ಬ್ಯಾಡ್ಮಿಂಟನ್ : ಸಿಂಧು,ಸಾತ್ವಿಕ್-ಚಿರಾಗ್ ಕ್ವಾರ್ಟರ್ ಫೈನಲ್ಗೆ: ಸೈನಾಗೆ ಸೋಲು
Team Udayavani, Apr 29, 2022, 6:55 AM IST
ಮನಿಲಾ (ಫಿಲಿಪ್ಪೀನ್ಸ್): ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಮತ್ತೋರ್ವ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ಪರಾಭವಗೊಂಡಿದ್ದಾರೆ.
ಪಿ.ವಿ. ಸಿಂಧು ಸಿಂಗಾಪುರದ ಕೆಳ ಕ್ರಮಾಂಕದ ಆಟಗಾರ್ತಿ, ವಿಶ್ವ ರ್ಯಾಂಕಿಂಗ್ನಲ್ಲಿ 100ನೇ ಸ್ಥಾನದಲ್ಲಿರುವ ಯೆ ಯಾನ್ ಜಾಸ್ಲಿನ್ ಹೂಯಿ ಅವರನ್ನು 21-16, 21-16 ಅಂತರದಿಂದ ಮಣಿಸಿದರು. ಇವರ ಕ್ವಾರ್ಟರ್ ಫೈನಲ್ ಎದುರಾಳಿ ಚೀನದ 3ನೇ ಶ್ರೇಯಾಂಕದ ಆಟಗಾರ್ತಿ ಹೆ ಬಿನ್ ಜಿಯಾವೊ.
ಕಳೆದ ಟೋಕಿಯೊ ಒಲಿಂಪಿಕ್ಸ್ ಕಂಚಿನ ಹೋರಾಟದಲ್ಲಿ ಜಿಯಾವೊ ವಿರುದ್ಧ ಸಿಂಧು ಜಯ ಸಾಧಿಸಿದ್ದರು. ಆದರೆ ಸಿಂಧು ವಿರುದ್ಧ ಜಿಯಾವೊ 9-7ರ ಮುನ್ನಡೆ ಹೊಂದಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿ ಜಪಾನ್ನ ಅಕಿರ ಕೋಗ-ತೈಚಿ ಸೈಟೊ ವಿರುದ್ಧ 21-17, 21-15 ಅಂತರದ ಗೆಲುವು ಒಲಿಸಿಕೊಂಡರು.
ಈ ಕೂಟದಲ್ಲಿ 4ನೇ ಪದಕ ಗೆಲ್ಲುವ ಸೈನಾ ನೆಹ್ವಾಲ್ ಕನಸು ಚೀನದ ವಾಂಗ್ ಜಿ ಯಿ ಅವರಿಂದ ಭಗ್ನಗೊಂಡಿತು. ವಿಶ್ವದ 16ನೇ ರ್ಯಾಂಕಿಂಗ್ ಆಟಗಾರ್ತಿಯಾಗಿರುವ ವಾಂಗ್ ಜಿ ಯಿ 12-21, 21-17, 21-13ರಿಂದ ಸೈನಾಗೆ ಸೋಲುಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Squash event: ಭಾರತದ ಅನಾಹತ್,ಮಲೇಷ್ಯಾದ ಚಂದರನ್ ಚಾಂಪಿಯನ್
Pro Kabaddi: ಬೆಂಗಳೂರು ಬುಲ್ಸ್ ಗೆ 18ನೇ ಸೋಲು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.