ಕೊಹ್ಲಿ ಪಡೆ ಪೆವಿಲಿಯನ್ ಪರೇಡ್ : ಆಸೀಸ್ಗೆ 333 ರನ್ ಗೆಲುವು
Team Udayavani, Feb 25, 2017, 12:03 PM IST
ಪುಣೆ : ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ 3 ನೇ ದಿನದಾಟದಲ್ಲೇ ಪ್ರವಾಸಿ ಆಸ್ಟೇಲಿಯ ಭಾರತ ತಂಡದ ಎದುರು 333 ರನ್ ಅಂತರಗಳಿಂದ ಭರ್ಜರಿ ಗೆಲುವು ಸಾಧಿಸಿ ಸಂಭ್ರಮಿಸಿದೆ.
ಗೆಲುವಿಗೆ 441 ರನ್ಗಳ ಗುರಿ ಪಡೆದ ಕೊಹ್ಲಿ ಪಡೆ 2 ನೇ ಇನ್ನಿಂಗ್ಸ್ನಲ್ಲೂ ಪೆವಿಲಿಯನ್ ಪರೇಡ್ ನಡೆಸಿ 107 ರನ್ಗಳಿಗೆ ಆಲೌಟಾಗುವ ಮೂಲಕ ಸೋಲಿಗೆ ಶರಣಾಯಿತು.
ಮೊದಲ ಇನ್ನಿಂಗ್ಸ್ನಲ್ಲಿ ಮಾರಕ ದಾಳಿ ನಡೆಸಿ 6 ವಿಕೆಟ್ ಕಿತ್ತಿದ್ದ ಕಿಫೆ 2 ನೇ ಇನ್ನಿಂಗ್ಸ್ನಲ್ಲೂ 6 ವಿಕೆಟ್ ಕಿತ್ತು ಭಾರತೀಯ ಬ್ಯಾಟ್ಸ್ಮನ್ಗಳಿಗೆ ಸಿಂಹ ಸ್ವಪ್ನರಾದರು.
ಭಾರತದ ಪರ ಗರಿಷ್ಠ ಪೂಜಾರ 31 , ಕೊಹ್ಲಿ 13 , ರೆಹಾನೆ 18 ಮತ್ತು ರಾಹುಲ್ 10 ರನ್ ಹೊರತು ಪಡಿಸಿದರೆ ಉಳಿದ ಯಾವ ಆಟಗಾರರೂ ಒಂದಂಕಿ ದಾಟಲಿಲ್ಲ.
ಎರಡನೇ ಇನ್ನಿಂಗ್ಸ್ ಆಟದಲ್ಲಿ ಆಸ್ಟೇಲಿಯ ತಂಡ ಇಂದು 285 ರನ್ ಗಳಿಗೆ ಆಲೌಟಾಗಿದೆ. ಮೊದಲನೇ ಇನ್ನಿಂಗ್ಸ್ನಲ್ಲಿ ಆಸ್ಟೇಲಿಯ 94.5 ಓವರ್ಗಳಲ್ಲಿ 260 ರನ್ ತೆಗೆದು ಆಲೌಟಾಗಿತ್ತು.
ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಅತ್ಯಂತ ಕಳಪೆಯ ಆಟವಾಡಿ 105 ರನ್ಗಳಿಗೆ ಆಲೌಟಾಗಿತ್ತು.
ಆಸ್ಟೇಲಿಯದ ಎರಡನೇ ಇನ್ನಿಂಗ್ಸ್ನಲ್ಲಿ ಕಪ್ತಾನ ಸ್ಟೀವನ್ ಸ್ಮಿತ್ ಅವರು 109 ರನ್ ಬಾರಿಸಿರುವುದು ಗರಿಷ್ಠ ವೈಯಕ್ತಿಕ ಸ್ಕೋರ್ ಎನಿಸಿತು. ಉಳಿದಂತೆ ಹ್ಯಾನ್ಸ್ಕಾಂಬ್ 19 ರನ್, ಮ್ಯಾಟ್ ರೆನ್ಶಾ 31ರನ್, ಮಿಚೆಲ್ ಮಾರ್ಶ್ 31ರನ್, ಮ್ಯಾಥ್ಯೂ ವೇಡ್ 20 ರನ್, ಮಿಚೆಲ್ ಸ್ಟಾಕ್ರ 30 ರನ್ ಬಾರಿಸಿ ಮಿಂಚಿದರು.
ಭಾರತೀಯ ಎಸೆಗಾರರ ಪೈಕಿ ರವಿಚಂದ್ರನ್ ಅಶ್ವಿನ್ ನಾಲ್ಕು ವಿಕೆಟ್ ಕಿತ್ತರೆ, ರವೀಂದ್ರ ಜಡೇಜ ಮತ್ತು ಉಮೇಶ್ ಯಾದವ್ ತಲಾ 2 ವಿಕೆಟ್ ಕಿತ್ತರು. ಜಯಂತ್ ಯಾದವ್ಗೆ 1 ವಿಕೆಟ್ ದಕ್ಕಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.