ಗೆಲುವಿನ ಹುಡುಕಾಟದಲ್ಲಿ ಪಂಜಾಬ್
Team Udayavani, Apr 23, 2021, 6:45 AM IST
ಚೆನ್ನೈ: ಸತತ ಸೋಲಿನಿಂದ ಕಂಗೆಟ್ಟಿರುವ ರಾಹುಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಶುಕ್ರವಾರ ಚೆನ್ನೈಯಲ್ಲಿ ಮಹತ್ವದ ಪಂದ್ಯವನ್ನು ಆಡಲಿವೆ.
ಈಗಾಗಲೇ ಆಡಿದ 4 ಪಂದ್ಯಗಳಲ್ಲಿ ಆರಂಭಿಕ ಗೆಲುವಿನ ಬಳಿಕ ಹ್ಯಾಟ್ರಿಕ್ ಸೋಲಿಗೆ ತುತ್ತಾಗಿರುವ ಪಂಜಾಬ್ ಗೆಲುವಿನ ಹಳಿ ಏರಲೇಬೇಕಾದ ಒತ್ತಡದಲ್ಲಿದೆ. ಇನ್ನೊಂದೆಡೆ ಮುಂಬೈ ಕಳೆದ ಪಂದ್ಯದಲ್ಲಿ ಡೆಲ್ಲಿಗೆ ಶರಣಾಗಿದ್ದು, ಮರಳಿ ಗೆಲುವಿನ ಮುಖ ಕಾಣಲು ಗರಿಷ್ಠ ಪ್ರಯತ್ನ ಮಾಡಬೇಕಿದೆ. ಈ ಎಲ್ಲ ಸೋಲುಗಳಿಗೆ ಒಂದೇ ಕಾರಣ, ಅದು ತಂಡಗಳ ಬ್ಯಾಟಿಂಗ್ ವೈಫಲ್ಯ.
ಸಂಘಟಿತ ಪ್ರದರ್ಶನ ಅಗತ್ಯ :
ರಾಜಸ್ಥಾನ್ ವಿರುದ್ಧ ಕೇವಲ 4 ರನ್ನಿನಿಂದ ಗೆದ್ದದ್ದಷ್ಟೇ ಪಂಜಾಬ್ ಸಾಧನೆ. ಬಳಿಕ ಚೆನ್ನೈ ವಿರುದ್ಧ 106, ಹೈದರಾಬಾದ್ ವಿರುದ್ಧ 120 ರನ್ ಮಾಡಿ ತೀವ್ರ ಬ್ಯಾಟಿಂಗ್ ಬರಗಾಲ ಅನುಭವಿಸಿತ್ತು. ಎಲ್ಲರೆದುರೂ ಎಡವುತ್ತ ಬಂದ ಸನ್‌ರೈಸರ್ ಬುಧವಾರ ಪಂಜಾಬ್‌ಗ ಸೋಲುಣಿಸುವ ಮೂಲಕವೇ ಗೆಲುವಿನ ಖಾತೆ ತೆರೆದುದನ್ನು ಮರೆಯುವಂತಿಲ್ಲ.
ಈ ನಡುವೆ ಡೆಲ್ಲಿ ವಿರುದ್ಧ 195 ರನ್ ಬಾರಿಸಿಯೂ ಇದನ್ನು ಉಳಿಸಿಕೊಳ್ಳಲು ಪಂಜಾಬ್‌ಗ ಸಾಧ್ಯವಾಗಿರಲಿಲ್ಲ. ಮುಂಬೈ ವಿರುದ್ಧ ಈ ಎಲ್ಲ ಸಂಕಟಗಳನ್ನು ನಿಭಾಯಿಸಿ ನಿಲ್ಲಬೇಕಾದ ಒತ್ತಡ ರಾಹುಲ್ ಬಳಗದ ಮೇಲಿದೆ. ಮತ್ತೆ ಸೋತರೆ ತಂಡದ ಮುಂದಿನ ಹಾದಿ ದುರ್ಗಮಗೊಳ್ಳುವುದರಲ್ಲಿ ಅನುಮಾನವಿಲ್ಲ.
ಹಾರ್ದಿಕ್ ಪಾಂಡ್ಯ ವೈಫಲ್ಯ :
ಹಾರ್ದಿಕ್ ಪಾಂಡ್ಯ ಅವರ ಸತತ ವೈಫಲ್ಯವೊಂದೇ ಮುಂಬೈ ತಂಡದ ಪ್ರಮುಖ ಸಮಸ್ಯೆ. ಉಳಿದಂತೆ ಬ್ಯಾಟಿಂಗ್-ಬೌಲಿಂಗ್ ವಿಭಾಗದಲ್ಲಿ ಮುಂಬೈ ಪಂಜಾಬ್‌ಗಿಂತ ಹೆಚ್ಚು ವೈವಿಧ್ಯಮಯವಾಗಿದೆ. ಬೌಲ್ಟ್, ಬುಮ್ರಾ ಡೆತ್ ಓವರ್‌ಗಳ ಮೂಲಕ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.