ಕಂಠೀರವದಲ್ಲಿ ಪ್ರೊ ಕಬಡ್ಡಿ ಕಲರವ : ಬೆಂಗಳೂರಿನಲ್ಲಿ ಇಂದಿನಿಂದ ಪ್ರೊ ಕಬಡ್ಡಿ ಸೀಸನ್-9
Team Udayavani, Oct 7, 2022, 8:00 AM IST
ಬೆಂಗಳೂರು ಕ್ರೀಡಾ ಜಗತ್ತು ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಕ್ಷಣಗಣನೆ ಯಲ್ಲಿರುವಾಗಲೇ ಪ್ರೊ ಕಬಡ್ಡಿ 9ನೇ ಸೀಸನ್ ದೌಡಾಯಿಸಿ ಬಂದಿದೆ. ಬೆಂಗಳೂರಿನ “ಶ್ರೀ ಕಂಠೀರವ ಸ್ಟೇಡಿಯಂ’ನಲ್ಲಿ ಶುಕ್ರವಾರದಿಂದ ಕಬಡ್ಡಿ ಕಲರವ ಕೇಳಿಬರಲಿದೆ. ಕೊರೊನಾ ವೇಳೆ ಮುಚ್ಚಿದ ಸ್ಟೇಡಿಯಂನಲ್ಲಿ ಸಾಗಿದ ಪಂದ್ಯಾವಳಿ, 3 ವರ್ಷಗಳ ಬಳಿಕ ವೀಕ್ಷಕರಿಗೆ ತೆರೆಯಲ್ಪಡುವುದೊಂದು ವಿಶೇಷ. ಹೀಗಾಗಿ ಕಬಡ್ಡಿ ಕ್ರೇಜ್ ದೊಡ್ಡ ಮಟ್ಟದಲ್ಲೇ ಹಬ್ಬಲಿದೆ ಎಂಬ ನಿರೀಕ್ಷೆ ದಟ್ಟವಾಗಿದೆ.
ಈ ಬಾರಿಯ ಪ್ರೊ ಕಬಡ್ಡಿ ಪಂದ್ಯಾವಳಿ ಬೆಂಗ ಳೂರು ಸೇರಿದಂತೆ 3 ಕೇಂದ್ರಗಳಲ್ಲಿ ನಡೆ ಯಲಿದೆ. ಉಳಿದೆರಡು ತಾಣಗಳೆಂದರೆ ಪುಣೆ ಮತ್ತು ಹೈದರಾಬಾದ್. ಕಳೆದ ವರ್ಷ ಬೆಂಗಳೂರಿನಲ್ಲೇ ಪ್ರೊ ಕಬಡ್ಡಿ ನಡೆದಿದ್ದರೂ, ಸಂಪೂರ್ಣ ಜೈವಿಕ ಸುರûಾ ವಲಯವನ್ನು ರಚಿಸಲಾಗಿತ್ತು. ಹಾಗಾಗಿ ಆರಂಭದಲ್ಲಿ ಮಾಧ್ಯಮಗಳಿಗೂ ಪ್ರವೇಶ ನೀಡಿರಲಿಲ್ಲ. ಈಗ ಅಂತಹ ಪರಿಸ್ಥಿತಿಯಿಲ್ಲ.
ಈ ಸಂಬಂಧ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಎಲ್ಲ 12 ತಂಡಗಳ ನಾಯಕರು ಪಾಲ್ಗೊಂಡಿದ್ದರು. ಜತೆಗೆ ಪ್ರೊ ಕಬಡ್ಡಿ ಮಾಲಕ ಸಂಸ್ಥೆ ಮಾಶಲ್ ನ್ಪೋರ್ಟ್ಸ್ನ ಆಯುಕ್ತ ಅನುಪಮ್ ಗೋಸ್ವಾಮಿ ಕೂಡ ಇದ್ದರು.
ಕೂಟದ ಮೊದಲ 3 ದಿನ ತಲಾ 3 ಪಂದ್ಯಗಳು ನಡೆಯಲಿವೆ. ಇದರೊಂದಿಗೆ ಮೂರೇ ದಿನಗಳಲ್ಲಿ ಎಲ್ಲ 12 ತಂಡಗಳ ಆಟವನ್ನೂ ಸವಿಯಬಹುದಾಗಿದೆ.
7.30ಕ್ಕೆ ಆರಂಭವಾಗಲಿರುವ ಕೂಟದ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಮತ್ತು ಯು ಮುಂಬಾ ಸೆಣಸಲಿವೆ. “ನಾವು ಹಾಲಿ ಚಾಂಪಿಯನ್ಸ್. ಈ ಸೀಸನ್‌ನಲ್ಲೂ ಉತ್ತಮ ಸಾಧನೆಯನ್ನು ಕಾಯ್ದುಕೊಂಡು ಬರುವ ವಿಶ್ವಾಸವಿದೆ. ಹಿಂದೆ ಕೇವಲ ಆಟಗಾರನಾಗಿದ್ದೆ. ಈಗ ನಾಯಕತ್ವದ ಜವಾಬ್ದಾರಿಯೂ ಇದೆ. ಇಂಥ ಜವಾಬ್ದಾರಿಗಳಿಂದಲೇ ಆಟಗಾರನೊಬ್ಬ ಹೆಚ್ಚು ಬಲಿಷ್ಠನಾಗಬಲ್ಲ ಎಂಬ ವಿಶ್ವಾಸ ನನ್ನದು’ ಎಂಬುದು ದಬಾಂಗ್ ಡೆಲ್ಲಿ ನಾಯಕ ನವೀನ್ ಕುಮಾರ್ ಅವರ ಅನಿಸಿಕೆ. ನವೀನ್ ಅವರೇ ಡೆಲ್ಲಿ ತಂಡದ ಶಕ್ತಿ.
ಯು ಮುಂಬಾ ಯುವ ಆಟಗಾರರನ್ನೇ ಹೊಂದಿರುವ ಪಡೆ. ಕಳೆದ ಸೀಸನ್‌ನಲ್ಲಿ 60 ಟ್ಯಾಕಲ್ ಅಂಕ ಗಳಿಸಿದ ರೈಟ್ ಕಾರ್ನರ್ ಪ್ಲೇಯರ್ ರಿಂಕು ಮುಂಬಾದ ಪ್ರಧಾನ ಆಟಗಾರ. ರೈಡರ್ ಗುಮಾನ್ ಸಿಂಗ್ ಅವರನ್ನು ತಂಡ ಹೆಚ್ಚು ಅವಲಂಬಿಸಿದೆ. ಡಿಫೆನ್ಸ್ ವಿಭಾಗದಲ್ಲಿ ಸುರೀಂದರ್ ಸಿಂಗ್ ಇದ್ದಾರೆ. ಇರಾನ್‌ನ ಹೈದರ್ ಅಲಿ ಇಕ್ರಾಮಿ (ರೈಡರ್) ಮತ್ತು ಗೊಲಾಮ ಅಬ್ಟಾಸ್ (ಆಲ್‌ರೌಂಡರ್) ಸಾಮರ್ಥ್ಯ ಇನ್ನಷ್ಟೇ ಅರಿವಿಗೆ ಬರಬೇಕಿದೆ.
ಸೆಹ್ರಾವತ್ ಇಲ್ಲದ ಬೆಂಗಳೂರು
ಆತಿಥೇಯ ಬೆಂಗಳೂರು ಬುಲ್ಸ್ ಸ್ಟಾರ್ ಆಟಗಾರ ಪವನ್ ಸೆಹ್ರಾವತ್ ಅವರ ಪವರ್ ಕಳೆದುಕೊಂಡಿದೆ. ವಿಕಾಸ್ ಖಂಡೋಲ ಈ ನಿರ್ವಾತವನ್ನು ತುಂಬ ಬಲ್ಲರೇ ಎಂಬುದೊಂದು ಪ್ರಶ್ನೆ. ಅವರು ಈ ಕೂಟದ 2ನೇ ದುಬಾರಿ ಆಟಗಾರ. ತಂಡದ ರಕ್ಷಣಾ ವಿಭಾಗ ಬಲಿಷ್ಠ. ಬುಲ್ಸ್ ಉಳಿಸಿಕೊಂಡ 10 ಆಟಗಾರರಲ್ಲಿ 9 ಮಂದಿ ಡಿಫೆಂಡರ್ ಎಂಬುದು ತಂಡದ ಹೆಗ್ಗಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.