ಚಿನ್ನ ಎತ್ತಿದ ಮೀರಾಬಾಯಿ ಚಾನು
ಕತಾರ್ ಇಂಟರ್‌ನ್ಯಾಶನಲ್ ಕಪ್ ವೇಟ್‌ಲಿಫ್ಟಿಂಗ್
Team Udayavani, Dec 20, 2019, 11:15 PM IST
ದೋಹಾ (ಕತಾರ್): ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು 6ನೇ “ಕತಾರ್ ಇಂಟರ್‌ನ್ಯಾಶನಲ್ ಕಪ್ ವೇಟ್‌ಲಿಫ್ಟಿಂಗ್’ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದು ಭಾರತದ ಖಾತೆ ತೆರೆದಿದ್ದಾರೆ. ವನಿತೆಯರ 49 ಕೆಜಿ ವಿಭಾಗದಲ್ಲಿ ಅವರು ಈ ಸಾಧನೆಗೈದರು.
ಒಟ್ಟು 194 ಕೆಜಿ ಭಾರವನ್ನೆತ್ತಿದ 25ರ ಹರೆಯದ ಮೀರಾಬಾಯಿ ಚಾನು ಬಂಗಾರಕ್ಕೆ ಕೊರಳೊಡ್ಡಿದರು. ಅವರು ಸ್ನ್ಯಾಚ್‌ನಲ್ಲಿ 83 ಕೆಜಿ, ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 111 ಕೆಜಿ ಭಾರತವೆತ್ತಿದರು. ಫ್ರಾನ್ಸ್‌ನ ಅನೈಸ್ ಮೈಕೆಲ್ ಬೆಳ್ಳಿ (172 ಕೆಜಿ) ಮತ್ತು ಮಾನನ್ ಲೊರೆಂಜ್ ಕಂಚು ಗೆದ್ದರು (165 ಕೆಜಿ).
ಆದರೆ ಇದು ಚಾನು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಗಿಂತ ಕಡಿಮೆ ಮಟ್ಟದ್ದಾಗಿತ್ತು. ಇದೇ ವರ್ಷ ಥಾಯ್ಲೆಂಡ್‌ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್ಸ್‌ನಲ್ಲಿ ಅವರು 201 ಕೆಜಿ ಭಾರವೆತ್ತಿದ್ದು ಅತ್ಯುತ್ತಮ ಪ್ರದರ್ಶನವಾಗಿದೆ.
ಒಲಿಂಪಿಕ್ಸ್ ಅರ್ಹತೆ
ಮೀರಾಬಾಯಿ ಚಾನು ಅವರ ಶುಕ್ರವಾರದ ಸಾಧನೆ ಒಲಿಂಪಿಕ್ಸ್ ಅರ್ಹತಾ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಮೀಸಲಾದ ಸ್ಪರ್ಧೆಯಾಗಿತ್ತು.ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕಾದರೆ ವೇಟ್‌ಲಿಫ್ಟರ್‌ಗಳು 6 ತಿಂಗಳ ಅವಧಿಯಲ್ಲಿ ನಡೆಯುವ (ನ. 2018ರಿಂದ ಎ. 2020) ಒಟ್ಟು 6 ಕೂಟಗಳಲ್ಲಿ ಪಾಲ್ಗೊಳ್ಳಬೇಕು ಹಾಗೂ ಒಂದು ಚಿನ್ನ, ಒಂದು ಬೆಳ್ಳಿ ಪದಕ ಗೆಲ್ಲಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.