ಪುಣೆ: ಭಾರವೆಲ್ಲ ಭಾರತದ ಮೇಲೆ!


Team Udayavani, Oct 25, 2017, 7:50 AM IST

pune.jpg

ಪುಣೆ: ರವಿವಾರದ ಮುಂಬಯಿ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಕೈಯಲ್ಲಿ ಆಘಾತಕಾರಿ ಸೋಲುಂಡು ತೀವ್ರ ಒತ್ತಡದಲ್ಲಿರುವ ಭಾರತ ತಂಡ ಬುಧವಾರ ಪುಣೆಯಲ್ಲಿ 2ನೇ ಪಂದ್ಯವನ್ನು ಆಡಲಿಳಿಯಲಿದೆ. ಇದು ಕೇವಲ 3 ಪಂದ್ಯಗಳ ಸರಣಿಯಾದ್ದರಿಂದ ಇದನ್ನು ಉಳಿಸಿಕೊಳ್ಳಲು ಕೊಹ್ಲಿ ಪಡೆ ಪ್ರವಾಸಿಗರ ಮೇಲೆ ಪುಣೆಯಲ್ಲೇ ತಿರುಗಿ ಬೀಳುವುದು ಅನಿವಾರ್ಯ. ಇಲ್ಲವಾದರೆ ಸರಣಿ ಸೋಲಿನ ಭಾರೀ ದೊಡ್ಡ ಕಳಂಕ ಭಾರತಕ್ಕೆ ಮೆತ್ತಿಕೊಳ್ಳಲಿದೆ. 

ಮುಂಬಯಿ ಪಂದ್ಯ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಪಾಲಿಗೆ 200ನೇ ಪಂದ್ಯವಾಗಿತ್ತು. ವೈಯಕ್ತಿಕ ಸಾಧನೆಯೊಂದಿಗೆ ಅವರೇನೋ ಇದನ್ನು ಸ್ಮರಣೀಯಗೊಳಿಸಿದರು. ಆದರೆ ಕೊನೆಯಲ್ಲಿ ತಂಡ ಸೋಲುವುದನ್ನು ಕಾಣಬೇಕಾಯಿತು. ಪುಣೆ ಮುಖಾ ಮುಖೀ ಕೂಡ ಸ್ಮರಣೀಯವೇ. ಕಾರಣ, ಇದು ಭಾರತ-ನ್ಯೂಜಿಲ್ಯಾಂಡ್‌ ನಡುವಿನ 100ನೇ ಪಂದ್ಯ!

ಸರಣಿಯ ಆರಂಭಿಕ ಪಂದ್ಯದಲ್ಲಿ ನ್ಯೂಜಿ ಲ್ಯಾಂಡ್‌ ಅಮೋಘ ಪ್ರದರ್ಶನ ನೀಡುತ್ತದೆ, ಭಾರತವನ್ನು ಭಾರೀ ಅಂತರದಿಂದ ಉರುಳಿಸುತ್ತದೆ ಎಂದು ಹೆಚ್ಚಿನವರು ಭಾವಿಸಿರಲಿಲ್ಲ. ಕೆಲವು ದಿನಗಳ ಹಿಂದಷ್ಟೇ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಕ್ಕೆ 4-1 ಸರಣಿ ಸೋಲುಣಿಸಿ ಮೆರೆದಿದ್ದ ಕೊಹ್ಲಿ ಪಡೆ ಕಿವೀಸ್‌ ವಿರುದ್ಧವೂ ನೆಚ್ಚಿನ ತಂಡವಾಗಿತ್ತು. ಆದರೆ ಈ ಅತಿಯಾದ ಆತ್ಮವಿಶ್ವಾಸವೇ ತಂಡದ ಪಾಲಿಗೆ ಮುಳುವಾಯಿತೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ.

ಅಚ್ಚರಿಯ ಬೌಲಿಂಗ್‌ ವೈಫ‌ಲ್ಯ
“ವಾಂಖೇಡೆ’ಯಲ್ಲಿ ಆರಂಭಿಕ ಕುಸಿತಕ್ಕೆ ಸಿಲುಕಿದ ಭಾರತ, ಬಳಿಕ ಕೊಹ್ಲಿ ಶತಕ ಸಾಹಸದಿಂದ 280ರ ತನಕ ಬೆಳೆದಿತ್ತು. ಇದನ್ನು ಧಾರಾಳವಾಗಿ ಉಳಿಸಿಕೊಳ್ಳಬಹುದಿತ್ತು. ಆದರೆ 80 ರನ್ನಿಗೆ 3 ವಿಕೆಟ್‌ ಕಿತ್ತ ಭಾರತಕ್ಕೆ ರಾಸ್‌ ಟಯ್ಲರ್‌-ಟಾಮ್‌ ಲ್ಯಾಥಂ ಜೋಡಿ ಕಬ್ಬಿಣದ ಕಡಲೆಯಾಗಿ ಪರಿಣಮಿಸಿತು. ಈ ಜೋಡಿ ಬೇರ್ಪಡುವಾಗ ಆಗಲೇ ಇತ್ತಂಡಗಳ ಮೊತ್ತ ಸಮನಾಗಿತ್ತು. ಟಯ್ಲರ್‌-ಲ್ಯಾಥಂ 4ನೇ ವಿಕೆಟಿಗೆ 200 ರನ್ನುಗಳ ದಾಖಲೆ ಜತೆಯಾಟ ನಡೆಸಿ ನ್ಯೂಜಿಲ್ಯಾಂಡಿಗೆ ಅಮೋಘ ಜಯವೊಂದನ್ನು ತಂದಿತ್ತರು. 

ಹಾಗೆ ನೋಡಿದರೆ, ಸದ್ಯ ಬ್ಯಾಟಿಂಗಿಗಿಂತ ಭಾರತದ ಬೌಲಿಂಗೇ ಹೆಚ್ಚು ವೈವಿಧ್ಯಮಯ. ವೇಗ, ಸ್ವಿಂಗ್‌, ಸ್ಪಿನ್‌, ಗೂಗ್ಲಿ, ಚೈನಾಮನ್‌… ಹೀಗೆ ಸಾಗುತ್ತದೆ. ಕಾಂಗರೂಗಳನ್ನು ಕೆಡಹುವಲ್ಲಿ ಈ ಬೌಲಿಂಗ್‌ ಪಡೆ ನಿರ್ಣಾಯಕ ಪಾತ್ರ ವಹಿಸಿತ್ತು. ಆದರೆ ಮುಂಬಯಿಯಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಭಾರತದ ಬೌಲಿಂಗ್‌ ಆಟ ನಡೆಯಲಿಲ್ಲ. ಕುಲದೀಪ್‌-ಚಾಹಲ್‌ ಭಾರೀ ದುಬಾರಿಯಾದರು. ಇವರಿಬ್ಬರಿಂದ 115 ರನ್‌ ಸೋರಿ ಹೋಯಿತು. ಟಯ್ಲರ್‌-ಲ್ಯಾಥಂ ಜೋಡಿ ಬೆಳೆಯುತ್ತ ಹೋದಂತೆ ಗೆಲುವು ಭಾರತದಿಂದ ದೂರವಾಗುತ್ತಲೇ ಹೋಯಿತು. ಈ ಸಂದರ್ಭದಲ್ಲಿ ಪಾರ್ಟ್‌ಟೈಮ್‌ ಸ್ಪಿನ್ನರ್‌ ಕೇದಾರ್‌ ಜಾಧವ್‌ ಅವರಿಗೆ ಒಂದೂ ಓವರ್‌ ನೀಡದಿದ್ದುದು ಅಚ್ಚರಿಯಾಗಿ ಕಾಣುತ್ತದೆ.

ಪುಣೆ ಪಂದ್ಯಕ್ಕಾಗಿ ಭಾರತದ ಸ್ಪಿನ್‌ ವಿಭಾಗದಲ್ಲಿ ಬದಲಾವಣೆ ಗೋಚರಿಸೀತೇ ಎಂಬುದೊಂದು ಪ್ರಶ್ನೆ. ಯಾದವ್‌ ಅಥವಾ ಚಾಹಲ್‌ ಬದಲು ಎಡಗೈ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಅವಕಾಶ ಪಡೆಯಲೂಬಹುದು. ಯಾರೇ ಬಂದರೂ ನ್ಯೂಜಿಲ್ಯಾಂಡಿಗೆ ಸ್ಪಿನ್‌ ಭೀತಿ ಹುಟ್ಟಿಸದೆ ಗೆದ್ದು ಬರುವುದು ಕಷ್ಟ!

ಬೇಕಿದೆ ದಿಟ್ಟ ಆರಂಭ
ನ್ಯೂಜಿಲ್ಯಾಂಡಿನ ಬೌಲಿಂಗ್‌ ಕೂಡ ಭಾರತವನ್ನು ಕಟ್ಟಿ ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಮುಖ್ಯ ವಾಗಿ ವೇಗಿ ಟ್ರೆಂಟ್‌ ಬೌಲ್ಟ್ ನಿಖರ ಹಾಗೂ ಘಾತಕ ದಾಳಿ ಸಂಘಟಿಸಿದರು. ಇವರನ್ನು ಎದುರಿಸುವುದು ಧವನ್‌-ರೋಹಿತ್‌ ಜೋಡಿಗೆ ದೊಡ್ಡ ಸಮಸ್ಯೆಯಾಗಿ ಪರಿ ಣಮಿಸಿತು. ಸೌಥಿ 3 ವಿಕೆಟ್‌ ಕಿತ್ತರೂ ದುಬಾರಿಯಾದರು. ಮಿಲೆ° ಕೂಡ ಪರಿಣಾಮ ಬೀರಲಿಲ್ಲ. ಬೌಲ್ಟ್ ದಾಳಿ ಯನ್ನು ಯಶಸ್ವಿಯಾಗಿ ನಿಭಾಯಿಸಿ ಉತ್ತಮ ಆರಂಭ ಕಂಡುಕೊಳ್ಳುವುದು ಭಾರತದ ಯೋಜನೆ ಆಗಬೇಕು. ರೋಹಿತ್‌-ಧವನ್‌, ಇಬ್ಬರಲ್ಲೊಬ್ಬರು ಸಿಡಿಯಲೇಬೇಕು.

ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗಿನ ಶಕ್ತಿ ಸಾಲದು. ಕೇದಾರ್‌ ಜಾಧವ್‌ ಬದಲು ಪಾಂಡೆಯನ್ನು ಆಡಿಸುವ ಬಗ್ಗೆ ಚಿಂತಿಸಲಾಗುತ್ತಿದೆಯಾದರೂ, ಜಾಧವ್‌ಅವರಿಗೆ ಪುಣೆ ತವರು ಅಂಗಳವಾದ್ದರಿಂದ ಅವರನ್ನು ಕೈಬಿಡುವ ಸಾಧ್ಯತೆ ಕಡಿಮೆ. 

ಪುಣೆಯ “ಮಹಾರಾಷ್ಟ್ರ ಕ್ರಿಕೆಟ್‌ ಆಸೋಸಿಯೇಶನ್‌ ಸ್ಟೇಡಿಯಂ’ ದೊಡ್ಡ ಮೊತ್ತಕ್ಕೆ ಹೆಸರುವಾಸಿ. ಇಲ್ಲಿ ಈವರೆಗೆ ಎರಡೇ ಪಂದ್ಯಗಳು ನಡೆದರೂ 3 ಇನ್ನಿಂಗ್ಸ್‌ಗಳಲ್ಲಿ ತಂಡದ ಮೊತ್ತ ಮುನ್ನೂರರ ಆಚೆ ಜಿಗಿದಿದೆ. 2 ಸಲ 350ರ ಗಡಿಯನ್ನೂ ಮುಟ್ಟಿದೆ! 

ಇಲ್ಲಿ ಮೊದಲ ಏಕದಿನ ಪಂದ್ಯ ನಡೆದದ್ದು 2013ರಲ್ಲಿ, ಆಸ್ಟ್ರೇಲಿಯ ವಿರುದ್ಧ. ಇದನ್ನು ಆಸೀಸ್‌ 72 ರನ್ನುಗಳಿಂದ ಗೆದ್ದಿತ್ತು. ಮೊದಲು ಬ್ಯಾಟ್‌ ಮಾಡಿದ ಜಾರ್ಜ್‌ ಬೈಲಿ ಪಡೆ 8ಕ್ಕೆ 304 ರನ್‌ ಗಳಿಸಿದರೆ, ಭಾರತ 232ಕ್ಕೆ ಕುಸಿದಿತ್ತು. ಈ ಫ‌ಲಿತಾಂಶದೊಂದಿಗೆ ಆಸ್ಟ್ರೇಲಿಯ 7 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು.

ಪುಣೆಯ 2ನೇ ಪಂದ್ಯ ಇದೇ ವರ್ಷ ಜ. 15ರಂದು ಇಂಗ್ಲೆಂಡ್‌ ವಿರುದ್ಧ ನಡೆದಿತ್ತು. ಬೃಹತ್‌ ಮೊತ್ತದ ಈ ಮೇಲಾಟದಲ್ಲಿ ಭಾರತ 3 ವಿಕೆಟ್‌ಗೆಲುವು ಒಲಿಸಿಕೊಂಡಿತ್ತು. ಇಂಗ್ಲೆಂಡ್‌ 7ಕ್ಕೆ 350 ರನ್‌ ಪೇರಿಸಿ ಸವಾಲೊಡ್ಡಿದರೆ, ಧೋನಿ ಪಡೆ 48.1 ಓವರ್‌ಗಳಲ್ಲಿ 7 ವಿಕೆಟಿಗೆ 356 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಕೊಹ್ಲಿ 122, ಕೇದಾರ್‌ ಜಾಧವ್‌ 120 ರನ್‌ ಬಾರಿಸಿ ಅಮೋಘ ಗೆಲುವು ತಂದಿತ್ತರು. ಇವರಿಬ್ಬರ 5ನೇ ವಿಕೆಟ್‌ ಜತೆಯಾಟದಲ್ಲಿ ಭರ್ತಿ200 ರನ್‌ ಒಟ್ಟುಗೂಡಿತ್ತು.
ಈ ಸಲವೂ ಇಲ್ಲಿ ರನ್‌ ಹೊಳೆಯೇ ಹರಿಯುವ ನಿರೀಕ್ಷೆ ದಟ್ಟವಾಗಿದೆ.

ಟಾಪ್ ನ್ಯೂಸ್

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.