ಕತಾರ್ ಓಪನ್ ಒಸ್ಟಾಪೆಂಕೊ ಗೆಲುವಿನ ಆರಂಭ
Team Udayavani, Feb 14, 2019, 12:45 AM IST
ದೋಹಾ: ಮಾಜಿ ಫ್ರೆಂಚ್ ಓಪನ್ ಚಾಂಪಿಯನ್, ಲಾಟ್ವಿಯಾದ ಜೆಲೆನಾ ಒಸ್ಟಾಪೆಂಕೊ ಹಾಗೂ ನೆದರ್ಲ್ಯಾಂಡ್ನ ಕಿಕಿ ಬರ್ಟೆನ್ಸ್ “ಕತಾರ್ ಓಪನ್’ ಕೂಟದ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ್ದಾರೆ.
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಒಸ್ಟಾಪೆಂಕೊ ರೊಮೇನಿಯದ ಮಿಹೆಲಾ ಬುಜರ್ನೆಸ್ಕಾ ಅವರನ್ನು 6-1, 4-6, 6-2 ಸೆಟ್ಗಳಿಂದ ಸೋಲಿಸಿದರು.
2018ರ ಕೂಟದಲ್ಲಿ ದ್ವಿತೀಯ ಸುತ್ತಿನಲ್ಲಿ ಬುಜರ್ನೆಸ್ಕಾ ವಿರುದ್ಧ ಸೋತಿದ್ದ ಒಸ್ಟಾಪೆಂಕೊ, ಈ ಬಾರಿ ಸೇಡು ತೀರಿಸಿಕೊಂಡರು. ದ್ವಿತೀಯ ಸುತ್ತಿನಲ್ಲಿ ಒಸ್ಟಾಪೆಂಕೊ ಎದುರಾಳಿ ವಿಶ್ವದ 7ನೇ ರ್ಯಾಂಕಿಂಗ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ.
ಬರ್ಟೆನ್ಸ್ಗೆ ಕಠಿನ ಗೆಲುವು
5ನೇ ಶ್ರೇಯಾಂಕಿತೆ ಕಿಕಿ ಬರ್ಟೆನ್ಸ್ ಇಟಲಿಯ ಕ್ಯಾಮಿಲಾ ಜಾರ್ಜಿ ವಿರುದ್ಧ 0-6, 7-6 (9-7), 6-4 ಸೆಟ್ಗಳಿಂದ ಗೆದ್ದರು. ಮೊದಲ ಸೆಟ್ನಲ್ಲಿ ಕಿಕಿ ಬರ್ಟೆನ್ಸ್ಗೆ ಒಂದೂ ಅಂಕ ಒಲಿದಿರಲಿಲ್ಲ. ದ್ವಿತೀಯ ಸೆಟ್ ಟೈ ಬ್ರೇಕರ್ಗೆ ವಿಸ್ತರಣೆಗೊಂಡಿತು. ಇದನ್ನು ಬರ್ಟೆನ್ಸ್ ತಮ್ಮದಾಗಿಸಿಕೊಂಡರು. ಅದೃಷ್ಟವನ್ನು ಒಲಿಸಿಕೊಂಡರು. ಮುಂದಿನ ಪಂದ್ಯದಲ್ಲಿ ಅವರು 2016ರ ಚಾಂಪಿಯನ್ ಕಾರ್ಲಾ ಸೂರೆಜ್ ನವಾರೊ ವಿರುದ್ಧ ಆಡಲಿದ್ದಾರೆ.
ಸೆವಸ್ತೋವಾ,ಸ್ಟೋಸರ್ ಔಟ್
7ನೇ ಶ್ರೇಯಾಂಕಿತೆ ಅನಾಸ್ತಾಸಿಜಾ ಸೆವಸ್ತೋವಾ ಮೊದಲ ಸುತ್ತಿನಲ್ಲೇ ಅಘಾತ ಅನುಭವಿಸಿ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಅವರು ಅರ್ಹತಾ ಆಟಗಾರ್ತಿ, ರಶ್ಯದ ಅನ್ನಾ ಬ್ಲಿಂಕೋವಾ ವಿರುದ್ಧ 6-7 (5-7), 4-6 ಅಂತರದಿಂದ ಪರಭಾವಗೊಂಡರು.
ಕೂಟದಿಂದ ಹಿಂದೆ ಸರಿದ ಕ್ಯಾರೋಲಿನ್ ವೋಜ್ನಿಯಾಕಿ ಬದಲಿಗೆ ಅವಕಾಶ ಪಡೆದ ಆಸ್ಟ್ರೇಲಿಯದ ಸ್ಯಾಮ್ ಸ್ಟೋಸರ್ ಮೊದಲ ಪಂದ್ಯದಲ್ಲೇ ಅರ್ಹತಾ ಆಟಗಾರ್ತಿ, ಜೆಕ್ ಗಣರಾಜ್ಯದ ಕ್ಯಾರೋಲಿನಾ ಮುಖೋವಾ ವಿರುದ್ಧ 4-6, 2-6ರಿಂದ ಸೋತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
MUST WATCH
ಹೊಸ ಸೇರ್ಪಡೆ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್ಟಿ ಕಡಿತ?
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.