ProKabaddi: 9ನೇ ಜಯ ಸಾಧಿಸಿದ ಯುಪಿ ಪ್ಲೇಆಫ್ ನತ್ತ
Team Udayavani, Dec 7, 2024, 9:57 PM IST
ಪುಣೆ: ಶನಿವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಯುಪಿ ಯೋಧಾಸ್ 36-33 ಅಂತರದಿಂದ ಪುಣೇರಿ ಪಲ್ಟಾನ್ ತಂಡವನ್ನು ಮಣಿಸಿದೆ. ಇದರೊಂದಿಗೆ ಯೋಧಾಸ್ ಗೆಲುವಿನ ಸಂಖ್ಯೆ 9ಕ್ಕೆ ಏರಿದೆ.
ಒಟ್ಟು 17 ಪಂದ್ಯಗಳನ್ನು ಆಡಿರುವ ಅದು 6 ಪಂದ್ಯಗಳನ್ನು ಸೋತು, 2 ಪಂದ್ಯ ಡ್ರಾ ಮಾಡಿಕೊಂಡಿದೆ. ಸದ್ಯದ ಸ್ಥಿತಿಯಲ್ಲಿ ಯುಪಿ ಪ್ಲೇಆಫ್ಗೇರುವುದು ಖಚಿತವಾಗಿದೆ.
ಮಿಂಚಿನ ಪ್ರದರ್ಶನ ನೀಡಿದ ರೈಡರ್ ಗಗನ್ ಗೌಡ ಯೋಧಾಸ್ ಗೆಲುವಿನ ಹೀರೋ ಎನಿಸಿದರು (15 ಅಂಕ). ಭವಾನಿ ರಜಪೂತ್ ದಾಳಿಯಲ್ಲಿ 6 ಅಂಕ ಪಡೆದರು.
ರಕ್ಷಣೆಯಲ್ಲಿ ನೆರವಿಗೆ ನಿಂತಿದ್ದು ಸುಮಿತ್. ಇವರು 3 ಯತ್ನದಲ್ಲಿ ಯಶ ಕಂಡರು. ಪುಣೇರಿ ಪರ ಪಂಕಜ್ ಮೋಹಿತೆ 11 ಅಂಕ ಗಳಿಸಿದರು. ಇದು ಪುಣೇರಿಗೆ ಎದುರಾದ 7ನೇ ಸೋಲು. ಸಾಂ ಕವಾಗಿ ನೋಡಿದರೆ ಪುಣೇರಿ ಹೇಳಿಕೊಳ್ಳುವಷ್ಟು ಯಶಸ್ಸು ಗಳಿಸಲಿಲ್ಲ.
ಟೈಟಾನ್ಸ್ ಗೆಲುವು: ತೆಲುಗು ಟೈಟಾನ್ಸ್ ಮತ್ತು ಬೆಂಗಾಲ್ ವಾರಿಯರ್ ನಡುವಿನ ದ್ವಿತೀಯ ಪಂದ್ಯ ಕೂಡ ಅತ್ಯಂತ ರೋಚಕವಾಗಿ ಸಾಗಿತು. ಇದನ್ನು ಟೈಟಾನ್ಸ್ 34-32 ಅಂಕಗಳಿಂದ ಜಯಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.