ಅ. 5ರಿಂದ ಪ್ರೊ ಕಬಡ್ಡಿ ಲೀಗ್
Team Udayavani, Jul 31, 2018, 10:24 AM IST
ಮುಂಬಯಿ: ಕ್ರೀಡಾಪ್ರೇಮಿಗಳು ಕಾತುರದಿಂದ ನಿರೀಕ್ಷಿಸುತ್ತಿರುವ ಪ್ರೊ ಕಬಡ್ಡಿಯ 6ನೇ ಆವೃತ್ತಿ ಅಕ್ಟೋಬರ್ 5ರಿಂದ ಮುಂದಿನ 2019ರ ಜನವರಿ 5ರ ವರೆಗೆ ನಡೆಯಲಿವೆ. ಮಶಾಲ್ ನ್ಪೋರ್ಟ್ಸ್ ಪ್ರೈ. ಲಿಮಿಟೆಡ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಬಾರಿಯ ಪ್ರೊ ಕಬಡ್ಡಿಗೆ ನಾಲ್ಕು ಹೊಸ ತಂಡಗಳು ಸೇರ್ಪಡೆ ಗೊಂಡಿವೆ. ಇದರಿಂದ ತಂಡಗಳ ಸಂಖ್ಯೆ ಎಂಟರಿಂದ 12ಕ್ಕೆ ಏರಿದೆ. 13 ವಾರಗಳ ಕಾಲ ನಡೆಯುವ ಕಬಡ್ಡಿ ಕೂಟದಲ್ಲಿ ಒಟ್ಟು 138 ಪಂದ್ಯಗಳು ನೋಡುಗರ ಕಣ್ಮನ ತಣಿಸಲಿವೆ.
ವೇಳಾಪಟ್ಟಿ ಬದಲು
ಪ್ರತಿ ಬಾರಿಯಂತೆ ಈ ಬಾರಿಯೂ ಉತ್ತಮ ಜನಪ್ರಿಯತೆ ಪಡೆಯುವ ನಿರೀಕ್ಷೆ ಆಯೋಜಕರದ್ದು. ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಪ್ರೊ ಕಬಡ್ಡಿ ಲೀಗ್ ಆಯುಕ್ತ ಅನುಪಮ್ ಗೋಸ್ವಾಮಿ, “ಸಾಮಾನ್ಯವಾಗಿ ಜುಲೈನಿಂದ ಅಕ್ಟೋಬರ್ ವರೆಗೆ ಪ್ರೊ ಕಬಡ್ಡಿ ನಡೆಸಲಾಗುತ್ತಿತ್ತು. ಆದರೆ ಈ ವರ್ಷ ಆಗಸ್ಟ್‌ನಲ್ಲಿ ಏಶ್ಯನ್ ಗೇಮ್ಸ್ ಇರುವುದರಿಂದ ದೇಶಿ ಹಾಗೂ ವಿದೇಶಿ ಆಟಗಾರರ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಕೂಟವನ್ನು ಅಕ್ಟೋಬರ್‌ನಿಂದ ಜನವರಿ ಆರಂಭದ ತನಕ ನಡೆಸಲು ತೀರ್ಮಾನಿಸಲಾಗಿದೆ. ವೇಳಾಪಟ್ಟಿ ಬದಲಾದರೂ ಜನರು ಈ ಕೂಟ ವನ್ನು ಬೆಂಬಲಿಸುತ್ತಾರೆಂಬ ನಿರೀಕ್ಷೆಯಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
ಕೊಹ್ಲಿ-ರೋಹಿತ್ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
BPL;ಅಂತಿಮ ಓವರಿನಲ್ಲಿ 30 ರನ್ ಸಿಡಿಸಿದ ನುರುಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.