ಪೂಜಾರ ಶತಕ ವೈಭವ; ಭಾರತ ಸುಭದ್ರ
Team Udayavani, Dec 28, 2018, 6:00 AM IST
ಮೆಲ್ಬರ್ನ್: ಫಾರ್ಮ್ ನಲ್ಲಿರುವ ಚೇತೇಶ್ವರ ಪೂಜಾರ ಅವರ ಆಕರ್ಷಕ ಶತಕದಿಂದಾಗಿ ಭಾರತವು ಆಸ್ಟ್ರೇಲಿಯ ತಂಡದೆದುರಿನ ಮೂರನೇ ಟೆಸ್ಟ್‌ನಲ್ಲಿ ಸುಭದ್ರ ಸ್ಥಿತಿಯಲ್ಲಿದೆ.
2 ವಿಕೆಟಿಗೆ 215 ರನ್ನುಗಳಿಂದ ಎರಡನೇ ದಿನದಾಟ ಆರಂಭಿಸಿದ ಭಾರತ ಪೂಜಾರ, ಕೊಹ್ಲಿ ಮತ್ತು ರೋಹಿತ್ ಶರ್ಮ ಅವರ ಉತ್ತಮ ಆಟದಿಂದಾಗಿ 7 ವಿಕೆಟಿಗೆ 443 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ ಆಸ್ಟ್ರೇಲಿಯ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದೆ. ಆರನ್ ಫಿಂಚ್ (3) ಮತ್ತು ಮಾರ್ಕಸ್ ಹ್ಯಾರಿಸ್ 5 ರನ್ನಿನಿಂದ ಆಡುತ್ತಿದ್ದಾರೆ.
ಪೂಜಾರ ಮೆರೆದಾಟ
ದ್ವಿತೀಯ ದಿನ ಮೆಲ್ಬರ್ನ್ ಮೈದಾನದಲ್ಲಿ ಮೆರೆದಾಡಿದ ಪೂಜಾರ ಇನ್ನೊಂದು ಶತಕ ಸಿಡಿಸಿ ಸಂಭ್ರಮಿಸಿದರು. ಅಡಿಲೇಡ್ ಟೆಸ್ಟ್‌ನಲ್ಲಿ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದ ಪೂಜಾರ ಇಲ್ಲಿಯೂ ಸೊಗಸಾದ ಇನ್ನಿಂಗ್ಸ್ ಆಡಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು. ಸ್ವಲ್ಪ ನಿಧಾನಗತಿಯಲ್ಲಿ ಆಡಿದ್ದನ್ನು ಬಿಟ್ಟರೆ ಅವರ ಆಟದಲ್ಲಿ ಯಾವುದೇ ತಪ್ಪು ಇರಲಿಲ್ಲ. 319 ಎಸೆತ ಎದುರಿಸಿದ ಅವರು 10 ಬೌಂಡರಿ ನೆರವಿನಿಂದ 106 ರನ್ ಸಿಡಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಅತ್ಯಂತ ನಿಧಾನಗತಿಯ ಶತಕವಾಗಿದೆ.
280ಎಸೆತಗಳಲ್ಲಿ ಪೂಜಾರ ಈ ಸರಣಿಯಲ್ಲಿ ತನ್ನ ಎರಡನೇ ಹಾಗೂ ಬಾಳ್ವೆಯ 17ನೇ ಶತಕ ಸಿಡಿಸಿ ಲಕ್ಷ್ಮಣ್ ದಾಖಲೆಯನ್ನು ಸಮಗಟ್ಟಿದರು. ಇದೇ ವೇಳೆ 16 ಶತಕ ಸಿಡಿಸಿದ್ದ ಗಂಗೂಲಿ ಸಾಧನೆಯನ್ನು ಹಿಂದಿಕ್ಕಿದರು. ಕೊಹ್ಲಿ ಜತೆ ಮೂರನೇ ವಿಕೆಟಿಗೆ 170 ರನ್ನುಗಳ ಜತೆಯಾಟದಲ್ಲಿ ಪೂಜಾರ ಪಾಲ್ಗೊಂಡರು. ಟೆಸ್ಟ್‌ನಲ್ಲಿ 20ನೇ ಅರ್ಧಶತಕ ಹೊಡೆ¨ ಕೊಹ್ಲಿ 204 ಎಸೆತಗಳಿಂದ 82 ರನ್ ಹೊಡೆದು ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ಈ ಸಾಧನೆ ವೇಳೆ ವಿದೇಶಿ ಟೆಸ್ಟ್‌ಗಳಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ರಾಹುಲ್ ದ್ರಾವಿಡ್ ಪೇರಿಸಿದ ಗರಿಷ್ಠ ರನ್ (1137) ದಾಖಲೆಯನ್ನು ಹಿಂದಿಕ್ಕಿದರು.ದಿನದಾಟದ ಅಂತ್ಯದಲ್ಲಿ 70ನೇ ಓವರ್ ಮುಗಿಯುತ್ತಲೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಕೊಹ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿದರು.
ಪೂಜಾರ ಔಟಾದ ಬಳಿಕ ಆಡಲು ಬಂದ ರೋಹಿತ್ ಶರ್ಮ, ರಹಾನೆ ಮತ್ತು ರಿಷಬ್ ಪಂತ್ ಉತ್ತಮ ಆಟವಾಡಿದ್ದರಿಂದ ಭಾರತ ಸುಭದ್ರ ಸ್ಥಿತಿ ತಲುಪಿತು. ಕೆಳಗಿನ ಕ್ರಮಾಂಕದಲ್ಲಿ ಆಡಿದ ರೋಹಿತ್ ಶರ್ಮ ಭರ್ಜರಿ ಆಟವಾಡಿ ಗಮನ ಸೆಳೆದರು. ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದಾಗ ರೋಹಿತ್ 63 ರನ್ ಗಳಿಸಿ ಆಡುತ್ತಿದ್ದರು. 114 ಎಸೆತ ಎದುರಿಸಿದ್ದ ಅವರು 5 ಬೌಂಡರಿ ಬಾರಿಸಿದ್ದರು.
ಟೀ ವಿರಾಮದ ಬಳಿಕ ಆಸ್ಟ್ರೇಲಿಯ ಫೀಲ್ಡರ್‌ಗಳು ಮೂರು ಸುಲಭ ಕ್ಯಾಚ್ ಕೈಚೆಲ್ಲಿದ್ದರು. ಮೂರು ಬಾರಿಯೂ ನಥನ್ ಲಿಯೋನ್ ದಾಳಿ ನಡೆಸಿದ್ದರು. ಇದರಿಂದ ಅವರು ಬಹಳಷ್ಟು ಒತ್ತಡಕ್ಕೆ ಸಿಲುಕುವಂತಾಯಿತು. ಮೊದಲಿಗೆ ರೋಹಿತ್ 15 ರನ್ ಗಳಿಸಿದ ವೇಳೆ ಬದಲಿ ಆಟಗಾರ ಪೀಟರ್ ಸಿಡ್ಲ್ ಕ್ಯಾಚ್ ಕೈಚೆಲ್ಲಿದ್ದರು.
ಸ್ಕೋರ್‌ಕಾರ್ಡ್
ಭಾರತ 1ನೇ ಇನಿಂಗ್ಸ್ 443/7 ಡಿ.
ಚೇತೇಶ್ವರ ಪೂಜಾರ ಬಿ ಪ್ಯಾಟ್ ಕಮಿನ್ಸ್ 106
ವಿರಾಟ್ ಕೊಹ್ಲಿ ಸಿ ಫಿಂಚ್ ಬಿ ಸ್ಟಾರ್ಕ್ 82
ಅಜಿಂಕ್ಯ ರಹಾನೆ ಎಲ್ಬಿ ಬಿ ಲಿಯೋನ್ 34
ರೋಹಿತ್ ಶರ್ಮ ಅಜೇಯ 63
ರಿಷಭ್ ಪಂತ್ ಸಿ ಖವಾಜ ಬಿ ಸ್ಟಾರ್ಕ್ 39
ರವೀಂದ್ರ ಜಡೇಜ ಸಿ ಪೇನ್ ಬಿ ಹೇಜಲ್‌ವುಡ್ 4
ಇತರೆ 31
ವಿಕೆಟ್ ಪತನ: 1-40, 2-123, 3-293, 4-299, 5-361, 6-437, 7-443
ಬೌಲಿಂಗ್
ಮಿಚೆಲ್ ಸ್ಟಾರ್ಕ್ 28 7 87 2
ಜೋಶ್ ಹೇಜಲ್‌ವುಡ್ 31.4 10 86 1
ನಥನ್ ಲಿಯೋನ್ 48 7 110 1
ಪ್ಯಾಟ್ ಕಮಿನ್ಸ್ 34 10 72 3
ಮಿಚೆಲ್ ಮಾರ್ಷ್ 26 4 51 0
ಏರಾನ್ ಫಿಂಚ್ 2 0 8 0
ಆಸ್ಟ್ರೇಲಿಯ 1ನೇ ಇನಿಂಗ್ಸ್ 8/0
ಮಾರ್ಕಸ್ ಹ್ಯಾರಿಸ್ ಅಜೇಯ 5
ಏರಾನ್ ಫಿಂಚ್ ಅಜೇಯ 3
ಇತರೆ 0
ಬೌಲಿಂಗ್
ಇಶಾಂತ್ ಶರ್ಮ 2 1 2 0
ಜಸಿøàತ್ ಬುಮ್ರಾ 3 1 6 0
ರವೀಂದ್ರ ಜಡೇಜ 1 1 0 0
ಟಿಮ್ ಪೇನ್ ಚಟಾಕಿಗೆ ರೋಹಿತ್ ನಗುವೇ ಉತ್ತರ!
ಸೀಮಿತ ಓವರ್‌ಗಳಲ್ಲಿ ಸಿಡಿದರೂ, ಟೆಸ್ಟ್ ಪಂದ್ಯಗಳಲ್ಲಿ ಕಳಪೆ ದಾಖಲೆಯನ್ನು ಹೊಂದಿದ್ದ ರೋಹಿತ್ ಶರ್ಮ 3ನೇ ಟೆಸ್ಟ್‌ನಲ್ಲಿ ಆ ಕಳಂಕದಿಂದ ಹೊರಬಂದರು. 63 ರನ್ ಗಳಿಸಿ ಅಜೇಯರಾಗಿ ಉಳಿಯುವ ಮೂಲಕ, ಟೆಸ್ಟ್‌ನಲ್ಲೂ ತಮ್ಮ ಸ್ಥಾನ ಭದ್ರಪಡಿಸಿಕೊಂಡರು. ಅವರ ಈ ಅಜೇಯ ಇನ್ನಿಂಗ್ಸ್ ವೇಳೆ ತಮಾಷೆಯೊಂದು ನಡೆಯಿತು. ಹಿಂದಿನ ಪಂದ್ಯದಲ್ಲಿ ಕೊಹ್ಲಿಯೊಂದಿಗೆ ಜೋರು ಜೋರಾಗಿ ಮಾತಿನ ಚಕಮಕಿ ನಡೆಸಿದ್ದ ಆಸೀಸ್ ನಾಯಕ ಟಿಮ್ ಪೇನ್, ಪ್ರಸ್ತುತ ಪಂದ್ಯದಲ್ಲಿ ರೋಹಿತ್ ಶರ್ಮರೊಂದಿಗೆ ನಗೆ ಚಟಾಕಿ ಹಾರಿಸಿ ಗಮನ ಸೆಳೆದರು. ಹಾಸ್ಯದ ಮೂಲಕ ರೋಹಿತ್ ಏಕಾಗ್ರತೆ ಹಾಳು ಮಾಡುವುದು ಟಿಮ್ ಉದ್ದೇಶವಾಗಿದ್ದಂತಿತ್ತು!
ಟೀ ವಿರಾಮದ ಅನಂತರ ನೀವೊಂದು ಸಿಕ್ಸರ್ ಬಾರಿಸಿದರೆ, ಈ ಬಾರಿ ಐಪಿಎಲ್‌ನಲ್ಲಿ ನಾನು ನಿಮ್ಮ ತಂಡವನ್ನೇ ಬದಲಿಸುತ್ತೇನೆ. ರಾಜಸ್ಥಾನ್ ರಾಯಲ್ಸ್ ಬಿಟ್ಟು ಮುಂಬೈ ಇಂಡಿಯನ್ಸ್ ಸೇರಿಕೊಳ್ಳುತ್ತೇನೆಂದು ಪೇನ್ ಹೇಳುತ್ತಿದ್ದರು. ಮತ್ತೂಂದು ಕಡೆ ಸಹ ಆಟಗಾರ ಆರಾನ್ ಫಿಂಚ್‌ಗೂ ಕಿಚಾಯಿಸಿ, ನೀನು ಐಪಿಎಲ್‌ನ ಯಾವ ತಂಡವನ್ನೂ ಬಿಟ್ಟಂತಿಲ್ಲ, ಎಲ್ಲ ತಂಡದಲ್ಲೂ ಆಡಿದ್ದಿ ತಾನೇ ಎಂದರು. ವಿಕೆಟ್ ಹಿಂದುಗಡೆ ಇಷ್ಟೆಲ್ಲ ವಾಗ್ಬಾಣ ತೂರಿ ಬರುತ್ತಿದ್ದರೂ, ರೋಹಿತ್ ನಗುವುದನ್ನು ಬಿಟ್ಟು ಅನ್ಯ ಪ್ರತಿಕ್ರಿಯೆಯನ್ನೇ ಕೊಡಲಿಲ್ಲ!
ಸರಣಿಯಲ್ಲಿ ಪೂಜಾರ ಎರಡನೇ ಶತಕ
17-ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 17 ಶತಕವನ್ನು ಪೂಜಾರ ಬಾರಿಸಿದರು. ಇದರೊಂದಿಗೆ ದಂತಕಥೆ ವಿವಿಎಸ್ ಲಕ್ಷ್ಮಣ್ ಶತಕಗಳ ಸಂಖ್ಯೆಯನ್ನು ಸರಿಗಟ್ಟಿದರು. 16 ಶತಕ ಗಳಿಸಿರುವ ಸೌರವ್ ಗಂಗೂಲಿ ಸಾಧನೆಯನ್ನು ಮೀರಿದರು.322 -ಈ ಸರಣಿಯಲ್ಲಿ ಇದುವರೆಗೆ ಪೂಜಾರ ಗಳಿಸಿದ ರನ್. ಇದು ಈ ಸರಣಿಯಲ್ಲಿ ಎರಡೂ ತಂಡಗಳ ಪರ ದಾಖಲಾದ ಗರಿಷ್ಠ ರನ್.
ಕೊಹ್ಲಿಯೊಂದಿಗೇ ಓಡಲಾಗದೇ ಸುಸ್ತಾದ ಪೂಜಾರ
ಭಾರತ ಟೆಸ್ಟ್ ಕ್ರಿಕೆಟ್ ಕಂಡ ಖ್ಯಾತ ಆಟಗಾರರಲ್ಲಿ ಪೂಜಾರ ಒಬ್ಬರು. ರನ್ ಓಡುವುದರ ಲೆಕ್ಕಾಚಾರಕ್ಕೆ ಬಂದರೆ ಅವರು ಸ್ವಲ್ಪ ಹಿಂದುಳಿಯುತ್ತಾರೆ. ಅದು ಮೆಲ್ಬರ್ನ್ ಟೆಸ್ಟ್ ಪಂದ್ಯದ 2ನೇ ದಿನ ಸಾಬೀತಾಗಿ ಪ್ರೇಕ್ಷಕರಲ್ಲಿ ನಗೆಯುಕ್ಕಲು ಕಾರಣವಾಯಿತು. ಭಾರತ ಇನ್ನಿಂಗ್ಸ್‌ನ 120ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಪ್ಯಾಟ್ ಕಮಿನ್ಸ್ ಎಸೆತವನ್ನು ಬಾರಿಸಿದ ಕೊಹ್ಲಿ ಜಿಂಕೆಯಂತೆ ಓಡಲು ಶುರು ಮಾಡಿದರು. ಚಿಗರೆಯಂತೆ 3 ರನ್ ಓಡಿ, 4ನೇಯದಕ್ಕೆ ಸಿದ್ಧವಾಗುತ್ತಿದ್ದರು. ಅಷ್ಟರಲ್ಲಿ ಪೂಜಾರ 3ನೇ ರನ್‌ಗಾಗಿ ಓಡಲು ಆರಂಭಿಸಿದರಷ್ಟೇ. ತಡವಾಗಿ ಕ್ರೀಸ್ ತಲುಪಿದ ಪೂಜಾರ, ಕೊಹ್ಲಿಗೆ ಸನ್ನೆ ಮಾಡಿ ಬೇಡವೆಂದು ಸೂಚಿಸಿದರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.