ ತಂಡವನ್ನು ಸೋಲಿಸುವ ಮೂಲಕ ಕೂಟದ ಮೊದಲ ತಂಡವಾಗಿ ಫೈನಲ್‌ ಪ್ರವೇಶಿಸಿದೆ. ಸೋತ ಬೆಂಗಾಲ್‌ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ತಂಡ ದೊಂದಿಗೆ ಮತ್ತೂಂದು ಅಗ್ನಿಪರೀಕ್ಷೆ ಎದುರಿಸಲಿದೆ. ಇಲ್ಲಿ ಗೆದ್ದವರಿಗೆ ಫೈನಲ್‌ ಟಿಕೆಟ್‌ ಲಭಿಸಲಿದೆ.

ಮಂಗಳವಾರದ ಪಂದ್ಯದಲ್ಲಿ ಗುಜರಾತ್‌ ಸುಲಭವಾಗಿ ಬೆಂಗಾಲ್‌ಗೆ ನೀರು ಕುಡಿಸಿತು. ಬೆಂಗಾಲ್‌ ತಂಡವನ್ನು ಫೈನಲ್‌ಗೆ ಕರೆದೊಯ್ಯಲು ಪ್ರಮುಖ ರೈಡರ್‌ ದೀಪಕ್‌ ನರ್ವಲ್‌ (5 ಅಂಕ) ನಡೆಸಿದ್ದೇ ಶ್ರೇಷ್ಠ ಹೋರಾಟ. ಉಳಿದಂತೆ ತಾರಾ ಆಟಗಾರರು ರಕ್ಷಣಾ ಹಾಗೂ ದಾಳಿಯಲ್ಲಿ ಕೈಕೊಟ್ಟರು. ಗುಜರಾತ್‌ ತಂಡವನ್ನು ಗೆಲ್ಲಿಸಿದ್ದು ಸಚಿನ್‌ (9 ಅಂಕ) ಹಾಗೂ ಮಹೇಂದ್ರ ರಜಪೂತ್‌ (8 ಅಂಕ) ಅವರ ಮಿಂಚಿನ ರೈಡಿಂಗ್‌.

ಗುಜರಾತ್‌ ಪಾರಮ್ಯ: ಬೆಂಗಾಲ್‌ ಮೇಲೆ ಗುಜರಾತ್‌ ಆರಂಭದಿಂದಲೂ ಅಬ್ಬರಿಸಿತು. ಒಂದೊಂದು ಅಂಕವನ್ನು ಗಳಿಸುತ್ತ ಸಾಗಿತು. ಆದರೆ ಮೊದಲ ಅವಧಿಯ ಆಟದಲ್ಲಿ ಬೆಂಗಾಲ್‌ ಕೂಡ ಇದಕ್ಕೆ ಸರಿಯಾದ ಉತ್ತರವನ್ನೇ ನೀಡಲು ಆರಂಭಿಸಿತು. ಮೊದಲ ಅವಧಿ ಮುಗಿದಾಗ ಗುಜರಾತ್‌ 12 ಅಂಕ, ಬೆಂಗಾಲ್‌ 10 ಅಂಕ ಗಳಿಸಿತ್ತು.

ಆದರೆ 2ನೇ ಅವಧಿಯಲ್ಲಿ ಬೆಂಗಾಲ್‌ ಸಂಪೂರ್ಣ ದಿಕ್ಕು ತಪ್ಪಿತು. ಅಂಕ ಗಳಿಸಲು ಅದಕ್ಕೆ ಸಾಧ್ಯವೇ ಆಗಲಿಲ್ಲ. ಅಷ್ಟರ ಮಟ್ಟಿಗೆ ಗುಜರಾತ್‌ ಆಟಗಾರರು ಪಾರಮ್ಯ ಸಾಧಿಸಿದರು. ನೋಡುನೋಡುತ್ತಿದ್ದಂತೆ ಗುಜರಾತ್‌ ಅಂಕ ಗಳಿಕೆಯಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿತು. ಸುಕೇಶ್‌ ಹೆಗ್ಡೆ ಕದನಕ್ಕೆ ಇಳಿಯಲಿಲ್ಲ. ಹೆಚ್ಚುವರಿ ಆಟಗಾರರಾಗಿ ಅವರು ಬೆಂಚ್‌ನಲ್ಲಿಯೇ ಕುಳಿತುಕೊಳ್ಳಬೇಕಾಯಿತು.

ಕುನ್‌ ಲೀ ವೈಫ‌ಲ್ಯ: ಲೀಗ್‌ ಹಂತದಿಂದಲೂ ಬೆಂಗಾಲ್‌ ಬೆನ್ನೆಲುಬಾಗಿ ನಿಂತಿದ್ದ ಕೊರಿಯಾ ಮೂಲದ ಬೆಂಗಾಲ್‌ ಸ್ಟಾರ್‌ ರೈಡರ್‌ ಕುನ್‌ ಲೀ ಭಾರೀ ವೈಫ‌ಲ್ಯ ಅನುಭವಿಸಿದರು. 5 ರೈಡಿಂಗ್‌ನಿಂದ 1 ಅಂಕ ಗಳಿಸಿದ್ದಷ್ಟೇ ಅವರ ಸಾಧನೆ.

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.