ಜವಾಬ್ದಾರಿಯಿಂದ ಆಡಿ: ತರಂಗ
Team Udayavani, Aug 24, 2017, 10:42 AM IST
ಪಲ್ಲೆಕಿಲೆ: ಪ್ರಬಲ ಭಾರತ ತಂಡ ದೆದುರು ಗುರುವಾರ ನಡೆಯುವ ದ್ವಿತೀಯ ಏಕದಿನ ಪಂದ್ಯದಲ್ಲಿ ಜವಾಬ್ದಾರಿಯಿಂದ ಬ್ಯಾಟಿಂಗ್ ನಡೆಸುವಂತೆ ಶ್ರೀಲಂಕಾ ನಾಯಕ ಉಪುಲ್ ತರಂಗ ಅವರು ತನ್ನ ಅಗ್ರ ಕ್ರಮಾಂಕದ ಆಟಗಾರರಿಗೆ ಮನವಿ ಮಾಡಿದ್ದಾರೆ.
ದೊಡ್ಡ ಮೊತ್ತವೊಂದನ್ನು ಪೇರಿಸಬೇಕಾದರೆ ಅಗ್ರ ಕ್ರಮಾಂಕದ ನಾಲ್ವರು ಆಟಗಾರರು ಸಿಡಿ ಯುವ ಅಗತ್ಯವಿದೆ. ಒಬ್ಬರು ಅಥವಾ ಇಬ್ಬರು ದೊಡ್ಡ ಮೊತ್ತ ಗಳಿಸಲೇಬೇಕಾಗಿದೆ. ಇದನ್ನು ನಾವು ಕಳೆದ 10-15 ವರ್ಷ ಗಳಿಂದ ನೋಡುತ್ತ ಬಂದಿದ್ದೇವೆ. ಒಂದು ವೇಳೆ ಆಟಗಾರನೋರ್ವ ಶತಕ ಸಿಡಿಸಿದರೆ ನಾವು 280-300ರ ಒಳ್ಳೆಯ ಮೊತ್ತ ಪೇರಿಸ ಬಹುದು ಎಂದು ತರಂಗ ಹೇಳಿದರು.
ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಒಂದು ಹಂತದಲ್ಲಿ ಒಂದು ವಿಕೆಟಿಗೆ 139 ರನ್ ಪೇರಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಮುಂದಿನ 77 ರನ್ ಪೇರಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡು 216 ರನ್ನಿಗೆ ಸರ್ವಪತನ ಕಂಡಿತ್ತು. ಆಟಗಾರ ಒಮ್ಮೆ ಕ್ರೀಸ್‌ನಲ್ಲಿ ನೆಲೆ ನಿಂತ ಬಳಿಕ ಇನ್ನಿಂಗ್ಸ್ ಪೂರ್ತಿ ಆಡುವುದನ್ನು ನಾನು ನಿರೀಕ್ಷಿಸುತ್ತೇನೆ. ಒಂದು ವೇಳೆ ಆ ಆಟಗಾರ ಇನ್ನಿಂಗ್ಸ್ ಪೂರ್ತಿ ಆಡಿದರೆ ತಂಡ ಒಳ್ಳೆಯ ಮೊತ್ತ ದಾಖಲಿಸಬಹುದು. ಹಿಂದಿನ ಫಲಿ ತಾಂಶ ಗಮನಿಸಿದರೆ ನಾವು ಮೊದಲ 20- 25 ಓವರ್‌ಗಳಲ್ಲಿ ಉತ್ತಮ ಸ್ಥಿತಿಯಲ್ಲಿ ಇರುತ್ತಿದ್ದೆವು. ಅಲ್ಲಿಂದ ನಾವು ಬೇಜವಾ ಬ್ದಾರಿ ಹೊಡೆತಗಳಿಗೆ ಮುಂದಾಗಿ ವಿಕೆಟ್ ಕಳೆದು ಕೊಳ್ಳುತ್ತಿದ್ದೆವು ಎಂದು ತರಂಗ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.