ಮಲೇಷ್ಯಾ ಬ್ಯಾಡ್ಮಿಂಟನ್: ಸಿಂಧು, ಅಶ್ಮಿತಾ ಕ್ವಾರ್ಟರ್‌ಫೈನಲಿಗೆ
Team Udayavani, May 23, 2024, 9:50 PM IST
ಕೌಲಾಲಂಪುರ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಸೋಲಿನ ದವಡೆಯಿಂದ ಪಾರಾಗಿ ಬಂದು ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್ ಕೂಟದ ಕ್ವಾರ್ಟರ್ ಫೈನಲ್ ಹಂತಕ್ಕೇರಿದ್ದಾರೆ.
ಇದೇ ವೇಳೆ ಅದ್ಭುತ ಆಟದ ಪ್ರದರ್ಶನ ನೀಡಿದ ಅಶ್ಮಿತಾ ಚಲಿಹಾ ಅವರು ಮೂರನೇ ಶ್ರೇಯಾಂಕದ ಅಮೆರಿಕದ ಬೈವೆನ್ ಝಾಂಗ್ ಅವರನ್ನು ಅಚ್ಚರಿಯ ರೀತಿಯಲ್ಲಿ ಸೋಲಿಸಿ ಕ್ವಾರ್ಟರ್‌ಫೈನಲ್‌ಗೇರಿದ್ದಾರೆ. ವಿಶ್ವದ 15ನೇ ರ್‍ಯಾಂಕಿನ ಸಿಂಧು ಕೊರಿಯದ ಸಿಮ್ ಯು ಜಿನ್ ಅವರನ್ನು 21-13, 12-21, 21-14 ಗೇಮ್‌ಗಳಿಂದ ಉರುಳಿಸಿ ಮುನ್ನಡೆದರು.
ಅವರು ವಿಶ್ವದ 34ನೇ ರ್‍ಯಾಂಕಿನ ಸಿಮ್ ಅವರನ್ನು ಮೂರನೇ ಬಾರಿ ಸೋಲಿಸಿದ ಸಾಧನೆ ಮಾಡಿದರು. ಐದನೇ ಶ್ರೇಯಾಂಕದ ಸಿಂಧು ಮುಂದಿನ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಹಾನ್ ಯುಯಿ ಅವರ ಸವಾಲನ್ನು ಎದುರಿಸಲಿದ್ದಾರೆ.
ಇದು ಸಿಂಧು ಪಾಲಿಗೆ ಸೇಡಿನ ಪಂದ್ಯವಾಗಿದೆ. ಸಿಂಧು ಮತ್ತು ಹಾನ್ ಕಳೆದ ತಿಂಗಳು ನಡೆದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು ಹಾನ್ ಜಯ ಸಾಧಿಸಿದ್ದರು.
2022ರಲ್ಲಿ ಈ ಹಿಂದೆ ಪ್ರಶಸ್ತಿ (ಸಿಂಗಾಪುರ ಓಪನ್) ಜಯಿಸಿದ್ದ ಸಿಂಧು ಅವರು ಹಾನ್ ಜತೆ ಇಷ್ಟರವರೆಗೆ ಆರು ಬಾರಿ ಮುಖಾಮುಖಿಯಾಗಿದ್ದು 5 ಗೆಲುವು ಒಂದು ಸೋಲಿನ ದಾಖಲೆ ಹೊಂದಿದ್ದಾರೆ.
ಅಮೋಘ ಜಯ:
ಇದೇ ವೇಳೆ 24ರ ಹರೆಯದ ಅಸ್ಮಿತಾ ಮೂರನೇ ಶ್ರೇಯಾಂಕದ ಝಾಂಗ್ ಅವರನ್ನು 21-19, 16-21, 21-12 ಗೇಮ್‌ಗಳಿಂದ ಉರುಳಿಸಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದರು. ಸೂಪರ್ 500 ಕೂಟದಲ್ಲಿ ಅವರು ಎರಡನೇ ಬಾರಿ ಕ್ವಾರ್ಟರ್‌ಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ. 2022ರ ಇಂಡಿಯಾ ಓಪನ್‌ನಲ್ಲಿ ಅವರು ಅಂತಿಮ ಎಂಟರ ಸುತ್ತಿಗೇರಿದ್ದರು. ಮುಂದಿನ ಸುತ್ತಿನಲ್ಲಿ ಅವರು ಆರನೇ ಶ್ರೇಯಾಂಕದ ಚೀನದ ಝಾಂಗ್ ಯಿ ಮಾನ್ ಅವರನ್ನು ಎದುರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.