ಪ್ರಶಸ್ತಿ ಉಳಿಸಿಕೊಳ್ಳಲು ಪಿ. ವಿ. ಸಿಂಧುಗೆ ಸತ್ವಪರೀಕ್ಷೆ
Team Udayavani, Dec 11, 2019, 12:35 AM IST
ಗ್ವಾಂಗ್‌ಝೂ: ಭಾರತದ ಸ್ಟಾರ್ ಶಟ್ಲರ್ ಮತ್ತು ಹಾಲಿ ಚಾಂಪಿ ಯನ್ ಆಗಿರುವ ಪಿ.ವಿ. ಸಿಂಧು ಬುಧವಾರದಿಂದ ಆರಂಭವಾಗುವ ವರ್ಷಾಂತ್ಯದ ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಯನ್ನು ತನ್ನಲ್ಲಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದ ಬಳಿಕ ಹಲವು ಕೂಟಗಳಲ್ಲಿ ಸಿಂಧು ಭಾಗವಹಿಸಿದ್ದರೂ ಗಮನಾರ್ಹ ನಿರ್ವ ಹಣೆ ನೀಡಲು ವಿಫಲರಾಗಿದ್ದರು. ಕಳೆದ ಆಗಸ್ಟ್‌ನಲ್ಲಿ ತನ್ನ ಬಾಳ್ವೆಯ ಮಹೋನ್ನತ ಸಾಧನೆ ಮಾಡಿದ ಬಳಿಕ ಸಿಂಧು ಕೊರಿಯ, ಚೀನ ಓಪನ್‌ನ ಮೊದಲ ಸುತ್ತಿನಲ್ಲಿ ಮುಗ್ಗರಿಸಿದ್ದರೆ ಮೂರು ಪ್ರಮುಖ ಕೂಟಗಳಲ್ಲಿ ದ್ವಿತೀಯ ಸುತ್ತಿನಲ್ಲಿ ಸೋತಿದ್ದರು. ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ ಸಾಧನೆ ಮಾಡಿದ್ದರು. ಹೀಗಾಗಿ ಸಿಂಧು ಅವರಿಗೆ ಈ ಕೂಟ ನಿಜವಾಗಿಯೂ ಸತ್ವಪರೀಕ್ಷೆಯಾಗಿದೆ ಮಾತ್ರವಲ್ಲದೇ ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್‌ನಲ್ಲಿ ಪದಕ ಗೆಲ್ಲುವ ಭರವಸೆಯನ್ನು ಮೂಡಿಸುವ ನಿಟ್ಟಿನಲ್ಲಿ ಈ ಕೂಟ ಮಹತ್ವದ್ದಾಗಿದೆ.
ಬ್ಯಾಡ್ಮಿಂಟನ್ ರ್‍ಯಾಂಕಿಂಗ್‌ನ ಅಗ್ರ 8 ಮಂದಿ ಮಾತ್ರ ಈ ಕೂಟದಲ್ಲಿ ಭಾಗವಹಿ ಸಲಿದ್ದಾರೆ. ಸಿಂಧು 15ನೇ ರ್‍ಯಾಂಕ್ ಹೊಂದಿದ್ದರೂ ವಿಶ್ವ ಚಾಂಪಿಯನ್ ಆಗಿರುವ ಕಾರಣ ವನಿತಾ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. “ಎ’ ಬಣದಲ್ಲಿರುವ ಸಿಂಧು ಅವರು ಚೀನದ ಚೆನ್ ಯು ಫೀ, ಹಿ ಬಿಂಗ್ ಜಿಯೊ ಮತ್ತು ಜಪಾನಿನ ಯಮಗುಚಿ ಜತೆ ಸ್ಪರ್ಧಿಸಲಿದ್ದಾರೆ.
ಜಪಾನಿನ ಅಕಾನೆ ಯಮಗುಚಿ ಅವರನ್ನು ಎದರಿಸುವ ಮೂಲಕ ಸಿಂಧು ತನ್ನ ಅಭಿಯಾನ ಆರಂಭಿಸಲಿದ್ದಾರೆ. ಗಾಯದ ಸಮಸ್ಯೆಗೆ ಸಿಲುಕುವ ಮೊದಲು ಇಂಡೋನೇಶ್ಯ ಮತ್ತು ಜಪಾನ್ ಓಪನ್ ಕೂಟದ ಪ್ರಶಸ್ತಿ ಗೆದ್ದಿದ್ದ ಯಮಗುಚಿ ಆಬಳಿಕ ನಾಲ್ಕು ಕೂಟಗಳಲ್ಲಿ ಮೊದಲ ಸುತ್ತಿನಲ್ಲಿ ಸೋತಿದ್ದರು. ಆದರೆ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್ ತಲುಪುವ ಮೂಲಕ ಮತ್ತೆ ಫಾರ್ಮ್ಗೆ ಮರಳಿರುವ ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.