ಪುಣೆಗೆ ರಹಾನೆ,ಸ್ಮಿತ್ ನೆರವು:ಮುಂಬೈ ಇಂಡಿಯನ್ಸ್‌ಗೆ 7 ವಿಕೆಟ್ ಸೋಲು
Team Udayavani, Apr 7, 2017, 10:20 AM IST
ಪುಣೆ: ಆರಂಭಿಕ ಆಟಗಾರ ಅಜಿಂಕ್ಯ ರಹಾನೆ ಮತ್ತು ನಾಯಕ ಸ್ಟೀವನ್ ಸ್ಮಿತ್ ಅವರ ಆಕರ್ಷಕ ಅರ್ಧ ಶತಕದಿಂದಾಗಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡವು 10ನೇ ಐಪಿಎಲ್‌ನಲ್ಲಿ ಗೆಲುವಿನೊಂದಿಗೆ ಶುಭಾರಂಭಗೈದಿದೆ. ಗುರುವಾರ ನಡೆದ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಪುಣೆ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು.
ಅಂತಿಮ ಓವರಿನಲ್ಲಿ ಹಾರ್ದಿಕ್ ಪಾಂಡ್ಯ ಸಿಡಿಸಿದ 30 ರನ್ ನೆರವಿನಿಂದ ಮುಂಬೈ ಇಂಡಿಯನ್ಸ್ 8 ವಿಕೆಟಿಗೆ 184 ರನ್ನುಗಳ ಉತ್ತಮ ಮೊತ್ತ ಪೇರಿಸಿದರೆ ಪುಣೆ ತಂಡವು 19.5 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿ ಜಯಭೇರಿ ಬಾರಿಸಿತು. ಅಂತಿಮ ಓವರಿನಲ್ಲಿ ಪುಣೆ ತಂಡಕ್ಕೆ ಗೆಲ್ಲಲು 13 ರನ್ ಬೇಕಾಗಿತ್ತು. ಸ್ಮಿತ್ ಎರಡು ಸಿಕ್ಸರ್ ಬಾರಿಸಿ ಗೆಲುವು ಸಾರಿದರು. 54 ಎಸೆತ ಎದುರಿಸಿದ ಅವರು 7 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 84 ರನ್ ಗಳಿಸಿ ಅಜೇಯರಾಗಿ ಉಳಿದರು.
ಮಯಾಂಕ್ ಅಗರ್ವಾಲ್ ಅವರನ್ನು ಬೇಗನೇ ಕಳೆದುಕೊಂಡರೂ ರಹಾನೆ ಮತ್ತು ಸ್ಮಿತ್ ತಾಳ್ಮೆಯ ಆಟವಾಡಿ ತಂಡವನ್ನು ಆಧರಿಸಿದರು. ದ್ವಿತೀಯ ವಿಕೆಟಿಗೆ 58 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಸುಸ್ಥಿತಿಗೆ ತಲುಪಿಸಿದರು. ಬಿರುಸಿನ ಆಟವಾಡಿದ ರಹಾನೆ 34 ಎಸೆತಗಳಿಂದ 60 ರನ್ ಗಳಿಸಿ ರಾಣ ಹಿಡಿದ ಅಮೋಘ ಕ್ಯಾಚ್‌ಗೆ ಬಲಿಯಾದರು. 6 ಬೌಂಡರಿ ಬಾರಿಸಿದ ಅವರು 3 ಸಿಕ್ಸರ್ ಸಿಡಿಸಿದ್ದರು.
ಈ ಐಪಿಎಲ್‌ನ ದುಬಾರಿ ಆಟಗಾರ ಬೆನ್ ಸ್ಟೋಕ್ಸ್ 21 ರನ್ ಗಳಿಸಲಷ್ಟೇ ಶಕ್ತರಾದರು. ಈ ಮೊದಲು ಇಮ್ರಾನ್ ತಾಹಿರ್ ದಾಳಿಗೆ ಕುಸಿದ ಮುಂಬೈ ತಂಡವು ಮೊದಲ 19 ಓವರ್ ಮುಗಿದಾಗ 7 ವಿಕೆಟಿಗೆ 154 ರನ್ ಗಳಿಸಿತ್ತು. ಆದರೆ ಅಶೋಕ್ ದಿಂಡ ಎಸೆದ ಅಂತಿಮ ಓವರಿನಲ್ಲಿ ಹಾರ್ದಿಕ್ ಪಾಂಡ್ಯ 30 ರನ್ ಸಿಡಿಸಿದ್ದರಿಂದ ಮುಂಬೈ ಮೊತ್ತ 184ಕ್ಕೇರಿತು. ಅಂತಿಮ ಓವರಿನಲ್ಲಿ ಹಾರ್ದಿಕ್ ನಾಲ್ಕು ಸಿಕ್ಸರ್ ಮತ್ತು ಒಂದು ಬೌಂಡರಿ ಸಹಿತ 30 ರನ್ ಚಚ್ಚಿದರು. ಕೇವಲ 15 ಎಸೆತ ಎದುರಿಸಿದ ಹಾರ್ದಿಕ್ 35 ರನ್ ಗಳಿಸಿ ಅಜೇಯರಾಗಿ ಉಳಿದರು.
ಅಶೋಕ್ ದಿಂಡ ಅವರು ಇದೀಗ ಐಪಿಎಲ್ ಕೂಟದ ಅಂತಿಮ ಓವರಿನಲ್ಲಿ ಗರಿಷ್ಠ ರನ್ ನೀಡಿದ ಬೌಲರ್ ಎಂದೆನಿಸಿಕೊಂಡಿದ್ದಾರೆ. ಈ ಹಿಂದೆ ಡೇವಿಡ್ ಹಸ್ಸಿ ಮತ್ತು ರಾಹುಲ್ ಶುಕ್ಲ 27 ರನ್ ಬಿಟಿುrಕೊಟ್ಟಿದ್ದರು. ದಿಂಡ ಈ ಹಿಂದೆ ಎರಡು ಸಲ 26 ರನ್ ಬಿಟ್ಟುಕೊಟ್ಟಿದ್ದರು.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಮುಂಬೈ ಉತ್ತಮ ಆರಂಭ ಪಡೆಯಿತು. ಪಾರ್ಥಿವ್ ಪಟೇಲ್ ಮತ್ತು ಜೋಸ್ ಬಟ್ಲರ್ ಬಿರುಸಿನ ಆಟವಾಡಿ ಮೊದಲ ವಿಕೆಟಿಗೆ 4.2 ಓವರ್‌ಗಳಲ್ಲಿ 45 ರನ್ ಪೇರಿಸಿದರು.
ಸ್ಕೋರ್ ಪಟ್ಟಿ
ಮುಂಬೈ ಇಂಡಿಯನ್ಸ್
ಪಾರ್ಥಿವ್ ಪಟೇಲ್ ಬಿ ಇಮ್ರಾನ್ ತಾಹಿರ್ 19
ಜೋಸ್ ಬಟ್ಲರ್ ಎಲ್‌ಬಿಡಬ್ಲ್ಯು ತಾಹಿರ್ 38
ರೋಹಿತ್ ಶರ್ಮ ಬಿ ಇಮ್ರಾನ್ ತಾಹಿರ್ 3
ನಿತೀಶ್ ರಾಣ ಸಿ ಭಾಟಿಯ ಬಿ ಝಂಪ 34
ಅಂಬಾಟಿ ರಾಯುಡು ಸಿ ಮತ್ತು ಬಿ ಭಾಟಿಯ 10
ಕೃಣಾಲ್ ಪಾಂಡ್ಯ ಸಿ ಧೋನಿ ಬಿ ಭಾಟಿಯ 3
ಕೈರನ್ ಪೋಲಾರ್ಡ್ ಸಿ ಅಗರ್ವಾಲ್ ಬಿ ಸ್ಟೋಕ್ಸ್ 27 ಹಾರ್ದಿಕ್ ಪಾಂಡ್ಯ ಔಟಾಗದೆ 35
ಟಿಮ್ ಸೌಥಿ ರನೌಟ್ 7
ಎಂ. ಮೆಕ್ಲೆನಗನ್ ಔಟಾಗದೆ 0
ಇತರ: 8
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 184
ವಿಕೆಟ್ ಪತನ: 1-45, 2-61, 3-62, 4-92, 5-107, 6-125, 7-146, 8-183
ಬೌಲಿಂಗ್:
ಅಶೋಕ್ ದಿಂಡ 4-0-57-0
ದೀಪಕ್ ಚಾಹರ್ 2-0-21-0
ಬೆನ್ ಸ್ಟೋಕ್ಸ್ 4-0-36-1
ಇಮ್ರಾನ್ ತಾಹಿರ್ 4-0-28-3
ಆ್ಯಡಂ ಝಂಪ 3-0-26-1
ರಜತ್ ಭಾಟಿಯ 3-0-14-2
ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್
ಅಜಿಂಕ್ಯ ರಹಾನೆ ಸಿ ರಾಣ ಬಿ ಸೌಥಿ 60
ಎಂ. ಅಗರ್ವಾಲ್ ಸಿ ಶರ್ಮ ಬಿ ಮೆಕ್ಲೆನಗನ್ 6
ಸ್ಟೀವನ್ ಸ್ಮಿತ್ ಔಟಾಗದೆ 84
ಬೆನ್ ಸ್ಟೋಕ್ಸ್ ಸಿ ಸೌಥಿ ಬಿ ಹಾರ್ದಿಕ್ 21
ಎಂಎಸ್ ಧೋನಿ ಔಟಾಗದೆ 12
ಇತರ: 4
ಒಟ್ಟು (19.5 ಓವರ್‌ಗಳಲ್ಲಿ 3 ವಿಕೆಟಿಗೆ) 187
ವಿಕೆಟ್ ಪತನ: 1-35, 2-93, 3-143
ಬೌಲಿಂಗ್:
ಟಿಮ್ ಸೌಥಿ 4-0-34-1
ಹಾರ್ದಿಕ್ ಪಾಂಡ್ಯ 4-0-36-1
ಮಿಚೆಲ್ ಮೆಕ್ಲೆನಗನ್ 4-0-36-1
ಜಸ್‌ಪ್ರೀತ್ ಬೂಮ್ರಾ 4-0-29-0
ಕೃಣಾಲ್ ಪಾಂಡ್ಯ 2-0-21-0
ಕೈರನ್ ಪೋಲಾರ್ಡ್ 1.5-0-30-0
ಪಂದ್ಯಶ್ರೇಷ್ಠ: ಸ್ಟೀವನ್ ಸ್ಮಿತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.