ಆಂಧ್ರ ಪ್ರದೇಶ: ಜಿಲ್ಲಾಧಿಕಾರಿಯಾಗಿ ಪಿ ವಿ ಸಿಂಧು ಅಧಿಕಾರ ಸ್ವೀಕಾರ
Team Udayavani, Aug 10, 2017, 11:29 AM IST
ಹೊಸದಿಲ್ಲಿ : ಭಾರತದ ಮುಂಚೂಣಿಯ ಶಟಲ್ ಬ್ಯಾಡ್ಮಿಂಟನ್ ಆಟಗಾತಿ, ಒಲಿಂಪಿಕ್ ಪದಕ ವಿಜೇತೆ, ಪಿ ವಿ ಸಿಂಧು ಆಂಧ್ರ ಪ್ರದೇಶ ಸರಕಾರದಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಸಿಂಧು ಅವರಿಗೆ ಕಳೆದ ಜು.27ರಂದೇ ಜಿಲ್ಲಾಧಿಕಾರಿಯಾಗಿ ಅಧಿಕೃತ ನೇಮಕಾತಿ ಪತ್ರವನ್ನು ನೀಡಲಾಗಿತ್ತು. ಆದರೆ ಆಕೆ ನಿನ್ನೆ ಬುಧವಾರ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡರು.
ಭೂ ಆಡಳಿತೆಯ ಮುಖ್ಯ ಆಯುಕ್ತರಾಗಿರುವ ಅನಿಲ್ ಚಂದ್ರ ಪುನೇತ ಅವರಿಗೆ ಪಿ ವಿ ಸಿಂಧು ತಮ್ಮ ನೇಮಕಾತಿ ಪತ್ರವನ್ನು ಸಲ್ಲಿಸಿ ಗ್ರೂಪ್ 1 ಸರಕಾರಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಸರಕಾರಿ ಆಡಳಿತೆಯಲ್ಲಿನ ತಮ್ಮ ಹೊಸ ಪಾತ್ರವನ್ನು ಆರಂಭಿಸಿದರು.
ಒಲಿಂಪಿಕ್ ಬ್ಯಾಡ್ಮಿಂಟನ್ ರಜತ ಪದಕ ವಿಜೇತೆಯಾಗಿರುವ ಸಿಂಧು ಅವರು ಗೊಲ್ಲಪುಡಿಯಲ್ಲಿನ ಸರಕಾರಿ ಸಚಿವಾಲಯದಲ್ಲಿ ಅಧಿಕಾರ ಸ್ವೀಕರಿಸಿದರು.
ಸಿಂಧು ಅವರ ತನ್ನ ಹೆತ್ತವರೊಡಗೂಡಿ ಸರಕಾರದ ಭೂ ಆಡಳಿತೆಯ ಮುಖ್ಯ ಆಯುಕ್ತರ ಕಚೇರಿಗೆ ತೆರಳಿ ಅಲ್ಲಿ ಅಧಿಕಾರ ಗ್ರಹಣ ಮಾಡಿದರು.
ಜಿಲ್ಲಾಧಿಕಾರಿಯಾಗಿ ಸರಕಾರದಿಂದ ನೇಮಕಾತಿ ಪತ್ರವನ್ನು ಸ್ವೀಕರಿಸಿದ ಸಂದರ್ಭದಲ್ಲೇ ಸಿಂಧು ಅವರು “ನನ್ನ ಆದ್ಯತೆ ಏನಿದ್ದರೂ ಅದು ಕ್ರೀಡೆಗೇ’ ಎಂದು ಹೇಳಿದ್ದರು. 30 ದಿನಗಳ ಒಳಗಾಗಿ ಜಿಲ್ಲಾಧಿಕಾರಿ ಹುದ್ದೆಯನ್ನು ವಹಿಸಿಕೊಳ್ಳುವಂತೆ ಸರಕಾರ ಸಿಂಧುಗೆ ಸೂಚಿಸಿದೆ.
ಎರಡು ಬಾರಿಯ ಕಂಚಿನ ಪದಕ ವಿಜೇತೆಯಾಗಿರುವ ಸಿಂಧು ಅವರು ಪ್ರಕೃತ, ಆಗಸ್ಟ್ 21ರಿಂದ ಸ್ಕಾಟ್ಲಂಡ್‌ನ ಗ್ಲ್ಯಾಸ್ಗೋ ದಲ್ಲಿ ನಡೆಯಲಿರುವ ವಿಶ್ವ ಚಾಂಪ್ಯನ್‌ಶಿಪ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.