ಕೊರಿಯಾ ಕಿರೀಟ ಧರಿಸಿದ ಸಿಂಧು


Team Udayavani, Sep 18, 2017, 6:00 AM IST

AP9_17_2017_000025B.jpg

ಸಿಯೋಲ್‌: ರಿಯೋ ಬೆಳ್ಳಿ ತಾರೆ ಪಿ.ವಿ. ಸಿಂಧು ಕೊರಿಯಾದಲ್ಲಿ ಭಾರತದ ಬ್ಯಾಡ್ಮಿಂಟನ್‌ ಧ್ವಜವನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆ. ಜಪಾನಿನ ನಜೊಮಿ ಒಕುಹರಾ ಅವರನ್ನು ತೀವ್ರ ಪೈಪೋಟಿಯ ಸ್ಪರ್ಧೆಯಲ್ಲಿ ಹಿಮ್ಮೆಟ್ಟಿಸುವ ಮೂಲಕ “ಕೊರಿಯಾ ಸೂಪರ್‌ ಸಿರೀಸ್‌ ಬ್ಯಾಡ್ಮಿಂಟನ್‌ ಟೂರ್ನಿ’ಯ ವನಿತಾ ಸಿಂಗಲ್ಸ್‌ ಕಿರೀಟವನ್ನು ಧರಿಸಿದ್ದಾರೆ.

ಉಸಿರು ಬಿಗಿ ಹಿಡಿಸುವಂತೆ ಮಾಡಿದ ರವಿವಾರದ ಅತ್ಯಂತ ರೋಮಾಂಚಕಾರಿ ಹಣಾಹಣಿಯಲ್ಲಿ ಸಿಂಧು 22-20, 11-21, 20-18 ಅಂತರದಿಂದ 8ನೇ ಶ್ರೇಯಾಂಕದ ಒಕುಹರಾ ಅವರನ್ನು ಮಣಿಸಿದರು. 20 ದಿನಗಳ ಹಿಂದಷ್ಟೇ ಗ್ಲಾಸೊYàದಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡರು. ಕೊರಿಯಾ ಸೂಪರ್‌ ಸಿರೀಸ್‌ನಲ್ಲಿ ಚಾಂಪಿಯನ್‌ ಎನಿಸಿಕೊಂಡ ಭಾರತದ ಪ್ರಥಮ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಶ್ರೇಷ್ಠ ಬ್ಯಾಡ್ಮಿಂಟನ್‌ ಫೈನಲ್‌
ಫೈನಲ್‌ ಪಂದ್ಯವೊಂದು ಎಷ್ಟು ತೀವ್ರತೆ ಪಡೆದುಕೊಳ್ಳಬೇಕು, ಎಷ್ಟೊಂದು ಪೈಪೋಟಿಯಿಂದ ಕೂಡಿರಬೇಕು, ವೀಕ್ಷಕರನ್ನು ಅಂತಿಮ ಕ್ಷಣದ ತನಕ ಹೇಗೆ ತುದಿಗಾಲಲ್ಲಿ ನಿಲ್ಲಿಸಬೇಕು, ಆಟಗಾರ್ತಿಯರ ಅನುಭವ-ವೃತ್ತಿಪರತೆ ಹೇಗೆ ಪರಸ್ಪರ ಮೇಳೈಸಬೇಕು ಎಂಬೆಲ್ಲ ಕ್ರೀಡಾಸೂತ್ರಗಳಿಗೆ ಸಿಂಧು-ಒಕುಹರಾ ನಡುವಿನ ಪ್ರಶಸ್ತಿ ಸಮರ ಸುಂದರ ಸಾಕ್ಷ್ಯ ಒದಗಿಸಿತು. ಬ್ಯಾಡ್ಮಿಂಟನ್‌ ಚರಿತ್ರೆಯ ಶ್ರೇಷ್ಠ ಫೈನಲ್‌ಗ‌ಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಈ ಪಂದ್ಯದ್ದಾಯಿತು.

ಇದು ಯಾರೂ ಗೆಲ್ಲಬಹುದಾಗಿದ್ದ ಪಂದ್ಯವಾಗಿತ್ತಾದರೂ ಜಪಾನಿ ಆಟಗಾರ್ತಿಗೆ ಒಂದಿಷ್ಟು ಹೆಚ್ಚಿನ ಅವಕಾಶವಿದ್ದುದು ಸುಳ್ಳಲ್ಲ. ಆದರೆ ಸಿಂಧು ಸಾಮರ್ಥ್ಯ, ಸಾಹಸ ಮತ್ತು ಅದೃಷ್ಟದ ಮುಂದೆ ಒಕುಹರಾ ಪ್ರಶಸ್ತಿ ವಂಚಿತರಾಗಬೇಕಾಯಿತು. ದೃಢ ನಿಶ್ಚಯ ಹಾಗೂ ಹಿನ್ನಡೆಯಲ್ಲೂ ಜಗ್ಗದಿದ್ದುದು ಸಿಂಧು ಗೆಲುವಿನ ಗುಟ್ಟು ಎನ್ನಲಡ್ಡಿಯಿಲ್ಲ.

ಇದು ಕೂಡ ಗ್ಲಾಸೊYàದ ಥ್ರಿಲ್ಲಿಂಗ್‌ ಗೇಮ್‌ನ ಪುನರಾವರ್ತನೆ ಆಗಿತ್ತು. ಅಲ್ಲಿ ಇವರಿಬ್ಬರ ಹೋರಾಟ ಒಂದು ಗಂಟೆ, 50 ನಿಮಿಷಗಳ ಕಾಲ ಸಾಗಿದರೆ, ಇಲ್ಲಿ ಒಂದು ಗಂಟೆ, 23 ನಿಮಿಷಗಳಲ್ಲಿ ಮುಗಿಯಿತು. ಇದರೊಂದಿಗೆ ಸಿಂಧು-ಒಕುಹರಾ ನಡುವಿನ ಈವರೆಗಿನ 8 ಪಂದ್ಯಗಳ ಫ‌ಲಿತಾಂಶ 4-4 ಸಮಬಲಕ್ಕೆ ಬಂತು.

ಇದು ಸಿಂಧು ವೃತ್ತಿ ಜೀವನದ 3ನೇ ಸೂಪರ್‌ ಸಿರೀಸ್‌ ಗೆಲುವು. 2016ರ ಚೀನ ಸೂಪರ್‌ ಸಿರೀಸ್‌ ಪ್ರೀಮಿಯರ್‌, ಇಂಡಿಯಾ ಸೂಪರ್‌ ಸಿರೀಸ್‌ ಪ್ರಶಸ್ತಿಗಳು ಈಗಾಗಲೇ ಸಿಂಧು ಪಾಲಾಗಿವೆ.

ಜಿದ್ದಾಜಿದ್ದಿ ಹಣಾಹಣಿ
ಸಿಂಧು-ಒಕುಹರಾ ನಡುವೆ ಸಾಗಿದ್ದು 3 ಗೇಮ್‌ಗಳ ಜಿದ್ದಾಜಿದ್ದಿ ಕಾದಾಟ. ಸಿಂಧು ಮೊದಲ ಹಾಗೂ 3ನೇ ಗೇಮ್‌ಗಳಲ್ಲಿ ಮೇಲುಗೈ ಸಾಧಿಸಿದ್ದು ಕೇವಲ ಎರಡೇ ಅಂಕಗಳ ಅಂತರದಲ್ಲಿ. ಆದರೆ ಒಕುಹರಾ 2ನೇ ಗೇಮನ್ನು ಭರ್ಜರಿ 10 ಅಂಕಗಳ ಅಂತರದಿಂದ ವಶಪಡಿಸಿಕೊಂಡಿದ್ದರು. ಸ್ವಲ್ಪವೇ ಎಚ್ಚರ ತಪ್ಪಿದರೂ ಸಿಂಧು ಪ್ರಶಸ್ತಿ ವಂಚಿತರಾಗುತ್ತಿದ್ದರು.
ಮೊದಲ ಗೇಮ್‌ನಲ್ಲಿ ಸಿಂಧು 2-0, 5-3ರ ಮುನ್ನಡೆ ಸಾಧಿಸಿದರು. ಆದರೆ ತಿರುಗಿ ಬಿದ್ದ ಒಕುಹರಾ ಸತತ 4 ಅಂಗ ಗಳಿಸಿ 9-7ರ ಲೀಡ್‌ ಗಳಿಸಿದರು. 9-9ರಲ್ಲಿ ಮತ್ತೆ ಸಮಬಲ ಕಂಡಿತು. ಎದುರಾಳಿ 11-9ರಿಂದ ಮುಂದುವರಿದಾಗ ಆಕ್ರಮಣಕಾರಿ ರ್ಯಾಲಿ ಹಾಗೂ ಹೆಡ್‌ ಸ್ಮ್ಯಾಶ್‌ ಮೂಲಕ ಸಿಂಧು ಸ್ಪರ್ಧೆಯೊಡ್ಡಿದರು. 15-14ರ ಸಣ್ಣ ಲೀಡ್‌ ಕೂಡ ಲಭಿಸಿತು. ಬಳಿಕ ಇಬ್ಬರೂ ರೋಚಕ ರ್ಯಾಲಿ ಮೂಲಕ ಪಟ್ಟು ಸಡಿಲಿಸದೆ ನಿಂತರು. ಸ್ಲರ್ಧೆ 17-17ಕ್ಕೆ ಬಂತು.

ಈ ಹಂತದಲ್ಲಿ ರಿಟರ್ನ್ ಹಾಗೂ 2 ಗೇಮ್‌ ಪಾಯಿಂಟ್‌ ಅವಕಾಶವನ್ನು ಸಿಂಧು ಕೈಚೆಲ್ಲಿದರು. ಒಕುಹರಾ ಅವರ ಬ್ಯಾಕ್‌ಹ್ಯಾಂಡ್‌ ಫ್ಲಿಕ್‌ ಒಂದು ವೈಡ್‌ ಆಗಿ ಹೋಗುವುದರೊಂದಿಗೆ 20-20ರ ರೋಚಕತೆ ಸೃಷ್ಟಿಯಾಯಿತು. ಅನಂತರದ ಕ್ಷಣದಲ್ಲಿ ನಗುವ ಸರದಿ ಸಿಂಧು ಅವರದ್ದಾಯಿತು.

ಒಕುಹರಾ ತಿರುಗೇಟು
ದ್ವಿತೀಯ ಗೇಮ್‌ನಲ್ಲಿ ಒಕುಹರಾ ಅವರದು ಭರ್ಜರಿ ತಿರುಗೇಟು. ವಿರಾಮದ ಅವಧಿಯ 11-6 ಮುನ್ನಡೆಯೇ ಇದರ ಕತೆಯನ್ನು ಹೇಳುತ್ತದೆ. ಸ್ಟ್ರೋಕ್‌ ವೈಫ‌ಲ್ಯ ಸಿಂಧು ಹಿನ್ನಡೆಗೆ ಕಾರಣವಾಯಿತು.

ನಿರ್ಣಾಯಕ ಗೇಮ್‌ನಲ್ಲಿ ಸಿಂಧು ಶೋ ಮುಂದುವರಿಯಿತು. ವಿರಾಮದ ಹೊತ್ತಿಗೆ 11-5 ಲೀಡ್‌ ಗಳಿಸಿದ ಸಿಂಧು ಗೆಲುವಿನತ್ತ ನಾಗಾಲೋಟಗೈದರು. ಆದರೆ ಇಲ್ಲಿಂದ ಮುಂದೆ ಜಪಾನಿ ಆಟಗಾರ್ತಿ ಜಬರ್ದಸ್ತ್ ಹೋರಾಟವೊಂದನ್ನು ಸಂಘಟಿಸಿದರೂ ಹಿನ್ನಡೆಯನ್ನು ಕಡಿಮೆಗೊಳಿಸಲಷ್ಟೇ ಇದರಿಂದ ಸಾಧ್ಯವಾಯಿತು. ಭಾರತೀಯಳ ರ್ಯಾಲಿ ರಭಸಕ್ಕೆ ಗೆಲುವಿನ ಕಾಣಿಕೆ ಒಲಿದು ಬಂತು.

ಪ್ರಧಾನಿ ಮೋದಿ ಅಭಿನಂದನೆ
ಪಿ.ವಿ. ಸಿಂಧು ಅವರ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

“ಕೊರಿಯಾ ಓಪನ್‌ ಸೂಪರ್‌ ಸಿರೀಸ್‌ನಲ್ಲಿ ಗೆದ್ದು ಬಂದ ಪಿ.ವಿ. ಸಿಂಧು ಅವರಿಗೆ ಅಭಿನಂದನೆಗಳು. ಅವರ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ’ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ರಾಜವರ್ಧನ ಸಿಂಗ್‌ ರಾಥೋಡ್‌, ಬಿಗ್‌ ಬಿ ಅಮಿತಾಭ್‌ ಬಚ್ಚನ್‌, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಸಹಿತ ದೇಶದ ಕ್ರೀಡಾಭಿಮಾನಿಗಳು ಸಿಂಧು ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಿ, ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ರಾಜ್ಯದ ಹೆಮ್ಮೆಯ ಕ್ರೀಡಾ ಸಾಧಕಿಯ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. “ಪಿ.ವಿ. ಸಿಂಧು ಭವಿಷ್ಯದಲ್ಲಿ ದೇಶ ಹಾಗೂ ರಾಜ್ಯಕ್ಕೆ ಇನ್ನಷ್ಟು ವಿಜಯಮಾಲೆಯನ್ನು ತೊಡಿಸಲಿ’ ಎಂದು ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಟ್ವೀಟ್ಸ್‌
ಎಂಥ ಅದ್ಭುತ ಆಟ. ಅಭಿನಂದನೆಗಳು. ನಿಮ್ಮ ಸಾಧನೆಗೆ ಭಾರತವೇ ಹೆಮ್ಮೆಪಡುತ್ತಿದೆ. ಗೆಲುವಿನ ಓಟ ಮುಂದುವರಿಯುಯತ್ತಿರಲಿ…
-ರಾಜವರ್ಧನ ಸಿಂಗ್‌ ರಾಥೋಡ್‌

ನಿಮ್ಮ ಪ್ರಯತ್ನ, ನಿಮ್ಮ ವೈಫ‌ಲ್ಯ, ನಿಮ್ಮ ನಂಬಿಕೆ… ಕೊನೆಗೂ ನೀವದನ್ನು ಸಾಧಿಸಿದಿರಿ. ಇದು ಸಾಟಿಯಿಲ್ಲದ ಗೆಲುವು. ಕಂಗ್ರಾಟ್ಸ್‌.
-ಸಚಿನ್‌ ತೆಂಡುಲ್ಕರ್‌

ಮತ್ರೊಮ್ಮೆ ತ್ರಿವರ್ಣ ಧ್ವಜ ಹಾರಿಸಿದ್ದಕ್ಕೆ ಅಭಿನಂದನೆಗಳು. ಎಂಥ ಅಮೋಘ ಗೆಲುವು!
-ಎನ್‌. ಚಂದ್ರಬಾಬು ನಾಯ್ಡು

22ರ ಹರೆಯದಲ್ಲೇ ಪುಸರ್ಲ ವೆಂಕಟ ಸಿಂಧು ಲೆಜೆಂಡ್‌ ಆಗಿದ್ದಾರೆ. ಎಂಥ ಆಟಗಾರ್ತಿ! ರೋಚಕ ಫೈನಲ್‌ ಗೆಲುವಿಗೆ ಕಂಗ್ರಾಟ್ಸ್‌. ಉಸಿರು ಬಿಗಿಹಿಡಿಯುವಂತೆ ಮಾಡಿದ ಬ್ಯಾಡ್ಮಿಂಟನ್‌!
-ವೀರೇಂದ್ರ ಸೆಹವಾಗ್‌

ಯಾಆಆಆಆ…. ಆಕೆ ಇದನ್ನು ಸಾಧಿಸಿಯೇ ಬಿಟ್ಟಳು! ಪಿ.ವಿ. ಸಿಂಧು ಕೊರಿಯಾ ಓಪನ್‌ ಗೆದ್ದೇ ಬಿಟ್ಟರು. ಈ ಸಾಧನೆಗೈದ ಮೊದಲ ಭಾರತೀಯ ಆಟಗಾರ್ತಿ. ಸ್ವೀಟ್‌ ರಿವೆಂಜ್‌!
-ಅಮಿತಾಭ್‌ ಬಚ್ಚನ್‌

ತಾನಿಲ್ಲಿ ಗೆಲ್ಲುತ್ತೇನೆಂಬ ನಂಬಿಕೆ ಅವರಲ್ಲಿತ್ತು. ಹೀಗಾಗಿ ಗೆದ್ದರು. ಕಂಗ್ರಾಟ್ಸ್‌ ಸಿಂಧು. ಕೊರಿಯಾ ಓಪನ್‌ ಗೆದ್ದ ಮೊದಲ ಭಾರತೀಯ ಸಾಧಕಿ…
-ವಿಜೇಂದರ್‌ ಸಿಂಗ್‌

ನಿಮ್ಮ ಅದ್ಭುತ ಗೆಲುವಿಗೆ ಅಭಿನಂದನೆಗಳು. ನಮ್ಮನ್ನೆಲ್ಲ ಹೆಮ್ಮೆ ಪಡುವಂತೆ ಮಾಡಿದ್ದೀರಿ…
-ಮಾನ್ವೀರ್‌ ಗುರ್ಜಾರ್‌

ವೀರೋಚಿತ ಹೋರಾಟಕ್ಕೆ ಸಂದ ಗೆಲುವು. ಅಭಿನಂದನೆಗಳು.
-ವಿನೇಶ್‌ ಪೋಗಟ್‌

ಕೊರಿಯಾ ಓಪನ್‌ ಗೆದ್ದ ಭಾರತದ ಮೊದಲ ಸಾಧಕಿ. ವಾಟ್‌ ಎ ಚಾಂಪಿಯನ್‌!
-ಮೊಹಮ್ಮದ್‌ ಕೈಫ್

ವಿಶ್ವ ಚಾಂಪಿಯನ್‌ ಒಕುಹರಾ ಅವರನ್ನು ಮಣಿಸಿದ್ದಕ್ಕಾಗಿ, ಸಿಂಧು ನಿಮಗೊಂದು ಸಲಾಂ!
-ಹಿಮಂತ್‌ ವಿಶ್ವ ಶರ್ಮ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.